ವಿಶ್ವಕಪ್ ಇಲ್ಲಿ ನಡೆದಿದ್ದರೆ ಭಾರತ ಗೆಲ್ಲುತ್ತಿತ್ತು: ಮಮತಾ ಬ್ಯಾನರ್ಜಿ ಲೇವಡಿ

Mamata Banerjee : ಅಹಮದಾಬಾದ್ ಬದಲಿಗೆ ಕೋಲ್ಕತ್ತಾ ಅಥವಾ ಮುಂಬೈನಲ್ಲಿ ವಿಶ್ವಕಪ್ ಫೈನಲ್ ನಡೆದಿದ್ದರೆ ಭಾರತ ಗೆಲ್ಲುತ್ತಿತ್ತೇ? ಈ ರೀತಿಯ ವಿಚಾರದ ಬಗ್ಗೆ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾತನಾಡಿದ್ದಾರೆ. 

Written by - Chetana Devarmani | Last Updated : Nov 23, 2023, 05:35 PM IST
  • ವಿಶ್ವಕಪ್ ಇಲ್ಲಿ ನಡೆದಿದ್ದರೆ ಭಾರತ ಗೆಲ್ಲುತ್ತಿತ್ತು
  • ವಿಶ್ವಕಪ್ ಸೋಲಿನ ಬಗ್ಗೆ ಮಮತಾ ಬ್ಯಾನರ್ಜಿ ಹೇಳಿಕೆ
  • ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
ವಿಶ್ವಕಪ್ ಇಲ್ಲಿ ನಡೆದಿದ್ದರೆ ಭಾರತ ಗೆಲ್ಲುತ್ತಿತ್ತು: ಮಮತಾ ಬ್ಯಾನರ್ಜಿ ಲೇವಡಿ  title=
Mamata Banerjee

Mamta Banerjee on World Cup: ರಾಜಕೀಯ ಪಕ್ಷಗಳು ಒಬ್ಬರನ್ನೊಬ್ಬರು ಕೆಣಕುತ್ತಲೇ ಇರುತ್ತವೆ. 2023ರ ವಿಶ್ವಕಪ್‌ನಲ್ಲಿ ಭಾರತದ ಸೋಲು ಇದೀಗ ರಾಜಕೀಯ ತಿರುವುಗಳನ್ನು ಪಡೆಯುತ್ತಿದೆ. 

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿಶ್ವಕಪ್ ಕ್ರಿಕೆಟ್ ನ ಫೈನಲ್ ಪಂದ್ಯ ಕೋಲ್ಕತ್ತಾ ಅಥವಾ ಮುಂಬೈನಲ್ಲಿ ನಡೆದಿದ್ದರೆ ಭಾರತದ ಗೆಲುವು ಖಚಿತವಾಗುತ್ತಿತ್ತು ಎಂದು ಮಮತಾ ಬ್ಯಾನರ್ಜಿ ಹೇಳಿದರು. ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್‌ ಫೈನಲ್ ಪಂದ್ಯ ನಡೆದಿತ್ತು. 

ಇದನ್ನೂ ಓದಿ : ಸಲಿಂಗ ವಿವಾಹ ನಿರಾಕರಿಸಿದ ಸುಪ್ರೀಂ ಕೋರ್ಟ್: ಐವರು ನ್ಯಾಯಾಧೀಶರ ಸರ್ವಾನುಮತ ತೀರ್ಪು! 

ಮಮತಾ ಬ್ಯಾನರ್ಜಿ‌ ಇದೇ ವೇಳೆ ಕೇಸರಿ ಜೆರ್ಸಿಯ ಬಗ್ಗೆಯೂ ಪ್ರಸ್ತಾಪಿಸಿದರು. ಭಾರತ ತಂಡವು ಕೇಸರಿ ಬಣ್ಣದ ಜೆರ್ಸಿಯನ್ನು ಧರಿಸಬೇಕಾಗಿಲ್ಲ. ಬಿಜೆಪಿ ಎಲ್ಲವನ್ನೂ ರಾಜಕೀಯ ಲೆನ್ಸ್ ಮೂಲಕ ಮೌಲ್ಯಮಾಪನ ಮಾಡುತ್ತದೆ. ಅದರ ನಕಾರಾತ್ಮಕ ಪರಿಣಾಮವೂ ಗೋಚರಿಸುತ್ತದೆ ಎಂದು ಮಮತಾ ಹೇಳಿದರು. 

ಅಭ್ಯಾಸದ ವೇಳೆ ಟೀಂ ಇಂಡಿಯಾ ಧರಿಸಿದ್ದ ಜೆರ್ಸಿ ಬಗ್ಗೆ ಮಮತಾ ಬ್ಯಾನರ್ಜಿ ಪ್ರಶ್ನೆಗಳನ್ನು ಎತ್ತಿದ್ದರು. ಆಟಗಾರರು ಕೇಸರಿ ಬಣ್ಣದ ಜರ್ಸಿಯನ್ನು ಏಕೆ ಧರಿಸಿದ್ದರು ಎಂಬುದು ಅರ್ಥವಾಗುತ್ತಿಲ್ಲ, ಇದಕ್ಕೆ ಬಿಜೆಪಿ ಹೊಣೆ ಎಂದು ಅವರು ಹೇಳಿದ್ದಾರೆ. ಬಿಜೆಪಿಯ ಜನ ಎಲ್ಲವನ್ನೂ ಕೇಸರಿಮಯಗೊಳಿಸಲು ಮುಂದಾಗಿದ್ದಾರೆ ಎಂದು ಮಮತಾ ಹೇಳಿದ್ದಾರೆ.

ಇದನ್ನೂ ಓದಿ : ಸಹಾರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ವಿಧಿವಶ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News