ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಬೆಂಗಾಲಿ ಬಲ್ಲವರಿಗೆ ಆದ್ಯತೆ: ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

‎ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal CM Mamata Banerjee) ಅವರು ಗುರುವಾರ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಬೆಂಗಾಲಿ ಬಲ್ಲವರಿಗೆ ಆದ್ಯತೆ ನೀಡಲಾಗುವುದು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

Edited by - Zee Kannada News Desk | Last Updated : Dec 9, 2021, 05:13 PM IST
  • ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಬೆಂಗಾಲಿ ಬಲ್ಲವರಿಗೆ ಆದ್ಯತೆ
  • ಚರ್ಚೆಗೆ ಗ್ರಾಸವಾದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ
ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಬೆಂಗಾಲಿ ಬಲ್ಲವರಿಗೆ ಆದ್ಯತೆ: ಬಂಗಾಳ ಸಿಎಂ ಮಮತಾ ಬ್ಯಾನರ್ಜಿ title=
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕೊಲ್ಕಾತಾ:‎ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (West Bengal CM Mamata Banerjee) ಅವರು ಗುರುವಾರ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಬೆಂಗಾಲಿ ಬಲ್ಲವರಿಗೆ ಆದ್ಯತೆ ನೀಡಲಾಗುವುದು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಬುಧವಾರ ಮಾಲ್ಡಾ ಜಿಲ್ಲೆಯಲ್ಲಿ ಆಡಳಿತಾತ್ಮಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ (Mamata Banerjee), ಬಂಗಾಳದಲ್ಲಿ ನೆಲೆಸಿರುವವರು ಅಂತಹ ಉದ್ಯೋಗಗಳಿಗೆ ಆದ್ಯತೆ ಪಡೆಯಬೇಕು.  ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಬೆಂಗಾಲಿ ಬಲ್ಲವರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: KSRTCಯಲ್ಲಿ 4,600ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅನುಮತಿ ಕೋರಿ ಮನವಿ

ನಾನು ಇದನ್ನು ಎಲ್ಲ ರಾಜ್ಯಗಳಿಗೂ ಹೇಳುತ್ತಿದ್ದೇನೆ. ಬಂಗಾಳದಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳಿಗೆ, ಬಂಗಾಳದ ನಿವಾಸಿಗಳು ಆದ್ಯತೆಯನ್ನು ಪಡೆಯಬೇಕು. ನೀವು ಬೆಂಗಾಲಿ ಭಾಷೆಯನ್ನು ತಿಳಿದಿರಬೇಕು ಮತ್ತು ಬಂಗಾಳದ ನಿವಾಸಿಯಾಗಿರಬೇಕು ಎಂದು ಬ್ಯಾನರ್ಜಿ ಹೇಳಿದರು.

ಬಿಹಾರ ಅಥವಾ ಯುಪಿಯಲ್ಲಿ ವಾಸಿಸುವವರಿಗೆ ಇದು ಅನ್ವಯಿಸಬಹುದು. ಇಲ್ಲವಾದರೆ, ಅಲ್ಲಿನ ಜನರು ಸ್ಥಳೀಯ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಎಲ್ಲಾ ರಾಜ್ಯ ಸರ್ಕಾರ ನಿವಾಸಿಗಳಿಗೆ ಅಲ್ಲಿ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದು ಹೇಳಿದರು.

 

 

ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ಜನಸಂಖ್ಯೆಗೆ ಸರ್ಕಾರಿ ಉದ್ಯೋಗಗಳನ್ನು ಖಾತ್ರಿಪಡಿಸಲು ಹೆಚ್ಚುತ್ತಿರುವ ಬೇಡಿಕೆಯ ಬೆನ್ನಲ್ಲೇ ಬ್ಯಾನರ್ಜಿಯವರ ಘೋಷಣೆ ಮಹತ್ವದ್ದಾಗಿದೆ. ಅಲ್ಲದೇ ಇದು ಹಲವು ಚರ್ಚೆಗಳಿಗೆ ಕಾರಣವಾಗಿದೆ. 

Trending News