ಏಕಕಾಲಕ್ಕೆ ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ WhatsApp ಖಾತೆ ನಿರ್ವಹಿಸಬೇಕೆ? ಇಲ್ಲಿದೆ ಟ್ರಿಕ್...

ವಿಶ್ವದ ಖ್ಯಾತ ಮೆಸೇಜಿಂಗ್ ಆಪ್ WhatsApp ಶೀಘ್ರದಲ್ಲಿಯೇ ತನ್ನ ಬಳಕೆದಾರರಿಗೆ ಮಲ್ಟಿಪಲ್ ಡಿವೈಸ್ ಸಪೋರ್ಟ್ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಆದರೆ ಅದಕ್ಕೂ ಮೊದಲು ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ ವಾಟ್ಸ್ ಆಪ್ ಖಾತೆಯನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

Last Updated : Apr 2, 2020, 01:28 PM IST
ಏಕಕಾಲಕ್ಕೆ ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ WhatsApp ಖಾತೆ ನಿರ್ವಹಿಸಬೇಕೆ? ಇಲ್ಲಿದೆ ಟ್ರಿಕ್... title=

ನವದೆಹಲಿ: ಪ್ರಪಂಚದ ಖ್ಯಾತ ಇನ್ಸ್ಟೆಂಟ್ ಮೆಸ್ಸೇಜಿಂಗ್ ಆಪ್ ವಾಟ್ಸ್ ಆಪ್ ಮಲ್ಟಿಪಲ್ ಡಿವೈಸ್ ಸಪೋರ್ಟ್ ಮೇಲೆ ಸದ್ಯ ತನ್ನ ಗಮನ ಕೇಂದ್ರೀಕರಿಸಿದೆ. ಈ ವೈಶಿಷ್ಟ್ಯ ಅಂದುಕೊಂಡಂತೆ ಜಾರಿಯಾದರೆ ಬಳಕೆದಾರರು ಎರಡು ಸ್ಮಾರ್ಟ್ ಫೋನ್ ಗಳ ಮೇಲೆ ಒಂದೇ ವಾಟ್ಸ್ ಆಪ್ ಖಾತೆಯನ್ನು ನಿರ್ವಹಿಸಬಹುದಾಗಿದೆ. ಸದ್ಯ ಈ ವೈಶಿಷ್ಟ್ಯ ಕೇವಲ ಅಂಡ್ರಾಯಿಡ್ ಬಳಕೆದಾರರಿಗೆ ಮಾತ್ರ ಲಭಿಸಲಿದ್ದು, ಶೀಘ್ರವೇ ಇತರೆ ಆಪರೇಟಿಂಗ್ ಸಿಸ್ಟಮ್ ಮೇಲೆ ಕಾರ್ಯನಿರ್ವಹಿಸುವ ಡಿವೈಸ್ ಗಳಿಗೂ ಕೂಡ ಬಿಡುಗಡೆಗೊಲಿಸಲಾಗುತ್ತಿದೆ.

ಫೇಸ್ ಬುಕ್ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸ್ ಆಪ್ ನ ಈ ವೈಶಿಷ್ಟ್ಯ ಯಾವಾಗ ಬಿಡುಗಡಯಾಗಲಿದೆ ಎಂಬುದರ ಕುರಿತು ಇನ್ನೂ ಖಚಿತ ವರದಿಗಳು ಪ್ರಕಟವಾಗಿಲ್ಲ. ಆದರೆ, ಒಂದು ವೇಳೆ ಇದರ ಬಿಡುಗಡೆಗೆ ನೀವು ಕಾಯಲು ಸಾಧ್ಯವಿಲ್ಲ, ಮತ್ತು ಎರಡು ಸ್ಮಾರ್ಟ್ ಫೋನ್ ಗಳಲ್ಲಿ ಒಂದೇ ವಾಟ್ಸ್ ಆಪ್ ಖಾತೆಯನ್ನು ನಿರ್ವಹಿಸಲು ಬಯಸುತ್ತಿದ್ದರೆ, ಇದಕ್ಕಾಗಿ ಒಂದು ಟ್ರಿಕ್ ಇದೆ. ಇದಕ್ಕಾಗಿ ಗೂಗಲ್ ಪ್ಲೇ ಸ್ಟೋರ್ ನಿಂದ ನೀವು ಥರ್ಡ್ ಪಾರ್ಟಿ ಆಪ್ ಆಗಿರುವ Whatsscan Pro ಆಪ್ ಡೌನ್ ಲೋಡ್ ಮಾಡಬೇಕು.

Whatscan Pro ಈ ಆಪ್ ಕೇವಲ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮಾತ್ರ ಲಭ್ಯವಿದೆ. ಅಂದರೆ, ಈ ಫೋನ್ iPhoneನಲ್ಲಿ ಕಾರ್ಯನಿರ್ವಹಿಸುವುದಿಲ್ಲ ಹಾಗೂ ಕೇವಲ ಅಂಡ್ ರಾಯಿಡ್ ಬಳಕೆದಾರರು ಮಾತ್ರ ಇದನ್ನು ಬಳಸಬಹುದಾಗಿದೆ.

ಎರಡು ಸ್ಮಾರ್ಟ್ ಫೋನ್ ಗಳ ಮೇಲೆ ಒಂದೇ ವಾಟ್ಸ್ ಆಪ್ ಖಾತೆ ನಿರ್ವಹಿಸುವುದು ಹೇಗೆ ?

- ಒಂದು ವೇಳೆ ನೀವು ಎರಡು ಸ್ಮಾರ್ಟ್ ಫೋನ್ ಬಳಸುತ್ತಿದ್ದು, ಎರಡೂ ಸ್ಮಾರ್ಟ್ ಫೋನ್ ಗಳ ಮೇಲೆ ಒಂದೇ ವಾಟ್ಸ್ ಆಪ್ ನಿರ್ವಹಿಸಲು ಬಯಸುತ್ತಿದ್ದರೆ, ನಿಮ್ಮ ಸೆಕೆಂಡರಿ ಫೋನ್ ಮೇಲೆ ಮೊದಲು Whatscan Pro ಆಪ್ ಡೌನ್ ಲೋಡ್ ಮಾಡಿ. ಬಳಿಕ ಫೋನ್ ಅನ್ನು Wi-Fi ಕಲ್ಪಿಸಿ.

- ಬಳಿಕ ಆಪ್ ನ ಸ್ಟಾರ್ಟ್ ನೌ ಆಪ್ಶನ್ ಮೇಲೆ ಕ್ಲಿಕ್ಕಿಸಿ. ಜಾಹೀರಾತುಗಳಿಗಾಗಿ ಕೆಲ ನಿಮಿಷಗಳು ನೀವು ಕಾಯಬೇಕು.
- ಈ ಆಪ್ ಹಲವು ಆಪ್ಶನ್ ಗಳಿರುವ ಒಂದು ಪುಟಕ್ಕೆ ಕರೆದುಕೊಂಡು ಹೋಗಲಿದೆ. ಅಲ್ಲಿರುವ Whatscan Pro ಆಪ್ಶನ್ ಮೇಲೆ ಕ್ಲಿಕ್ಕಿಸಿ,.

- ಇದರಿಂದ QR ಕೋಡ್ ಬಳಸುವ WhatsApp ವೆಬ್ ನಂತೆ ಒಂದು ಪುಟ ತೆರೆದುಕೊಳ್ಳಲಿದೆ.

- ಈಗ ನೀವು ನಿಮ್ಮ ಪ್ರೈಮರಿ ಫೋನ್ ನಲ್ಲಿರುವ WhatsAppನ ಸೆಟ್ಟಿಂಗ್ಸ್ ಗೆ ಭೇಟಿ ನೀಡಿ.

- ಬಳಿಕ ಅದನ್ನು QR ಕೋಡ್ ಸ್ಕ್ಯಾನ್ ಮಾಡಲು ಸೆಕೆಂಡರಿ ಸ್ಮಾರ್ಟ್ ಫೋನ್ ಮೇಲೆ ಹಿಡಿಯಿರಿ. 

- QR ಕೋಡ್ ಸ್ಕ್ಯಾನ್ ಮಾಡಿದ ಬಳಿಕ ನೇಉ ನಿಮ್ಮ ಪ್ರೈಮರಿ ಫೋನ್ ವಾಟ್ಸ್ ಆಪ್ ಖಾತೆಯನ್ನು ನಿಮ್ಮ ಸೆಕೆಂಡರಿ ಫೋನ್ ಮೂಲಕ ಕೂಡ ನಿರ್ವಹಿಸಬಹುದು.
 

Trending News