Earthquake: ನೇಪಾಳದಲ್ಲಿ ಕಂಪಿಸಿದ ಭೂಮಿ, ಬಿಹಾರದ ಹಲವು ಜಿಲ್ಲೆಗಳಲ್ಲಿಯೂ ಕೂಡ ಭೂಕಂಪದ ಅನುಭವ

ಬಿಹಾರದಲ್ಲಿ ಬುಧವಾರ ಬೆಳಗ್ಗೆ ನೇಪಾಳಕ್ಕೆ ಹೊಂದಿಕೊಂಡಂತೆ ಇರುವ ಜಿಲ್ಲೆಗಳಲ್ಲಿ ಭೂಕಂಪ ಸಂಭವಿಸಿದೆ. ಬಿಹಾರದ ಸಹರ್ಸಾ, ಪೂರ್ವ ಚಂಪಾರಣ್, ಮುಜಫ್ಫರ್ ಪುರ್ ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದೆ. ಬೆಳಗಿನ ಜಾವ ಸುಮಾರು 5.04ಕ್ಕೆ ಸಂಭವಿಸಿದೆ ಎನ್ನಲಾದ ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.3 ರಷ್ಟಿತ್ತು ಎನ್ನಲಾಗಿದೆ.

Last Updated : Sep 16, 2020, 09:30 AM IST
  • ನೇಪಾಳಕ್ಕೆ ಹೊಂದಿಕೊಂಡಂತೆ ಇರುವ ಬಿಹಾರದ ಜಿಲ್ಲೆಗಳಲ್ಲಿ ಕಂಪಿಸಿದೆ ಭೂಮಿ
  • ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲು
  • ಕಟ್ಮಂಡುವಿನ ಬಳಿ ಸುಮಾರು 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು.
Earthquake: ನೇಪಾಳದಲ್ಲಿ ಕಂಪಿಸಿದ ಭೂಮಿ, ಬಿಹಾರದ ಹಲವು ಜಿಲ್ಲೆಗಳಲ್ಲಿಯೂ ಕೂಡ ಭೂಕಂಪದ ಅನುಭವ  title=

ಪಟ್ನಾ: ಬಿಹಾರದಲ್ಲಿ ಬುಧವಾರ ಬೆಳಗ್ಗೆ ನೇಪಾಳಕ್ಕೆ ಹೊಂದಿಕೊಂಡಂತೆ ಇರುವ ಜಿಲ್ಲೆಗಳಲ್ಲಿ ಭೂಕಂಪ (Earthquake) ಸಂಭವಿಸಿದೆ. ಬಿಹಾರದ ಸಹರ್ಸಾ, ಪೂರ್ವ ಚಂಪಾರಣ್, ಮುಜಫ್ಫರ್ ಪುರ್ ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದೆ. ಬೆಳಗಿನ ಜಾವ ಸುಮಾರು 5.04ಕ್ಕೆ ಸಂಭವಿಸಿದೆ ಎನ್ನಲಾದ ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.3 ರಷ್ಟಿತ್ತು ಎನ್ನಲಾಗಿದೆ. ನೇಪಾಲದ ರಾಜಧಾನಿ ಕಟ್ಮಂಡುವಿನ ಬಳಿ ಸುಮಾರು 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿದೆ ಎನ್ನಲಾಗಿದೆ. ಆದರೆ, ಇದುವರೆಗೆ ಯಾವುದೇ ರೀತಿಯ ಪ್ರಾಣಹಾನಿಯಾದ ಕುರಿತು ವರದಿಯಾಗಿಲ್ಲ. ಈ ಕುರಿತು ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಬರೆದುಕೊಂಡಿರುವ ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ, " ಪಾಲ್ ನ ಸಿಂಧುಪಲ್ ಚೌಕ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸುಮಾರು 5.19 ರ ಸುಮಾರಿಗೆ 6.0 ತೀವ್ರತೆಯ ಭೂಕಂಪ ಸಂಭವಿಸಿದೆ. ನೇಪಾಳದ ಪೂರ್ವ ಭಾಗದಲ್ಲಿ ಈ ಭೂಕಂಪದ ತೀವ್ರತೆಯನ್ನು ಅನುಭವಿಸಲಾಗಿದೆ" ಎಂದಿದೆ.

ಈ ಕುರಿತು ಮಾಹಿತಿ ನೀಡಿರುವ ಸಿಂಧುಪಲ್ ಚೌಕ್ ಎಸ್.ಪಿ, "ನಾವು ಮೊದಲಿನಿಂದಲೂ ಕೂಡ ಎಲ್ಲ ವಾರ್ಡ್ ಗಳ ಸಂಪರ್ಕದಲ್ಲಿದ್ದೇವೆ. ಎಲ್ಲಿಂದಲೂ ಕೂಡ ಯಾವುದೇ ರೀತಿಯ ಹಾನಿಯ ವರದಿಯಾಗಿಲ್ಲ" ಎಂದಿದ್ದಾರೆ. ನೇಪಾಳದಲ್ಲಿ 2015 ರಲ್ಲಿ ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಸುಮಾರು 10 ಸಾವಿರ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು ಹಾಗೂ ಸಾವಿರಾರು ಜನರು ಗಾಯಗೊಂಡಿದ್ದರು. ಆಗ ಕೂಡ ಭೂಕಂಪದ ಕೇಂದ್ರ ಬಿಂದು ಸಿಂಧುಪಲ್ ಚೌಕ್ ಜಿಲ್ಲೆಯಾಗಿದ್ದು, ಆ ಜಿಲ್ಲೆಗೆ ಅತ್ಯಧಿಕ ಹಾನಿಯಾಗಿತ್ತು.

Trending News