ದೆಹಲಿ-ಎನ್‌ಸಿಆರ್‌ನಲ್ಲಿ ಮತ್ತೆ ಕಂಪಿಸಿದ ಭೂಮಿ

Earthquake Today: ದೆಹಲಿ-ಎನ್‌ಸಿಆರ್‌ನಲ್ಲಿ ಭಾರಿ ಆಘಾತಗಳ ನಂತರ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು (ಮಾರ್ಚ್ 22, ಬುಧವಾರ) ಮಧ್ಯಾಹ್ನ 4.42 ರ ಸುಮಾರಿಗೆ ದೆಹಲಿ-ಎನ್‌ಸಿಆರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆಯ  ಭೂಕಂಪ ಸಂಭವಿಸಿದೆ. 

Written by - Yashaswini V | Last Updated : Mar 22, 2023, 06:05 PM IST
  • ಗಮನಾರ್ಹವಾಗಿ, ಮಂಗಳವಾರ ರಾತ್ರಿ 10.22 ರ ಸುಮಾರಿಗೆ ದೆಹಲಿ-ಎನ್‌ಸಿಆರ್‌ನಲ್ಲಿ ಬಲವಾದ ಭೂಕಂಪ ಸಂಭವಿಸಿತ್ತು.
  • ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 6.6 ಎಂದು ಅಂದಾಜಿಸಲಾಗಿದೆ.
  • ಈ ಪ್ರಬಲ ಭೂಕಂಪದಿಂದ ದೆಹಲಿ, ನೋಯ್ಡಾ, ಗಾಜಿಯಾಬಾದ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಕೆಲವು ನಗರಗಳಲ್ಲಿ ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದರೂ.
ದೆಹಲಿ-ಎನ್‌ಸಿಆರ್‌ನಲ್ಲಿ ಮತ್ತೆ ಕಂಪಿಸಿದ ಭೂಮಿ  title=
Twitter @NCS_Earthquake

Earthquake again in Delhi-NCR: ನಿನ್ನೆಯಷ್ಟೇ (ಮಾರ್ಚ್ 21) ದೆಹಲಿಯಲ್ಲಿ ಸಂಭವಿಸಿದ ಭೂಕಂಪದ ಆಘಾತವನ್ನು ಜನರು ಇನ್ನೂ ಮರೆತಿಲ್ಲ. ಈ ಮಧ್ಯೆ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಎನ್‌ಸಿ‌ಆರ್‌ನಲ್ಲಿ ಹಿಂದೂಗಳ ನೂತನ ಸಂವತ್ಸರ ಯುಗಾದಿ ಹಬ್ಬವಾದ ಇಂದೂ ಸಹ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು (ಮಾರ್ಚ್ 22, ಬುಧವಾರ) ಮಧ್ಯಾಹ್ನ 4.42 ರ ಸುಮಾರಿಗೆ ದೆಹಲಿ-ಎನ್‌ಸಿಆರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆಯ  ಭೂಕಂಪ ದಾಖಲಾಗಿದೆ. 

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ,  ಪಶ್ಚಿಮ ದೆಹಲಿಯ ಕೆಲವು ಭಾಗಗಳಲ್ಲಿ, ಬುಧವಾರ (ಮಾರ್ಚ್ 22) ಸಂಜೆ 4.42 ರ ಸುಮಾರಿಗೆ ದೆಹಲಿ-ಎನ್‌ಸಿಆರ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 2.7 ಅಳತೆಯ ಲಘು ಕಂಪನಗಳು ಸಂಭವಿಸಿದೆ. 

ಇದನ್ನೂ ಓದಿ- ದೆಹಲಿಯಲ್ಲಿ ಪ್ರಧಾನಿ ಮೋದಿ ವಿರೋಧಿ ಪೋಸ್ಟರ್ ಗಳು ಪ್ರತ್ಯಕ್ಷ, ನಾಲ್ವರ ಬಂಧನ

ಈ ಕುರಿತಂತೆ ಟ್ವೀಟ್ ಮಾಡಿರುವ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ, " 22-03-2023 ರಂದು 16:42:35ರ ಸುಮಾರಿಗೆ ದೆಹಲಿಯಲ್ಲಿ 2.7 ತೀವ್ರತೆಯ ಭೂಕಂಪ" ಸಂಭವಿಸಿದೆ ಎಂದು ಮಾಹಿತಿ ನೀಡಿದೆ. 

ಇದನ್ನೂ ಓದಿ- World Water Day : ನಾವು ನದಿ, ಬಾವಿ, ಬಾಟಲಲ್ಲಿ ನೀರು ನೋಡಿದ್ದಾಯಿತು..! ಮುಂದಿನ ಮಕ್ಕಳ ಗತಿ ಏನು..?

ಗಮನಾರ್ಹವಾಗಿ, ಮಂಗಳವಾರ ರಾತ್ರಿ 10.22 ರ ಸುಮಾರಿಗೆ ದೆಹಲಿ-ಎನ್‌ಸಿಆರ್‌ನಲ್ಲಿ ಬಲವಾದ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 6.6 ಎಂದು ಅಂದಾಜಿಸಲಾಗಿದೆ. ಈ ಪ್ರಬಲ ಭೂಕಂಪದಿಂದ ದೆಹಲಿ, ನೋಯ್ಡಾ, ಗಾಜಿಯಾಬಾದ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಕೆಲವು ನಗರಗಳಲ್ಲಿ ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದರೂ. ಈ ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶ ಎಂದು ಹೇಳಲಾಗಿತ್ತು. 

ಯುಎಸ್‌ಜಿಎಸ್ ಪ್ರಕಾರ, ತುರ್ಕಮೆನಿಸ್ತಾನ್, ಭಾರತ, ಕಝಾಕಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ, ಅಫ್ಘಾನಿಸ್ತಾನ್ ಮತ್ತು ಕಿರ್ಗಿಸ್ತಾನ್‌ನಲ್ಲಿ ಕಂಪನದ ಅನುಭವವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News