ಬಿಜೆಪಿ ತಾಲಿಬಾನಿಗಳನ್ನು ಸೃಷ್ಟಿಸುತ್ತಿದೆ- ಮಮತಾ ಬ್ಯಾನರ್ಜೀ

    

Last Updated : Jul 21, 2018, 05:45 PM IST
ಬಿಜೆಪಿ ತಾಲಿಬಾನಿಗಳನ್ನು ಸೃಷ್ಟಿಸುತ್ತಿದೆ- ಮಮತಾ ಬ್ಯಾನರ್ಜೀ title=
Image courtesy: IANS

ಕೊಲ್ಕತ್ತಾ: ಮೋದಿ ಸರ್ಕಾರದ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಿಜೆಪಿ ತಾಲಿಬಾನಿಗಳನ್ನು ಸೃಷ್ಟಿಸುತ್ತಿದೆ ಎಂದು ಕಿಡಿ ಕಾರಿದರು.

ಶಹಿದ್ ದಿವಸ್ ದಂದು ತೃಣಮೂಲ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ  ಮೆಗಾ ರ್ಯಾಲಿಯಲ್ಲಿ  ಭಾಗವಹಿಸಿ ಮೋದಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಾ ಮಾತನಾಡಿದ ಮಮತಾ ಬ್ಯಾನರ್ಜೀ " ಇಡೀ ದೇಶಾದ್ಯಂತ ಚಿತ್ರಹಿಂಸೆ ನೀಡಿ ಕೊಳ್ಳುತ್ತಿರುವ ಘಟನೆಗಳನ್ನು ಗಮನಿಸಿದರೆ ಅವರು  ಜನರ ಮಧ್ಯ ತಾಲಿಬಾನಿಗಳನ್ನು ಸೃಷ್ಟಿಸುತ್ತಿದ್ದಾರೆ ಮತ್ತು ಜನರನ್ನು ಉಗ್ರವಾದಕ್ಕೆ  ತಳ್ಳುತ್ತಿದ್ದಾರೆ ಎಣಿಸುತ್ತಿದೆ ಎಂದರು.

ಇನ್ನು ಮುಂದುವರೆದು ಬಿಜೆಪಿ ಮತ್ತು ಆರ್ ಎಸ್ ಎಸ್ ಕೆಲವು ಸದಸ್ಯರು ಧರ್ಮದ ಹೆಸರಿನಲ್ಲಿ ಕೆಸರಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು  ತಿಳಿಸಿದರು. ಇದೆ ಸಂದರ್ಭದಲ್ಲಿ  ಬಿಜೆಪಿ ಪಂಚಾಯತ್ ಚುನಾವಣೆಯನ್ನು ನಡೆಸುವ ಸಂದರ್ಭದಲ್ಲಿ ವಿಳಂಭ ಧೋರಣೆಯನ್ನು ಅನುಸರಿಸಿದ ತಂತ್ರವನ್ನು ಅವರು ಕಿಡಿಕಾರಿದರು.

ಮುಂಬರುವ ಲೋಕಸಭಾ ಚುನಾವಣೆ ಕಾರ್ಯತಂತ್ರದ ಬಗ್ಗೆ ಮಾತನಾಡಿದ ಅವರು ತೃಣಮೂಲ ಏಕಾಂಗಿಯಾಗಿ ಸ್ಪರ್ಧಿಸಲಿದ್ದು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
 

Trending News