ನೀವು ಪಾಕಿಸ್ತಾನದ ರಾಯಭಾರಿಯೇ?- ಮೋದಿಗೆ ಮಮತಾ ಬ್ಯಾನರ್ಜೀ ಪ್ರಶ್ನೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿ ಅವರಿಗೆ ಪಾಕಿಸ್ತಾನದ ರಾಯಭಾರಿಯಾಗಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

Last Updated : Jan 3, 2020, 02:33 PM IST
ನೀವು ಪಾಕಿಸ್ತಾನದ ರಾಯಭಾರಿಯೇ?- ಮೋದಿಗೆ ಮಮತಾ ಬ್ಯಾನರ್ಜೀ ಪ್ರಶ್ನೆ  title=
Photo courtesy: ANI

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿ ಅವರಿಗೆ ಪಾಕಿಸ್ತಾನದ ರಾಯಭಾರಿಯಾಗಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಸಿಲಿಗುರಿಯಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ, “ಭಾರತವು ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವ ದೊಡ್ಡ ದೇಶ. ನಮ್ಮ ರಾಷ್ಟ್ರವನ್ನು ಪಾಕಿಸ್ತಾನದೊಂದಿಗೆ ನೀವು ನಿಯಮಿತವಾಗಿ ಏಕೆ ಹೋಲಿಸುತ್ತೀರಿ? ನೀವು ಹಿಂದೂಸ್ತಾನ್ ಬಗ್ಗೆ ಮಾತನಾಡಬೇಕು. ನೀವು ಭಾರತದ ಪ್ರಧಾನಿ ಅಥವಾ ಪಾಕಿಸ್ತಾನದ ರಾಯಭಾರಿಯಾಗಿದ್ದೀರಾ. ಪ್ರತಿಯೊಂದು ವಿಷಯದಲ್ಲೂ ನೀವು ಪಾಕಿಸ್ತಾನವನ್ನು ವೈಭವೀಕರಿಸುತ್ತೀರೇಕೆ? ಎಂದು ಪ್ರಶ್ನಿಸಿದರು.

ಪಾಕಿಸ್ತಾನದ ಬಗ್ಗೆ ನಿಯಮಿತವಾಗಿ ಉಲ್ಲೇಖಿಸಿದ್ದರಿಂದ ಪ್ರಧಾನಿ ಮೋದಿಯನ್ನು ಟೀಕಿಸಿದ ಬ್ಯಾನರ್ಜಿ, “ಯಾರಾದರೂ ನನಗೆ ಕೆಲಸ ನೀಡಿ ಮತ್ತು ನನಗೆ ಕೆಲಸವಿಲ್ಲ ಎಂದು ಹೇಳಿದರೆ, ಪಾಕಿಸ್ತಾನಕ್ಕೆ ಹೋಗಿ ಎಂದು ಪ್ರಧಾನಿ ಹೇಳುತ್ತಾರೆ. ನಮ್ಮಲ್ಲಿ ಯಾವುದೇ ಕೈಗಾರಿಕೆಗಳಿಲ್ಲ ಎಂದು ಯಾರಾದರೂ ಹೇಳಿದರೆ, ಅವರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುತ್ತಾರೆ. ಪಾಕಿಸ್ತಾನ ಕಾ ಚರ್ಚಾ ಪಾಕಿಸ್ತಾನ ಕರೇ, ಹಮ್ ಹಿಂದೂಸ್ತಾನ್ ಕಾ ಚರ್ಚಾ ಕರೇಂಗಾ, ಯೆ ಹುಮಾರಿ ಜನ್ಮಭೂಮಿ ಹೈ (ಪಾಕಿಸ್ತಾನ ತಮ್ಮನ್ನು ಚರ್ಚಿಸಲಿ. ನಾವು ಭಾರತದಲ್ಲಿದ್ದೇವೆ, ನಾವು ಭಾರತವನ್ನು ಚರ್ಚಿಸಬೇಕು. ಇದು ನಮ್ಮ ಜನ್ಮಸ್ಥಳ).' ಎಂದರು.

ಇನ್ನೊಂದೆಡೆಗೆ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರವ್ಯಾಪಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧದ ಹೋರಾಟದ ವಿಚಾರವಾಗಿ ಮಾತನಾಡಿದ ,“ಸ್ವಾತಂತ್ರ್ಯದ 70 ವರ್ಷಗಳ ನಂತರವೂ ನಾವು ನಮ್ಮ ಪೌರತ್ವವನ್ನು ಸಾಬೀತುಪಡಿಸಬೇಕಾಗಿರುವುದು ನಾಚಿಕೆಗೇಡಿನ ಸಂಗತಿ” ಎಂದು ಹೇಳಿದರು. 

Trending News