Mamata Banerjee : 'ಕೇಂದ್ರಕ್ಕೆ ₹ 30 ಸಾವಿರ ಕೋಟಿ ಜಾಸ್ತಿ ಏನಲ್ಲ, ಸಾರ್ವತ್ರಿಕ ಲಸಿಕೆ ಯೋಜನೆ ರೂಪಿಸಲಿ'

ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ 

Last Updated : May 8, 2021, 03:35 PM IST
  • ದೇಶದಲ್ಲಿ ಸಾರ್ವತ್ರಿಕ ಲಸಿಕೆ ಯೋಜನೆ ರೂಪಿಸಬೇಕು.
  • ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
  • ಲಸಿಕೆಗಾಗಿ 30,000 ಕೋಟಿ ರೂ. ಖರ್ಚು ಮಾಡಲು ಏಕೆ ಬಿಡುತ್ತಿಲ್ಲ
 Mamata Banerjee : 'ಕೇಂದ್ರಕ್ಕೆ ₹ 30 ಸಾವಿರ ಕೋಟಿ ಜಾಸ್ತಿ ಏನಲ್ಲ, ಸಾರ್ವತ್ರಿಕ ಲಸಿಕೆ ಯೋಜನೆ ರೂಪಿಸಲಿ' title=

ಕೋಲ್ಕತ್ತ: ದೇಶದಲ್ಲಿ ಸಾರ್ವತ್ರಿಕ ಲಸಿಕೆ ಯೋಜನೆ ರೂಪಿಸಬೇಕು. ಅದಕ್ಕೆ ಬೇಕಾಗುವ ₹ 30,000 ಕೋಟಿ ಕೇಂದ್ರ ಸರ್ಕಾರಕ್ಕೆ ದೊಡ್ಡದಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಇಂದು ಮಾತನಾಡಿದ ಅವರು, ಪ್ರಧಾನ ಮಂತ್ರಿ ಮೋದಿ(PM Narendra Modi) ಅವರಿಗೆ ಪತ್ರವನ್ನೂ ಬರೆಯಲಾಗಿದ್ದು, ದೇಶದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ನೀಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಅವರು, ಪಿಎಂ ಕೇರ್ಸ್‌ ಫಂಡ್‌ಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. 'ಹೊಸ ಸಂಸತ್ ಭವನ ಮತ್ತು ಪ್ರತಿಮೆ ನಿರ್ಮಿಸಲು 20,000 ಕೋಟಿ ರೂ. ಖರ್ಚು ಮಾಡುತ್ತಿರುವ ಅವರು, ಲಸಿಕೆಗಾಗಿ 30,000 ಕೋಟಿ ರೂ. ಖರ್ಚು ಮಾಡಲು ಏಕೆ ಬಿಡುತ್ತಿಲ್ಲ. ಪಿಎಂ ಕೇರ್ಸ್‌ ಫಂಡ್‌ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : Corona Vaccination : 'ರಾಷ್ಟ್ರ ರಾಜಧಾನಿಯಲ್ಲಿ ಇನ್ನೂ ಇದೆ ಕೊರೋನಾ ಲಸಿಕೆ ಕೊರತೆ'

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ಸಾಕಷ್ಟು ಹಣ ಖರ್ಚು ಮಾಡಿದೆ ಎಂದೂ ಆರೋಪಿಸಿರುವ ಮಮತಾ(Mamata Banerjee), 'ಬಿಜೆಪಿಯು ಬೇರೆ ಬೇರೆ ರಾಜ್ಯಗಳ ನಾಯಕರು ಮತ್ತು ಕೇಂದ್ರ ಸಚಿವರುಗಳಿಗಾಗಿ ಸಾಕಷ್ಟು ಹೋಟೆಲ್‌ಗಳನ್ನು ಬುಕ್‌ ಮಾಡಿಕೊಂಡಿತ್ತು. ಎಲ್ಲ ಸಚಿವರೂ ಇಲ್ಲಿಗೆ ಬಂದು ಪಿತೂರಿ ನಡೆಸಿದರು. ಯೋಜನೆಗಳು ಮತ್ತು ಹೋಟೆಲ್‌ಗಳಿಗಾಗಿ ಎಷ್ಟು ಕೋಟಿ ಹಣ ಖರ್ಚು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಹಣವನ್ನು ನೀರಿನಂತೆ ಹರಿಸಲಾಗಿದೆ. ಅದರ ಬದಲು ಅವರು ಲಸಿಕೆ ನೀಡಿದ್ದರೆ, ರಾಜ್ಯಕ್ಕೆ ಒಳ್ಳೆಯದಾಗುತ್ತಿತ್ತುʼ ಎಂದು ಗುಡುಗಿದ್ದಾರೆ.

ಇದನ್ನೂ ಓದಿ : AP Kadapa Explosion: ಆಂಧ್ರಪ್ರದೇಶದ ಗಣಿಯೊಂದರಲ್ಲಿ ತೀವ್ರ ಸ್ಫೋಟ, 10 ಮಂದಿ ಸಾವು, ಹಲವರಿಗೆ ಗಾಯ

ಇದೇ ವೇಳೆ, ಲಸಿಕೆ(Vaccine) ಖರೀದಿಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಈಗಾಗಲೇ ಪತ್ರ ಬರೆದಿದ್ದೇವೆ. ಆದರೆ, ಅವರು ಅನುಮತಿ ನೀಡಿಲ್ಲ. ಇದೀಗ ರಾಜ್ಯವು ಲಸಿಕೆ ಹಾಗು ಆಮ್ಲಜನಕ ಕೊರತೆಯ ಸಂಕಷ್ಟ ಎದುರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : ಈಗ ಪಾಸ್ವರ್ಡ್ ಇಲ್ಲದೆ Google ಲಾಗಿನ್, ಈ ವಿಧಾನ ಎಷ್ಟು ಸುರಕ್ಷಿತವಾಗಿದೆ ಎಂದು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News