Trending: 19ರ ಬಾಲಕಿ ಮೇಲೆ Zomato ಡೆಲಿವರಿ ಬಾಯ್ ದೌರ್ಜನ್ಯ: ಬಲವಂತವಾಗಿ ಮುತ್ತಿಟ್ಟ ಕಿರಾತಕನ ಗತಿ ಮುಂದೇನಾಯ್ತು ಗೊತ್ತಾ?

ಈ ಪ್ರಕರಣ ಪುಣೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. 42 ವರ್ಷದ ಜೊಮಾಟೊ ಡೆಲಿವರಿ ಬಾಯ್ 19 ವರ್ಷದ ಬಾಲಕಿಗೆ ಮುತ್ತಿಟ್ಟಿದ್ದಾನೆ ಎಂದು ತಿಳಿದುಬಂದಿದ್ದು, ಆತನ ವಿರುದ್ದ ಯುವತಿ ದೂರು ದಾಖಲಿಸಿದ್ದಾಳೆ.

Written by - Bhavishya Shetty | Last Updated : Sep 20, 2022, 03:27 PM IST
    • 42 ವರ್ಷದ ಜೊಮಾಟೊ ಡೆಲಿವರಿ ಬಾಯ್ 19 ವರ್ಷದ ಬಾಲಕಿಗೆ ಮುತ್ತಿಟ್ಟಿದ್ದಾನೆ
    • ಈ ಪ್ರಕರಣ ಪುಣೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ
    • ಬಂಧನದ ಬಳಿಕ ಜಾಮೀನು ಮೇಲೆ ಬಿಡುಗಡೆಗೊಂಡ ಆರೋಪಿ
Trending: 19ರ ಬಾಲಕಿ ಮೇಲೆ Zomato ಡೆಲಿವರಿ ಬಾಯ್ ದೌರ್ಜನ್ಯ: ಬಲವಂತವಾಗಿ ಮುತ್ತಿಟ್ಟ ಕಿರಾತಕನ ಗತಿ ಮುಂದೇನಾಯ್ತು ಗೊತ್ತಾ?  title=
Zomato,

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮನೆಯಿಂದ ಹೊರಗೆ ಹೋಗಿ ರೆಸ್ಟೋರೆಂಟ್‌ಗಳಲ್ಲಿ ಆಹಾರವನ್ನು ತಿನ್ನುವ ಬದಲು ತಮ್ಮ ಮನೆಯಲ್ಲಿ ಕುಳಿತು ಆನ್ ಲೈನ್ ಮೂಲಕ ಆಹಾರವನ್ನು ಆರ್ಡರ್ ಮಾಡುತ್ತಾರೆ. ಆದರೆ ಆಹಾರಗಳನ್ನು ಡೆಲಿವರಿ ಮಾಡುವ ಕೆಲ ಯುವಕರು ಅನುಚಿತ ವರ್ತನೆ ಮಾಡಿರುವ ಘಟನೆಗಳು ಅದೆಷ್ಟೋ ಬಾರಿ ಕೇಳಿದ್ದೇವೆ. ಇದಕ್ಕೆ ಪೂರಕ ಎಂಬಂತೆ ಮತ್ತೊಂದು ಘಟನೆಯೂ ನಡೆದಿದೆ. 

ಇದನ್ನೂ ಓದಿ: Crime News: ಕೇವಲ 9 ಸಾವಿರ ರೂ. ಸಾಲಕ್ಕೆ ಚಾಕುವಿನಿಂದ ಇರಿದು ಹತ್ಯೆ..!

ಪ್ರಕರಣ ಪುಣೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. 42 ವರ್ಷದ ಜೊಮಾಟೊ ಡೆಲಿವರಿ ಬಾಯ್ 19 ವರ್ಷದ ಬಾಲಕಿಗೆ ಮುತ್ತಿಟ್ಟಿದ್ದಾನೆ ಎಂದು ತಿಳಿದುಬಂದಿದ್ದು, ಆತನ ವಿರುದ್ದ ಯುವತಿ ದೂರು ದಾಖಲಿಸಿದ್ದಾಳೆ.

ಹುಡುಗಿ ಈ ಬಗ್ಗೆ ಮಾಹಿತಿ ನೀಡಿದ್ದು, Zomato ಮೂಲಕ ಆಹಾರವನ್ನು ಆರ್ಡರ್ ಮಾಡಲಾಗಿತ್ತು. ಅದನ್ನು ತಂದ ಡೆಲಿವರಿ ಬಾಯ್ ನನ್ನ ಬಳಿ ನೀರು ಕೇಳಿದ್ದಾನೆ. ನೀರು ನೀಡಿದ ತಕ್ಷಣ, ನಾನು ನಿರೀಕ್ಷಿಸದ ಒಂದು ಘಟನೆ ಸಂಭವಿಸಿತು. ಡೆಲಿವರಿ ಬಾಯ್ ತನಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾಳೆ.

ನೀರು ತಂದ ತಕ್ಷಣ ಡೆಲಿವರಿ ಬಾಯ್ ನನ್ನ ಕುಟುಂಬದ ಸದಸ್ಯರ ಬಗ್ಗೆ ಕೇಳಲು ಆರಂಭಿಸಿದ. ನಾನು ಅದಕ್ಕೆ ಪ್ರತಿಕ್ರಿಯಿಸಿದ್ದು, ‘ಇಬ್ಬರು ಸ್ನೇಹಿತರೊಂದಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದೇನೆ. ಸದ್ಯ ಇಬ್ಬರೂ ತಮ್ಮ ತಮ್ಮ ಮನೆಗೆ ಹೋಗಿದ್ದಾರೆ’ ಎಂದು ಹೇಳಿದೆ. ಅದೇ ಸಮಯವನ್ನು ಉಪಯೋಗಿಸಿಕೊಂಡು ಆ ವ್ಯಕ್ತಿ ಇನ್ನೊಂದು ಲೋಟ ನೀರು ಕೊಡುವಂತೆ ಕೇಳಿದ, ಆಕೆ ಹಿಂತಿರುಗಿದ ಕೂಡಲೇ ನನ್ನನ್ನು ಹಿಡಿದು ಬಲವಂತವಾಗಿ ಕೆನ್ನೆಗೆ ಎರಡು ಬಾರಿ ಮುತ್ತಿಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಇದನ್ನೂ ಓದಿ: 30 ವರ್ಷಗಳ ನಂತರ ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನೀಶ್ವರ

ವರದಿಯ ಪ್ರಕಾರ, ಈ ಕೃತ್ಯದ ನಂತರ ಡೆಲಿವರಿ ಬಾಯ್ ಹೊರಟು ಹೋಗಿದ್ದಾನೆ. ಇದಲ್ಲದೇ ಡೆಲಿವರಿ ಬಾಯ್ ಬಾಲಕಿಗೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲು ಬಾಲಕಿ ನಿರ್ಧರಿಸಿದ್ದಾಳೆ. ಡೆಲಿವರಿ ಬಾಯ್‌ನನ್ನು ಬಂಧಿಸಲಾಗಿತ್ತು. ಆದರೆ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News