ಸರ್ವಗುಣ ಸಂಪನ್ನ ಈ ಬೆಳ್ಳುಳ್ಳಿ, ಆದರೆ, ಈ ಜನರು ಮರೆತೂ ಬೆಳ್ಳುಳ್ಳಿಯನ್ನು ಸೇವಿಸಬಾರದು! ಕಾರಣ ಇಲ್ಲಿದೆ

Health Tips: ತನ್ನಲ್ಲಿರುವ ಔಷಧೀಯ ಗುಣಗಳ ಕಾರಣ, ಬೆಳ್ಳುಳ್ಳಿ ಸರ್ವಗುಣ ಸಂಪನ್ನ ಎಂದು ಕರೆಯಲ್ಪಡುತ್ತದೆ ಮತ್ತು ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರ ಹೊರತಾಗಿಯೂ, ಕೆಲವರು ಇದನ್ನು ಸೇವಿಸಬಾರದು, ಇಲ್ಲದಿದ್ದರೆ ಅವರ ಸಮಸ್ಯೆಗಳು ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ಇರುತ್ತದೆ.  

Written by - Nitin Tabib | Last Updated : Feb 20, 2023, 09:50 PM IST
  • ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ,
  • ಬೆಳ್ಳುಳ್ಳಿ ಸರ್ವಗುಣ ಸಂಪನ್ನ ಎಂದು ಕರೆಯಲ್ಪಡುತ್ತದೆ
  • ಮತ್ತು ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಸರ್ವಗುಣ ಸಂಪನ್ನ ಈ ಬೆಳ್ಳುಳ್ಳಿ, ಆದರೆ, ಈ ಜನರು ಮರೆತೂ ಬೆಳ್ಳುಳ್ಳಿಯನ್ನು ಸೇವಿಸಬಾರದು! ಕಾರಣ ಇಲ್ಲಿದೆ title=
ಬೆಳ್ಳುಳ್ಳಿ ಸೇವನೆಯ ಅಡ್ಡಪರಿಣಾಮಗಳು

Garlic Side Effects: ಭಾರತದ ಬಹುತೇಕ ಮನೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ ಮತ್ತು ಇದು ಸುಲಭವಾಗಿ ದೊರೆಯುವ ಪದಾರ್ಥವಾಗಿದೆ. ಇದರ ಪರಿಮಳ ಮತ್ತು ರುಚಿಯ ಕಾರಣ ಇದು ತಿನ್ನಲು ಅದ್ಭುತವಾಗಿದೆ. ಅದೇ ಸಮಯದಲ್ಲಿ, ಬೆಳ್ಳುಳ್ಳಿಯನ್ನು ವಿದೇಶದಲ್ಲಿ ವಿಶೇಷವಾಗಿ ಉಪ್ಪಿನಕಾಯಿ, ಸಾಸ್, ಪಿಜ್ಜಾ ಮತ್ತು ಪಾಸ್ಟಾದಂತಹ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದರಲ್ಲಿರುವ ಔಷಧೀಯ ಗುಣಗಳಿಂದಾಗಿ, ಬೆಳ್ಳುಳ್ಳಿ ಸರ್ವಗುಣ ಸಂಪನ್ನ ಎಂದು ಕರೆಯಲ್ಪಡುತ್ತದೆ ಮತ್ತು ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರ ಹೊರತಾಗಿಯೂ, ಕೆಲವು ಜನರು ಬೆಳ್ಳುಳ್ಳಿಯನ್ನು ಸೇವಿಸಬಾರದು, ಇಲ್ಲದಿದ್ದರೆ ಅವರ ಸಮಸ್ಯೆಗಳು ಮತ್ತಷ್ಟು ಉಲ್ಬಣಿಸುವ ಸಾಧ್ಯತೆ ಇದೆ. ಬೆಳ್ಳುಳ್ಳಿಯನ್ನು ಯಾವ ಜನರು ಸೇವಿಸಬಾರದು ತಿಳಿದುಕೊಳ್ಳೋಣ ಬನ್ನಿ.

ಅಸಿಡಿಟಿ 
ಆಗಾಗ್ಗೆ ಅಸಿಡಿಟಿ ಸಮಸ್ಯೆ ಎದುರಿಸುವ ಜನರು ಬೆಳ್ಳುಳ್ಳಿಯಿಂದ ಅಂತರ ಕಾಯ್ದುಕೊಳ್ಳಬೇಕು. ಇದಲ್ಲದೇ ಅಸಿಡಿಟಿಯಿಂದ ಬಳಲುತ್ತಿರುವವರು ಮರೆತೂ ಕೂಡ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿನ್ನಬಾರದು, ಇಲ್ಲದಿದ್ದರೆ ಅವರ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.

ದುರ್ಬಲ ಹೊಟ್ಟೆ ಇರುವವರು ಸೇವಿಸಬಾರದು
ನಿಮ್ಮ ಹೊಟ್ಟೆಯು ದುರ್ಬಲವಾಗಿದ್ದರೆ, ನೀವು ಏನೇ ತಿಂದರೂ ಕೂಡ ನಿಮ್ಮ ಹೊಟ್ಟೆ ಬೇಗನೆ ಅನಾರೋಗ್ಯಕ್ಕೆ ಒಳಗಾಗುತ್ತದೆ. ಹೀಗಾಗಿ ಹೊಟ್ಟೆ ದುರ್ಬಲ ಇರುವವರು ಬೆಳ್ಳುಳ್ಳಿಯನ್ನು ಸೇವಿಸಬಾರದು. ಇದು ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು.

ಬೆವರು ವಾಸನೆ
ನಿಮ್ಮ ದೇಹವು ಬೆವರು ಅಥವಾ ಉಸಿರಾಟದ ವಾಸನೆಯನ್ನು ಹೊಂದಿದ್ದರೆ, ಬೆಳ್ಳುಳ್ಳಿಯನ್ನು ಸೇವಿಸಬೇಡಿ. ಇದಲ್ಲದೆ, ನೀವು ರಕ್ತ ತಿಳಿಯಾಗಿಸುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಬೆಳ್ಳುಳ್ಳಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.

ಇದನ್ನೂ ಓದಿ-Health Care Tips: ಮಧುಮೇಹ ನಿಯಂತ್ರಣಕ್ಕೆ ಈ ಒಣ ಹಣ್ಣುಗಳು ನಿಮ್ಮ ಆಹಾರದಲ್ಲಿರಲಿ!

ಎದೆಯುರಿ
ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (ಜಿಇಆರ್ಡಿ) ಯಿಂದ ಬಳಲುತ್ತಿರುವ ಜನರು ಬೆಳ್ಳುಳ್ಳಿಯನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. GERD ಎನ್ನುವುದು ಹೊಟ್ಟೆಯ ಆಮ್ಲವು ಅನ್ನನಾಳಕ್ಕೆ ಹಿಂತಿರುಗಿದಾಗ ಉಂಟಾಗುವ ಒಂದು ಸ್ಥಿತಿಯಾಗಿದೆ. ಇದು ವಾಕರಿಕೆ ಮುಂತಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.

ಇದನ್ನೂ ಓದಿ-Health Tips: ಮೊಸರು ಬೆಲ್ಲ ಸೇವನೆಯಿಂದಾಗುವ ಈ ಆರೋಗ್ಯ ಲಾಭಗಳು ನಿಮಗೆ ತಿಳಿದಿವೆಯೇ?

ದಿನಕ್ಕೆ ಎಷ್ಟು ಬೆಳ್ಳುಳ್ಳಿ ಸೇವಿಸಬೇಕು?
ಒಬ್ಬ ವ್ಯಕ್ತಿಯು ಎಷ್ಟು ಬೆಳ್ಳುಳ್ಳಿ ತಿನ್ನಬೇಕು ಎಂಬುದಕ್ಕೆ ಯಾವುದೇ ಅಧಿಕೃತ ಪ್ರಮಾಣವಿಲ್ಲ, ಆದರೆ ಪ್ರತಿದಿನ 3 ರಿಂದ 6 ಗ್ರಾಂ ಬೆಳ್ಳುಳ್ಳಿ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಅಧ್ಯಯನಗಳು ಹೇಳುತ್ತವೆ.

ಇದನ್ನೂ ಓದಿ-Diabetes ರೋಗಿಗಳಿಗೆ ಅಮೃತಕ್ಕೆ ಸಮಾನ ಈ ಕಹಿ ಪದಾರ್ಥ, ಹಲವು ಅಪಾಯಕಾರಿ ಕಾಯಿಲೆಗಳನ್ನು ಬುಡಸಮೇತ ಕಿತ್ತೆಸೇಯುತ್ತೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News