ನಿಂಬೆ ಹಣ್ಣು ರಸಭರಿತವಾಗಿದೆಯೇ ಎನ್ನುವುದನ್ನು ಖರೀದಿ ಮಾಡುವ ಮುನ್ನ ಹೀಗೆ ತಿಳಿದುಕೊಳ್ಳಿ !

Tips for buying lemon :ಅನೇಕ ಬಾರಿ ನಾವು ಖರೀದಿಸಿ ತಂದಿರುವ ನಿಂಬೆ ಹಣ್ಣಿನಲ್ಲಿ ರಸವೇ ಇರುವುದಿಲ್ಲ.ನಿಂಬೆಯನ್ನು ಖರೀದಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.    

Written by - Ranjitha R K | Last Updated : May 9, 2024, 01:43 PM IST
  • ನಿಂಬೆ ಹಣ್ಣಿನ ಬಳಕೆ ಪ್ರತಿ ಮನೆಯಲ್ಲಿಯೂ ಹೆಚ್ಚಾಗಿ ಆಗುತ್ತದೆ
  • ಬೇಸಿಗೆಯಲ್ಲಿ ಇದರ ಬಳಕೆ ಸ್ವಲ್ಪ ಹೆಚ್ಚೇ ಇರುತ್ತದೆ.
  • ನಿಂಬೆ ಖರೀದಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು
ನಿಂಬೆ ಹಣ್ಣು ರಸಭರಿತವಾಗಿದೆಯೇ ಎನ್ನುವುದನ್ನು ಖರೀದಿ ಮಾಡುವ ಮುನ್ನ ಹೀಗೆ ತಿಳಿದುಕೊಳ್ಳಿ ! title=

Tips for buying lemon : ನಿಂಬೆ ಹಣ್ಣಿನ ಬಳಕೆ ಪ್ರತಿ ಮನೆಯಲ್ಲಿಯೂ ಹೆಚ್ಚಾಗಿ ಆಗುತ್ತದೆ.ಬೇಸಿಗೆಯಲ್ಲಿ ಇದರ ಬಳಕೆ ಸ್ವಲ್ಪ ಹೆಚ್ಚೇ ಇರುತ್ತದೆ.ನಿಂಬೆ ರಸವನ್ನು ವಿವಿಧ ರೀತಿಯ ಶರಬತ್ತುಗಳು,ಸಲಾಡ್ ಮತ್ತು ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ.ಅನೇಕ ಬಾರಿ ನಾವು ಖರೀದಿಸಿ ತಂದಿರುವ ನಿಂಬೆ ಹಣ್ಣಿನಲ್ಲಿ ರಸವೇ ಇರುವುದಿಲ್ಲ.ಆಗ ನಿರಾಸೆಯಾಗುವುದು ಸಹಜ, ಆದರೆ ನಿಂಬೆಯನ್ನು ಖರೀದಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ,ಒಣ ಅಥವಾ ರುಚಿಯಿಲ್ಲದ ನಿಂಬೆಯನ್ನು ಖರೀದಿಸುವುದನ್ನು ತಪ್ಪಿಸಬಹುದು. 

ನಿಂಬೆ ಖರೀದಿಸಲು ಸಲಹೆಗಳು :
ನಿಂಬೆ ಸಿಪ್ಪೆ :

ನಿಂಬೆ ಹಣ್ಣನ್ನು ಖರೀದಿಸುವಾಗ ಅದರ ಸಿಪ್ಪೆಯನ್ನು ಎಚ್ಚರಿಕೆಯಿಂದ ನೋಡಬೇಕು.ತೆಳ್ಳಗಿನ ಮತ್ತು ಹೊಳೆಯುವ ಸಿಪ್ಪೆಯನ್ನು ಹೊಂದಿರುವ ನಿಂಬೆಹಣ್ಣುಗಳು ಹೆಚ್ಚು ರಸವನ್ನು ಹೊಂದಿರುತ್ತವೆ.ದಪ್ಪ ಮತ್ತು ನೀರಸವಾದ ಸಿಪ್ಪೆಯನ್ನು ಹೊಂದಿರುವ ನಿಂಬೆಹಣ್ಣುಗಳು ರುಚಿಕರವಾಗಿರುವುದಿಲ್ಲ. ಹಾಗಾಗಿ  ಯಾವಾಗಲೂ ತೆಳುವಾದ ಮತ್ತು ಹೊಳೆಯುವ ಸಿಪ್ಪೆಇರುವ  ನಿಂಬೆಹಣ್ಣನ್ನು ಖರೀದಿಸಬೇಕು. 

ಇದನ್ನೂ ಓದಿ : ಈ ಹಣ್ಣು ಸೇವಿಸಿದರೆ ಖಂಡಿತಾ ಹೆಚ್ಚಾಗುವುದಿಲ್ಲ ಬ್ಲಡ್ ಶುಗರ್ !ಮಧುಮೇಹಿಗಳಿಗೆ ವರ ಈ ಹಣ್ಣು!

ನಿಂಬೆ ತೂಕ :
ರಸದಿಂದ ತುಂಬಿದ ನಿಂಬೆ ಯಾವಾಗಲೂ ಒಣ ಮತ್ತು ರಸವಿಲ್ಲದ ನಿಂಬೆಗಿಂತ ಭಾರವಾಗಿರುತ್ತದೆ.ಕೈಯ್ಯಲ್ಲಿ ಹಿಡಿದು ನೋಡುವಾಗ ನಿಂಬೆ ಹಣ್ಣಿನ ತೂಕ ಹೆಚ್ಚಾಗಿದ್ದರೆ ಅದರಲ್ಲಿ ಜ್ಯೂಸ್ ಹೆಚ್ಚಾಗಿದೆ ಎಂದರ್ಥ. 

ಮೃದುವಾದ ನಿಂಬೆ ಖರೀದಿಸಿ :
ನಿಂಬೆಹಣ್ಣನ್ನು ಖರೀದಿಸುವ ಮೊದಲು,ಅದನ್ನು ನಿಮ್ಮ ಕೈಗಳಿಂದ ಒತ್ತಿ ನೋಡುವ ಮೂಲಕ ಪರೀಕ್ಷೆ ಮಾಡಿ. ಹೀಗೆ ಒತ್ತಿ ನೋಡುವಾಗ ನಿಂಬೆ ಹಣ್ಣು  ಮೃದುವಾಗಿದ್ದರೆ ಅದರಲ್ಲಿ ಹೆಚ್ಚು ರಸ ಇದೆ ಎಂದರ್ಥ. ಮೃದುವಾದ ಹಣ್ಣುಗಳನ್ನು ಸುಲಭವಾಗಿ ಹಿಂಡಿದ ಕೂಡಲೇ ರಸ ಬರುತ್ತದೆ. 

ಇದನ್ನೂ ಓದಿ : Benefits of Flaxseeds: ಅಗಸೆ ಬೀಜಗಳ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ

ಹಳದಿ ನಿಂಬೆ : 
ಹಳದಿ ಬಣ್ಣದ ನಿಂಬೆಹಣ್ಣುಗಳನ್ನು ಯಾವಾಗಲೂ ಖರೀದಿಸಬೇಕು. ಹಳದಿ ಬಣ್ಣವಿದ್ದು ಮೃದು ಮತ್ತು ಭಾರವಾಗಿದ್ದರೆ ಆ ನಿಂಬೆಹಣ್ಣುಗಳು ಬಹಳಷ್ಟು ರಸವನ್ನು ಹೊಂದಿರುತ್ತವೆ. 

ನಿಂಬೆಹಣ್ಣುಗಳನ್ನು ಖರೀದಿಸುವಾಗ ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡರೆ ರಸಭರಿತ ನಿಂಬೆಯನ್ನೇ ಖರೀದಿಸಬಹುದು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Benefits of FlaxseedsHeart healthOmega-3 fatty acids

Trending News