ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ Vitamin C ತೆಗೆದುಕೊಳ್ಳಬೇಡಿ: ಏಕೆಂದು ತಿಳಿಯಿರಿ…

ಕರುಳಿನ ಆರೋಗ್ಯಕ್ಕೆ ವಿಟಮಿನ್ ಸಿ ಯ ಒಂದು ದೊಡ್ಡ ಪ್ರಯೋಜನವೆಂದರೆ ಅದು ನಿಮ್ಮ ಕರುಳಿನ ಸೂಕ್ಷ್ಮಜೀವಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ನಡುವಿನ ಸಮತೋಲನವನ್ನು ನಿರ್ವಹಿಸುತ್ತದೆ.

Written by - Puttaraj K Alur | Last Updated : Sep 28, 2021, 05:46 PM IST
  • ಇತ್ತೀಚಿನ ಅಧ್ಯಯನಗಳ ಪ್ರಕಾರ ವಿಟಮಿನ್ ಸಿ ನಿಮ್ಮ ಕರುಳಿನ ಆರೋಗ್ಯಕ್ಕೂ ಸಂಬಂಧಿಸಿದೆ
  • ವಿಟಮಿನ್ ಸಿ ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಹಾನಿ & ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವಾಗಬಹುದು
  • ಪೂರಕವಾಗಿ ನೀವು ಕಿತ್ತಳೆ, ಕಿವಿ, ವಿಟಮಿನ್ ಸಿ ಸಮೃದ್ಧವಾಗಿರುವ ಸ್ಟ್ರಾಬೆರಿಗಳನ್ನು ಸೇವಿಸಬಹುದು
ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ Vitamin C ತೆಗೆದುಕೊಳ್ಳಬೇಡಿ: ಏಕೆಂದು ತಿಳಿಯಿರಿ… title=
ಅಗತ್ಯಕ್ಕೆ ತಕ್ಕಷ್ಟು ಮಾತ್ರ ವಿಟಮಿನ್ ಸಿ ಸೇವಿಸಬೇಕು (Photo Courtesy: @Zee News)

ನವದೆಹಲಿ: ಹೆಚ್ಚಿನ ಜನರಿಗೆ ವಿಟಮಿನ್ ಸಿ(Vitamin C) ಜನಪ್ರಿಯ ಶೀತ ಪರಿಹಾರವೆಂದು ತಿಳಿದಿದೆ. ಆದಾಗ್ಯೂ ವಿಟಮಿನ್ ಸಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಿಲ್ಲ. ವಿಟಮಿನ್ ಸಿ ಯಲ್ಲಿರುವ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ಮತ್ತು ಇತರ ಅನೇಕ ಗಂಭೀರ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಕಾಲಜನ್(Collagen) ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೃಷ್ಟಿ ನಷ್ಟವನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

ಇತ್ತೀಚಿನ ಅಧ್ಯಯನಗಳ ಪ್ರಕಾರ, ವಿಟಮಿನ್ ಸಿ ನಿಮ್ಮ ಕರುಳಿನ ಆರೋಗ್ಯ(Gut Health)ಕ್ಕೂ ಸಂಬಂಧಿಸಿದೆ. ಕರುಳಿನ ಆರೋಗ್ಯಕ್ಕೆ ವಿಟಮಿನ್ ಸಿ ಯ ಒಂದು ದೊಡ್ಡ ಪ್ರಯೋಜನವೆಂದರೆ ಅದು ನಿಮ್ಮ ಕರುಳಿನ ಸೂಕ್ಷ್ಮಜೀವಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ನಡುವಿನ ಸಮತೋಲನವನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ: Banana Peel: ಬಾಳೆಹಣ್ಣಿನ ಸಿಪ್ಪೆಯಲ್ಲಿ ಅಡಗಿದೆ ಹೊಳೆಯುವ ಚರ್ಮದ ರಹಸ್ಯ, ಅದನ್ನು ಈ ರೀತಿ ಬಳಸಿ

ಸ್ವತಂತ್ರ ರಾಡಿಕಲ್(Radicals)ಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ

ಅಮೇರಿಕನ್ ರಿಸರ್ಚ್ ಸೆಂಟರ್ ಮಾಯೊ ಕ್ಲಿನಿಕ್(American Research Center Mayo Clinic) ಪ್ರಕಾರ, ವಿಟಮಿನ್ ಸಿ ನಿಮ್ಮ ದೇಹದ ಪ್ರಮುಖ ಭಾಗಗಳಾದ ಸ್ನಾಯುಗಳು, ಕಾರ್ಟಿಲೆಜ್, ಕಾಲಜನ್ ಮತ್ತು ರಕ್ತನಾಳಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ದೇಹದ ಮೇಲೆ ಸ್ವತಂತ್ರ ರಾಡಿಕಲ್ ಗಳ ಪರಿಣಾಮವನ್ನು ಸಹ ಕಡಿಮೆ ಮಾಡುತ್ತದೆ. ಫ್ರೀ ರಾಡಿಕಲ್ ಕ್ಯಾನ್ಸರ್ ಮತ್ತು ಹೃದಯ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ದೇಹವು ವಿಟಮಿನ್ ಸಿ ಅನ್ನು ಸ್ವಂತವಾಗಿ ಹೊಂದಲು ಸಾಧ್ಯವಿಲು. ಆದ್ದರಿಂದ ನೀವು ಅದನ್ನು ಆಹಾರ ಅಥವಾ ಪೂರಕಗಳಿಂದ ತೆಗೆದುಕೊಳ್ಳಬೇಕು. ಇದಕ್ಕಾಗಿ ನೀವು ಕಿತ್ತಳೆ, ಕಿವಿ, ವಿಟಮಿನ್ ಸಿ ಸಮೃದ್ಧವಾಗಿರುವ ಸ್ಟ್ರಾಬೆರಿಗಳನ್ನು ಸೇವಿಸಬಹುದು.

ಇದನ್ನೂ ಓದಿ: Diabetes: ಮಧುಮೇಹ ರೋಗಿಗಳು ಈ ಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಹೆಚ್ಚಿನ ಪ್ರಯೋಜನ ಪಡೆಯಿರಿ

ಪ್ರತಿದಿನ ಎಷ್ಟು ಅಗತ್ಯವಿದೆ

ವಯಸ್ಕ ಮಹಿಳೆಯರಿಗೆ ಪ್ರತಿದಿನ 75 ಮಿಲಿಗ್ರಾಂ ವಿಟಮಿನ್ ಸಿ(Vitamin C) ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಆದರೆ ಈ ಪ್ರಮಾಣವು ಪುರುಷರಿಗೆ 90 ಮಿಲಿಗ್ರಾಂ ಆಗಿದೆ. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಈ ಪ್ರಮಾಣವು 85 ರಿಂದ 120 ಮಿಲಿಗ್ರಾಂ ವರೆಗೆ ಇರುತ್ತದೆ. ವಿಟಮಿನ್ ಸಿ ಯ ಗರಿಷ್ಠ ಮಿತಿಯು ಪ್ರತಿದಿನ 2,000 ಮಿಲಿಗ್ರಾಂ ಆಗಿದೆ. ಇದನ್ನು ನೀವು ಆಹಾರದಿಂದ ಮಾತ್ರ ಪಡೆಯಲಾಗುವುದಿಲ್ಲ, ಆದರೆ ಜನರು ಈ ಪ್ರಮಾಣದ ದೈನಂದಿನ ಸೇವನೆಯನ್ನು ಪೂರೈಸಲು ವಿಟಮಿನ್ ಸಿ ಪೂರಕಗಳನ್ನು ತೆಗೆದುಕೊಳ್ಳುವ ಸಂದರ್ಭಗಳಿವೆ.

ಈ ಸಮಸ್ಯೆಗಳು ಆಗಿರಬಹುದು

ರೆಡಾಕ್ಸ್ ಬಯಾಲಜಿ(Redox Biology)ಯಲ್ಲಿ ಪ್ರಕಟವಾದ 2019 ರ ಅಧ್ಯಯನದ ಪ್ರಕಾರ, ವಿಟಮಿನ್ ಸಿ ಕರುಳಿನ ತಡೆಗೋಡೆ ಕಾರ್ಯವನ್ನು ಸುಧಾರಿಸುತ್ತದೆ. ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕೆಲವು ರೀತಿಯ ಜೀವಾಣುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಆದರೆ ವಿಟಮಿನ್ ಸಿ ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುತ್ತದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಅತಿಸಾರ, ಸೆಳೆತ ಮತ್ತು ವಾಕರಿಕೆಗೆ ಕಾರಣವಾಗಬಹುದು. ಏಕೆಂದರೆ ನಿಮ್ಮ ಜಠರಗರುಳಿನ ಪ್ರದೇಶವು ಹೀರಿಕೊಳ್ಳದ ವಿಟಮಿನ್ ಸಿ ಗೆ ಪ್ರತಿಕ್ರಿಯಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News