Benefits of Flaxseeds : ಪ್ರತಿದಿನ ಸೇವಿಸಿ 1 ಚಮಚ 'ಅಗಸೆಬೀಜ : ಇದರಿಂದ ಆರೋಗ್ಯಕ್ಕೆ ಎಷ್ಟು ಲಾಭ ಗೊತ್ತಾ?

ಪ್ರತಿದಿನ ನಿಯಮಿತವಾಗಿ ಅಗಸೆ ಬೀಜಗಳನ್ನ ತಿನ್ನುವುದರಿಂದ ನಿಮ್ಮ ದೇಹದ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು. ಸ್ಥೂಲಕಾಯದಿಂದ ಬಳಲುತ್ತಿರುವವರಿಗೆ ಅಗಸೆ ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ತೂಕ ಇಳಿಸುವಲ್ಲಿ ಅಗಸೆ ಪ್ರಮುಖ ಪಾತ್ರ ವಹಿಸುತ್ತದೆ.

Written by - Channabasava A Kashinakunti | Last Updated : Jul 22, 2021, 06:04 PM IST
  • ಪ್ರತಿದಿನ ನಿಯಮಿತವಾಗಿ ಅಗಸೆ ಬೀಜ ತಿನ್ನುವುದರಿಂದ ಅನೇಕ ಲಾಭ
  • ಸ್ಥೂಲಕಾಯದಿಂದ ಬಳಲುತ್ತಿರುವವರಿಗೆ ಅಗಸೆ ತುಂಬಾ ಪ್ರಯೋಜನಕಾರಿ
  • ಅಗಸೆ ಬೀಜ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡಲು ತುಂಬಾ ಪ್ರಯೋಜನಕಾರಿ
Benefits of Flaxseeds : ಪ್ರತಿದಿನ ಸೇವಿಸಿ 1 ಚಮಚ 'ಅಗಸೆಬೀಜ : ಇದರಿಂದ ಆರೋಗ್ಯಕ್ಕೆ ಎಷ್ಟು ಲಾಭ ಗೊತ್ತಾ? title=

ಪ್ರತಿದಿನ ನಿಯಮಿತವಾಗಿ ಅಗಸೆ ಬೀಜಗಳನ್ನ ತಿನ್ನುವುದರಿಂದ ನಿಮ್ಮ ದೇಹದ ಅನೇಕ ಗಂಭೀರ ಕಾಯಿಲೆಗಳನ್ನು ತಪ್ಪಿಸಬಹುದು. ಸ್ಥೂಲಕಾಯದಿಂದ ಬಳಲುತ್ತಿರುವವರಿಗೆ ಅಗಸೆ ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ತೂಕ ಇಳಿಸುವಲ್ಲಿ ಅಗಸೆ ಪ್ರಮುಖ ಪಾತ್ರ ವಹಿಸುತ್ತದೆ. ಅಗಸೆ ಬೀಜಗಳಲ್ಲಿ ಆರೋಗ್ಯ ನಿಧಿ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ನಿಮ್ಮನು ನೀವು ಕಾಪಾಡಬಹುದು. 

ಅಗಸೆ ಬೀಜ(Flax seeds) ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ನೀವು ಯಾವುದೇ ರೀತಿಯ ದೈಹಿಕ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅಗಸೆ ಬೀಜ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಬಹಳ ಉತ್ತಮ. 

ಇದನ್ನೂ ಓದಿ : Coffee For Skin: ಕಾಫಿ ಪುಡಿಯನ್ನು ಈ ರೀತಿ ಬಳಸಿ ಮುಖದ ಮೇಲಿನ ಕಲೆ, ಮೊಡವೆಗಳಿಗೆ ಹೇಳಿ ಬೈ, ಬೈ!

ಅಗಸೆ ಬೀಜಗಳಲ್ಲಿ ಏನಿದೆ: ಒಂದು ಟೀ ಚಮಚ ಅಗಸೆಬೀಜ ಅಂದ್ರೆ 7 ಗ್ರಾಂ ಇದರಲ್ಲಿ 1.28 ಗ್ರಾಂ ಪ್ರೋಟೀನ್(Proteins), 2.95 ಗ್ರಾಂ ಕೊಬ್ಬು, 2.02 ಗ್ರಾಂ ಕಾರ್ಬೋಹೈಡ್ರೇಟ್, 1.91 ಗ್ರಾಂ ಫೈಬರ್, 17.8 ಮಿಲಿ ಗ್ರಾಂ ಕ್ಯಾಲ್ಸಿಯಂ, 27.4 ಮಿಲಿ ಗ್ರಾಂ ಮೆಗ್ನೀಸಿಯಮ್, 44.9 ಮಿಲಿ ಗ್ರಾಂ ರಂಜಕ, 56.9 ಮಿಲಿ ಗ್ರಾಂ ಪೊಟ್ಯಾಸಿಯಮ್, 6.09 ಮೈಕ್ರೊಗ್ರಾಂ ಫೋಲೇಟ್ ಮತ್ತು 45.6 ಮೈಕ್ರೊಗ್ರಾಂ ಲುಟೀನ್ ಮತ್ತು ಗ್ಯಾಕ್ಸಾಂಟಿನ್ ಕೂಡ ಇದೆ. 

ಅಗಸೆ ಬೀಜದ ಅದ್ಭುತ ಪ್ರಯೋಜನಗಳು: 

1. ಹೃದಯ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ: ಇದರಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ. ಅಗಸೆ ಬೀಜಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಬಹಳ ಸಹಾಯಕಾರಿಯಾಗಿದೆ. ಟೈಪ್ 2 ಡಯಾಬಿಟಿಸ್(Diabetes), ಕ್ಯಾನ್ಸರ್ ಕಡಿಮೆ ಮಾಡಲು ಈ ಬೀಜಗಳು ಸಹ ಸಹಾಯ ಮಾಡುತ್ತವೆ.

2. ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಅಗಸೆ ಬೀಜ: ಅಗಸೆ ಬೀಜಗಳು ನಮ್ಮ ದೇಹದ ಕೊಲೆಸ್ಟ್ರಾಲ್(Cholesterol) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ, ಪ್ರತಿದಿನ ಅಗಸೆ ಬೀಜಗಳನ್ನು ತಿನ್ನುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು 6 ರಿಂದ 11 ರಷ್ಟು ಕಡಿಮೆ ಮಾಡಬಹುದು. ಇದು ಹೆಚ್ಚಿನ ಫೈಬರ್ ಮತ್ತು ಲಿಗ್ನಿನ್ ಅಂಶವನ್ನು ಹೊಂದಿರುವುದರಿಂದ ಇದು ಸಹ ಸಾಧ್ಯವಿದೆ.

3. ಜೀರ್ಣಕಾರಿ ಶಕ್ತಿಯನ್ನು ಸುಧಾರಿಸುತ್ತದೆ: ಅಗಸೆಬೀಜವನ್ನು ನಿಯಮಿತವಾಗಿ ಸೇವಿಸುವ ಮೂಲಕ ನೀವು ನಿಮ್ಮ ಜೀರ್ಣಕ್ರಿಯೆ(Digestion) ಶಕ್ತಿಯನ್ನು ಹೆಚ್ಚಿಸಬಹುದು. ಇದರಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಕ್ರಿಯೆಯ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಲಬದ್ಧತೆಯ ಸಮಸ್ಯೆಗಳಿಂದ ನಿಮ್ಮನ್ನು ದೂರುವಿಡುತ್ತದೆ.

4. ಚರ್ಮಕ್ಕೆ ಪ್ರಯೋಜನಕಾರಿ ಅಗಸೆ ಬೀಜ: ಅಗಸೆಬೀಜದಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಫೈಟೊಕೆಮಿಕಲ್ಸ್ ಗುಣಗಳಿವೆ, ಇದು ಮುಖದ ಚರ್ಮ(Skin)ವನ್ನು ವೃದ್ಧಾಪ್ಯದಲ್ಲಿ ಯಂಗ್ ಆಗಿ ಕಾಣಲು ಇದು ಸಹಕಾರಿಯಾಗಿದೆ. ಇದರಿಂದ ಮುಖ ಸುಕ್ಕುಗಟ್ಟುವ ಸಮಸ್ಯೆಗಳು ಇರುವುದಿಲ್ಲ ಮತ್ತು ನಿಮ್ಮ ಮುಖದ ಚರ್ಮವನ್ನ ಹೊಳೆಯುವಂತೆ ಮಾಡುತ್ತದೆ.

ಇದನ್ನೂ ಓದಿ : National Refreshment Day 2021: ಮಳೆಗಾಲದಲ್ಲಿ ಟ್ರೈ ಮಾಡಿ ನೋಡಿ ದಾಲ್ಚಿನಿ- ಶುಂಠಿ ಮಿಶ್ರಿತ ಟೀ

ಯಾವ ಸಮಯದಲ್ಲಿ ಅಗಸೆಬೀಜವನ್ನ ತಿನ್ನಬೇಕು: ನೀವು ಖಾಲಿ ಹೊಟ್ಟೆಯಲ್ಲಿ ಅಗಸೆಬೀಜವನ್ನು ತಿನ್ನಬಹುದು. ಇದಲ್ಲದೆ, ರಾತ್ರಿ ಮಲಗುವ ಮೊದಲೇ ಅಗಸೆಬೀಜವನ್ನು ಸೇವಿಸಬಹುದು, ಏಕೆಂದರೆ ಇದು ಉತ್ತಮ ನಿದ್ರೆ ಮಾಡಲು ತುಂಬಾ ಸಹಾಯ ಮಾಡುತ್ತದೆ.

ಅಗಸೆಬೀಜ ಸೇವಿಸುವ ಸರಿಯಾದ ಮಾರ್ಗಗಳು: ಆರೋಗ್ಯ ತಜ್ಞರ ಪ್ರಕಾರ, ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಅಗಸೆ ಬೀಜಗಳನ್ನ ಹೊಲಗಳಲ್ಲಿ ಬೆಳೆದವು ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ಆದಷ್ಟು ರೈತರ ಹೊಲಗಳಲ್ಲಿ ಬೆಳ್ದ  ಅಗಸೆಬೀಜವನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ. ವಾಸ್ತವವಾಗಿ, ಅಗಸೆ ಬೀಜ ಮೇಲ್ಭಾಗದಲ್ಲಿ ಕಂದು ಮಿಶ್ರಣವನ್ನು ಹೊಂದಿರುತ್ತವೆ, ಇದು ಕರುಳಿಗೆ ಜೀರ್ಣಿಸಿಕೊಳ್ಳಲು ತುಂಬಾ ಕಷ್ಟ ಮತ್ತು ಈ ಕಾರಣದಿಂದಾಗಿ ದೇಹವು ಅಗಸೆಬೀಜದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅವುಗಳನ್ನ ಪುಡಿ ಮಾಡಿ ಸೇವಿಸುವುದು ಬಹಳ ಉತ್ತಮ ಎಂದು ಹೇಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News