"ಆಹಾ.. ಆ ಮೂಗು, ತುಟಿ, ಕಣ್ಣು..." ಮೃಣಾಲ್ ಠಾಕೂರ್ ಅಂದ ವರ್ಣಿಸಿದ ವಿಜಯ್ ದೇವರಕೊಂಡ!! ರಶ್ಮಿಕಾ ಏನಂತಾರೆ?

Vijay Deverakonda Praises Mrunal Thakur: ವಿಜಯ್ ದೇವರಕೊಂಡ ಅವರು ಮೃಣಾಲ್ ಠಾಕೂರ್ ಅವರ ಮೂಗು, ತುಟಿ ಮತ್ತು ಕಣ್ಣುಗಳ ಅಂದವನ್ನು ಹಾಡಿ ಹೊಗಳಿದ್ದಾರೆ.

Written by - Chetana Devarmani | Last Updated : Apr 3, 2024, 10:24 AM IST
  • ತೆಲುಗು ಸ್ಟಾರ್ ವಿಜಯ್ ದೇವರಕೊಂಡ
  • ರಿಲೀಸ್‌ಗೆ ರೆಡಿಯಾದ 'ಫ್ಯಾಮಿಲಿ ಸ್ಟಾರ್' ಸಿನಿಮಾ
  • ಮೃಣಾಲ್ ಠಾಕೂರ್ ಅಂದ ವರ್ಣಿಸಿದ ವಿಜಯ್ ದೇವರಕೊಂಡ
"ಆಹಾ.. ಆ ಮೂಗು, ತುಟಿ, ಕಣ್ಣು..." ಮೃಣಾಲ್ ಠಾಕೂರ್ ಅಂದ ವರ್ಣಿಸಿದ ವಿಜಯ್ ದೇವರಕೊಂಡ!! ರಶ್ಮಿಕಾ ಏನಂತಾರೆ?  title=

Vijay Deverakonda On Mrunal Thakur Beauty : ತೆಲುಗು ಸ್ಟಾರ್ ವಿಜಯ್ ದೇವರಕೊಂಡ ಅಭಿನಯದ 'ಫ್ಯಾಮಿಲಿ ಸ್ಟಾರ್' ಸಿನಿಮಾ ಇದೇ ಏಪ್ರಿಲ್‌ 05 ರಂದು ಅಂದರೆ ಶುಕ್ರವಾರ ರಿಲೀಸ್‌ ಆಗಲಿದೆ. ಇದು ಕೌಟುಂಬಿಕ ಚಿತ್ರವಾಗಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮಧ್ಯಮ ವರ್ಗದ ವ್ಯಕ್ತಿಯ ಪಾತ್ರದಲ್ಲಿ ನಟಿಸುತ್ತಿದ್ದು, ಕುಟುಂಬಕ್ಕಾಗಿ ಕಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿಜಯ್ ದೇವರಕೊಂಡ ತಮ್ಮ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರದ ಸಮಯದಲ್ಲಿ ಇತ್ತೀಚಿನ ಸಂದರ್ಶನದಲ್ಲಿ, ವಿಜಯ್ ದೇವರಕೊಂಡ ಅವರು ತಮ್ಮ ಸಹನಟಿ ಮೃಣಾಲ್ ಠಾಕೂರ್ ಅವರ ಅಂದವನ್ನು ಹೊಗಳಿದ್ದಾರೆ.

'ಫ್ಯಾಮಿಲಿ ಸ್ಟಾರ್' ಚಿತ್ರದಲ್ಲಿ ಮೃಣಾಲ್ ಠಾಕೂರ್ ಅವರೊಂದಿಗೆ ವಿಜಯ್ ದೇವರಕೊಂಡ ಅವರ ಕೆಮಿಸ್ಟ್ರಿ ಅದ್ಭುತವಾಗಿದೆ. ವಿಜಯ್ ದೇವರಕೊಂಡ ಇಂತಹ ಸ್ಮಾರ್ಟ್ ನಟಿಯೊಂದಿಗೆ ಕೆಲಸ ಮಾಡುವುದು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಇವರೇ... ಅತ್ತೆ ಮನೆಯಲ್ಲಿ ಹಿಂಸೆ, ಮುರಿದುಬಿದ್ದ ಎರಡನೇ ಮದುವೆ!!

ವಿಜಯ್ ದೇವರಕೊಂಡ ಅವರು ಮೃಣಾಲ್ ಠಾಕೂರ್ ಅವರನ್ನು ಹೊಗಳಿದ್ದಾರೆ. ಬುದ್ಧಿವಂತ ನಟಿ ನಿಮ್ಮೊಂದಿಗೆ ಇದ್ದಾಗ, ಕೆಲಸ ಮಾಡುವುದು ತುಂಬಾ ಸುಲಭವಾಗುತ್ತದೆ. ನಾನು ಸಿನಿಮಾದ ಕನಸು ಕಾಣುವ ಮೊದಲೇ ಮೃಣಾಲ್ ನಟಿಸುತ್ತಿದ್ದಾರೆ. ಅವರು ಚಿಕ್ಕ ವಯಸ್ಸಿನಿಂದಲೂ ಸಿನಿರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಷಯಗಳನ್ನು ಬೇಗನೆ ಅರ್ಥಮಾಡಿಕೊಳ್ಳುತ್ತಾರೆ. ಅವರ ಮುಖವಂತೂ ಅದ್ಭುತವಾಗಿದೆ. ಅವರ ಮೂಗು, ತುಟಿ, ಕಣ್ಣುಗಳು ಅದ್ಭುತ... ಭಾಷೆ ಗೊತ್ತಿಲ್ಲದಿದ್ದರೂ ಭಾವನೆಗಳು ಚೆನ್ನಾಗಿ ಮೂಡಿಬರುತ್ತದೆ. ಅವಳೊಂದಿಗೆ ಕೆಲಸ ಮಾಡುವುದು ಸುಲಭ ಎಂದು ವಿಜಯ್‌ ದೇವರಕೊಂಡ ಹೇಳಿದರು. 

'ಫ್ಯಾಮಿಲಿ ಸ್ಟಾರ್' ಚಿತ್ರವನ್ನು ಪರಶುರಾಮ್ ಬರೆದು ನಿರ್ದೇಶಿಸಿದ್ದಾರೆ. 'ಫ್ಯಾಮಿಲಿ ಸ್ಟಾರ್' ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ಪರಶುರಾಮ್ ಪೆಟ್ಲ ಅವರ ಎರಡನೇ ಚಿತ್ರವಾಗಿದೆ. ಇದಕ್ಕೂ ಮುನ್ನ ಇಬ್ಬರೂ ಒಟ್ಟಿಗೆ ಗೀತಾ ಗೋವಿಂದಂ (2018) ಸಿನಿಮಾ ಮಾಡಿದ್ದರು. 

ಇದನ್ನೂ ಓದಿ: ಗೆಳತಿ ಗಂಡನಿಗೆ ಅಣ್ಣ ಎಂದು ರಾಖಿ ಕಟ್ಟಿದ್ಳು.. ಬಳಿಕ ಆತನಿಂದಲೇ ಮದುವೆಗೂ ಮುನ್ನ ಗರ್ಭಿಣಿಯಾದ್ಳು ಈ ಖ್ಯಾತ ನಟಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News