Bhagyalakshmi Serial: ತಾಂಡವ್‌ಗೆ ಮನೆಯವರಿಂದ ಕ್ಲಾಸ್‌: ಗಂಡ ತತ್ತರಿಸುವಂತೆ ಉತ್ತರಿಸಿದ ಭಾಗ್ಯ!

Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ಪರೀಕ್ಷೆಗೆ ಹೊರಟ ಭಾಗ್ಯ ಹಾಗೂ ತನ್ವಿಯನ್ನು ತಡೆದು ಮಾತನಾಡಿಸುತ್ತಾನೆ. ಭಾಗ್ಯಾ ಗಂಡನಿಗೆ ಖಡಕ್‌ ಆಗಿ ಉತ್ತರ ಕೊಡುತ್ತಾಳೆ. ನಂತರ ಮನೆಯವರು ಈತನಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಹಾಗಾದ್ರೇ ತಾಂಡವ್‌ ಹೇಳಿದ್ದಾದರೂ ಏನು? ಮನೆಮಂದಿ ಏತಕ್ಕೆ ತರಾಟೆಗೆ ತೆಗೆದುಕೊಂಡರು. ಇಲ್ಲಿದೆ ಕಂಪ್ಲೀಟ್‌ ಸ್ಟೋರಿ.  

Written by - Zee Kannada News Desk | Last Updated : Apr 21, 2024, 11:32 AM IST
  • ತಾಂಡವ್‌ಗೆ ಮೊದಲೇ ಭಾಗ್ಯಾ ಶಾಲೆಗೆ ಹೋಗಬಾರದು, ಪರೀಕ್ಚೆ ಬರೆಯಬಾರದು, ಎಸ್ಎಸ್ಎಲ್ಸಿ ಕಂಪ್ಲೀಟ್ ಮಾಡಬಾರದು ಎಂಬುದು ತೆಲೆಯಲ್ಲಿ ಕೂತಿದೆ.
  • ತಾಂಡವ್‌ ಮಾತನಾಡಬೇಕು ಎಂದಿದಕ್ಕೆ ಸದ್ಯ ಬಹಳ ಸ್ಟ್ರಾಂಗ್ ಅಂಡ್ ಸ್ವಾಭಿಮಾನಿಯಾಗಿರುವ ಭಾಗ್ಯಾ ಅದೇನು ಹೇಳಿ ಅಂತ ಧೈರ್ಯವಾಗಿ ಕೇಳಿದ್ದಾಳೆ.
  • ಭಾಗ್ಯಾ ಮಗಳನ್ನು ಕರೆದುಕೊಂಡು ಹೋದ ನಂತರ ಕುಸುಮಾ ಮಗನಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ.
Bhagyalakshmi Serial: ತಾಂಡವ್‌ಗೆ ಮನೆಯವರಿಂದ ಕ್ಲಾಸ್‌: ಗಂಡ ತತ್ತರಿಸುವಂತೆ ಉತ್ತರಿಸಿದ ಭಾಗ್ಯ! title=

Thandav Talks About Home Loan: ಖಾಸಗಿ ವಾಹಿನಿಯಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರವಾಹಿಯಲ್ಲಿ ತಾಂಡವ್‌ ಶ್ರೇಷ್ಠಾಳ ಮೇಲ್ನೋಟದ ಪ್ರೀತಿಗೆ ಬಿದ್ದು, ಭಾಗ್ಯಾಳಿಗೆ  ತೊಂದರೆಯನ್ನು ಕೊಡುತ್ತಾನೆ ಇರುತ್ತಾನೆ. ಇದೀಗ ತಾಂಡವ್‌ ಸ್ಕೂಲ್‌ನಲ್ಲಿ ಭಾಗ್ಯಾ ಹಾಗೂ ತನ್ವಿಗೆ ಪರೀಕ್ಷೆ ಇದೆ ಅಂತ ಗೊತ್ತಿದ್ದರೂ ಕೂಡ ಪೀಡಿಸುತ್ತಾನೆ. ಪರೀಕ್ಷೆಯನ್ನು ಬರೆಯಲು ಭಾಗ್ಯಾ ಹಾಗೂ ತನ್ವಿ ಚೆನ್ನಾಗಿ ಓದಿಕೊಂಡು ಹೊರಟಿರುತ್ತಾರೆ. ಆದರೆ ತಾಂಡವ್‌ ಅವರಿಬ್ಬರನ್ನು ತಡೆದು ನಿಲ್ಲಿಸಿ ಮಾತನಾಡಬೇಕು ಎಂದು ಹೇಳುತ್ತಾನೆ.

ತಾಂಡವ್‌ಗೆ ಮೊದಲೇ ಭಾಗ್ಯಾ ಶಾಲೆಗೆ ಹೋಗಬಾರದು, ಪರೀಕ್ಚೆ ಬರೆಯಬಾರದು, ಎಸ್ಎಸ್ಎಲ್ಸಿ ಕಂಪ್ಲೀಟ್ ಮಾಡಬಾರದು ಎಂಬುದು ತೆಲೆಯಲ್ಲಿ ಕೂತಿದೆ. ಅದಕ್ಕಂತಾನೇ ಸಾಕಷ್ಟು ಬಾರಿ ಗೇಮ್ ಪ್ಲಾನ್‌ ಕೂಡ ಮಾಡಿದ್ದನು. ಅದರಂತೆ ಇದೀಗ ಪರೀಕ್ಷೆಗೆ ಸಮಯವಾಗಲೀ ಎಂದೇ ತಡೆದಿದ್ದಾನೆ. ಅದೇ ಸಂದರ್ಭದಲ್ಲಿ ಕುಸುಮಾ ಪರೀಕ್ಷೆಗೆ ಹೊರಟವರನ್ನು ಯಾಕೆ ತಡೆದೆ. ಅದೇನೆ ಇದ್ದರು ಬಂದ ಮೇಲೆ ಮಾತಾಡಿವಂತೆ ಬಿಡು ಎಂದು ಹೇಳಿದರೂ ಸಹ ಇದು ಬಹಳ ಮುಖ್ಯ, ಭಾಗ್ಯಾ ಹತ್ರ ಮಾತನಾಡಲೇಬೇಕು ಎಂದು ಹೇಳುತ್ತಾನೆ.

ಇದನ್ನೂ ಓದಿ: Bollywood Actress: ಬಾಲಿವುಡ್‌ನ ಈ ನಟಿಮಣಿಯರು ಭಾರತದಲ್ಲಿ ಎಂದಿಗೂ ಮತದಾನ ಮಾಡುವುದಿಲ್ಲ! ಕಾರಣವೇನು ಗೊತ್ತೇ?

ತಾಂಡವ್‌ ಮಾತನಾಡಬೇಕು ಎಂದಿದಕ್ಕೆ ಸದ್ಯ ಬಹಳ ಸ್ಟ್ರಾಂಗ್ ಅಂಡ್ ಸ್ವಾಭಿಮಾನಿಯಾಗಿರುವ ಭಾಗ್ಯಾ ಅದೇನು ಹೇಳಿ ಅಂತ ಧೈರ್ಯವಾಗಿ ಕೇಳಿದ್ದಾಳೆ. ಅವಾಗ ತಾಂಡವ್ ಮನೆಯ ಲೋನ್ ವಿಚಾರ ತೆಗೆಯುತ್ತಾನೆ. ತಾಂಡವ್‌ "ಮನೆಯನ್ನು ಅರ್ಧ ಭಾಗ ಮಾಡಿದರೆ ಸಾಲದು ಅದರ ಇಎಂಐನಲ್ಲೂ ಅರ್ಧ ಖರ್ಚು ನೋಡಿಕೊಳ್ಳಬೇಕು. ನಾನ್ಯಾಕೆ ನಿಮ್ಮೆಲ್ಲರದ್ದು ಹಣ ಕಟ್ಟಬೇಕು. ಕಟ್ಟೋದಕ್ಕೆ ಆಗದೆ ಹೋದರೆ ನಿನ್ನ ಜೊತೆಗೆ ಇರುವ ಎಲ್ಲರನ್ನು ಕರೆದುಕೊಂಡು ಹೋಗ್ತಾ ಇರು" ಅಂತ ಹೇಳುತ್ತಾನೆ. ಆಗ ಮಗನ ಮಾತಿಗೆ ಕುಸುಮಾ ವಿರೋಧ ವ್ಯಕ್ತಪಡಿಸಿದ್ದಾಳೆ.

ಆದರೆ ಭಾಗ್ಯ ತನ್ನ ಅತ್ತೆಯೇ ಇವಬಳ ಪರವಾಗಿ ಮಾತನಾಡುವುದಕ್ಕೆ ಧ್ವನಿ ಎತ್ತಿದಾಗಲೇ "ಆಯ್ತು ಮನೆಯ ಅರ್ಧ ಹಣ ನಾನು ಕೊಡುತ್ತೇನೆ. ಹಣ ಕೇಳಿ ನನ್ನನ್ನು ಶಾಲೆಯಿಂದ ಹಿಂದೆ ಕರೆಸಿಕೊಳ್ಳಬಹುದು ಎಂದುಕೊಳ್ಳಬೇಡಿ. ನಮ್ಮ ಅತ್ತೆ, ಮಾವನಿಗಾಗಿ, ಮಕ್ಕಳಿಗಾಗಿ ನಾನು ನಿಲ್ಲುತ್ತೇನೆ. ಇನ್ಮೇಲೆ ಪ್ರತಿ ತಿಂಗಳ ಅರ್ಧ ಖರ್ಚು ನನ್ನದೇ " ಎಂದ್ಹೇಳಿ ಅಲ್ಲಿಂದ ಹೊರಟು ಹೊಗುತ್ತಾಳೆ. ಭಾಗ್ಯಾ ಮಗಳನ್ನು ಕರೆದುಕೊಂಡು ಹೋದ ನಂತರ ಕುಸುಮಾ ಮಗನಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. 

ಇದನ್ನೂ ಓದಿ: Puttakkana Makkalu: ಸ್ನೇಹಾ ಕೈ ಸೇರಿದ ಡಿವೋರ್ಸ್‌ ಪೇಪರ್:‌ ಬಂಗಾರಮ್ಮನ ಕಾಲಿಗೆ ಬಿದ್ದ ಕ್ಷಮೆ ಕೇಳಿದ ಸೊಸೆ!

ಭ್ಯಾಗ್ಯಾ ಶಾಲೆಗೆ ಹೋದ ಬಳಿಕ ಕುಸುಮಾ ತಾಂಡವ್‌ಗೆ "ಗೆಲ್ಲುವುದಾದರೇ ಅಪ್ಪ ಅಮ್ಮನನ್ನು ಪ್ರೀತಿಯಿಂದ ಗೆಲ್ಲು. ಈ ರೀತಿ ಹಣದಿಂದ ಅಲ್ಲ. ನನ್ನ ಸೊಸೆ ಹಣ ಕೊಡುತ್ತಾಳೆ. ಎಲ್ಲಿಂದ ಆದರೂ ಅದರ ಅಗತ್ಯ ನಿನಗಿಲ್ಲ. ಪಕ್ಕದ ಮನೆಯವರು ಪಕ್ಕಕ್ಕೆ ಸರಿದರೆ ಒಳ್ಳೆಯದು" ಅಂತ ಹೇಳಿ ಕುಸುಮಾ ತನ್ನ ಗಂಡನನ್ನು ಕರೆದುಕೊಂಡು ಒಳಗೆ ಹೋಗುತ್ತಾಳೆ. ತಾಂಡವ್‌ಗೆ ಏನೋ ಮಾಡಲು ಹೋಗಿ ಏನು ಮಾಡಿದೆ ನಾನು ಎಂಬಂತೆ ಆಗಿ ಸುಮ್ಮನೆ ನಿಂತಿದ್ದಾನೆ. ಮುಂದೆ ಭಾಗ್ಯಾ ತನ್ನ ಮಾತಿನಂತೆ ಅರ್ಧ ಖರ್ಚನ್ನು ನೀಡುತ್ತಾಳಾ? ತಾಂಡವ್‌ ಮತ್ತೇನಾದರು ತೊಂದರೆ ಮಾಡುತ್ತಾನಾ? ಎಂಬುದನ್ನು ಮುಂಬರುವ ಸಂಚಿಕೆಯಲ್ಲಿ ನೋಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News