"ನನಗೆ ಮದುವೆ ಬೇಡ.. ಮಕ್ಕಳು ಮಾತ್ರ ಬೇಕು" ಖ್ಯಾತ ನಟಿ ಸೆನ್ಸೇಷನಲ್‌ ಕಾಮೆಂಟ್!!

Actress faria abdullah: ಒಂದೆಡೆ ಸಿನಿಮಾ ಮಾಡುವಾಗಲೇ ನಾಯಕಿಯರು ತಮ್ಮ ವೈಯಕ್ತಿಕ ಜೀವನಕ್ಕೂ ತಕ್ಕ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮದುವೆಯಾದ ನಾಯಕಿಯರು ಕೂಡ ತಮ್ಮ ದಾಂಪತ್ಯ ಜೀವನವನ್ನು ತಮ್ಮ ವೃತ್ತಿಜೀವನದೊಂದಿಗೆ ಸಮತೋಲನದಲ್ಲಿರಿಸಿಕೊಳ್ಳುತ್ತಿದ್ದಾರೆ.. ಕೆಲವು ನಾಯಕಿಯರು ಮದುವೆಯ ನಂತರ ಸಿನಿಮಾಗಳಲ್ಲಿ ನಟಿಸುತ್ತಿದ್ದರೆ, ಇನ್ನು ಕೆಲವರು ತಾಯಿಯಾದ ನಂತರವೂ ನಟಿಸಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

Written by - Savita M B | Last Updated : May 8, 2024, 11:25 AM IST
  • ಮದುವೆಯಾದ ಬೆನ್ನಲ್ಲೇ ಬಾಲಿವುಡ್ ನಾಯಕಿ ಆಲಿಯಾ ಭಟ್ ಗರ್ಭಿಣಿಯಾದರು.
  • ಇತ್ತೀಚೆಗಷ್ಟೇ ನಾಯಕಿಯೊಬ್ಬರು ಬೋಲ್ಡ್ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ.
"ನನಗೆ ಮದುವೆ ಬೇಡ.. ಮಕ್ಕಳು ಮಾತ್ರ ಬೇಕು" ಖ್ಯಾತ ನಟಿ ಸೆನ್ಸೇಷನಲ್‌ ಕಾಮೆಂಟ್!! title=

faria abdullah: ಮದುವೆಯಾದ ಬೆನ್ನಲ್ಲೇ ಬಾಲಿವುಡ್ ನಾಯಕಿ ಆಲಿಯಾ ಭಟ್ ಗರ್ಭಿಣಿಯಾದರು. ಹೆರಿಗೆಯಾದ ನಂತರವೂ ಆಲಿಯಾ ಭಟ್ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾದರು. ತಮಿಳಿನ ಸ್ಟಾರ್ ಹೀರೋಯಿನ್ ನಯನತಾರಾ ಕೂಡ ಎರಡು ಮಕ್ಕಳನ್ನು ದತ್ತು ಪಡೆದ ನಂತರವೂ ಸಾಲು ಸಾಲು ಚಿತ್ರಗಳನ್ನು ಮಾಡುತ್ತಿದ್ದಾರೆ. 

ಇತ್ತೀಚೆಗಷ್ಟೇ ನಾಯಕಿಯೊಬ್ಬರು ಬೋಲ್ಡ್ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ನಾನು ಮದುವೆಯಾಗುವುದಿಲ್ಲ ಆದರೆ ನನಗೆ ಮಕ್ಕಳು ಎಂದು ಹೇಳುವ ಮೂಲಕ ನಾಯಕಿ ಫರಿಯಾ ಅಬ್ದುಲ್ಲಾ ಶಾಕ್ ನೀಡಿದ್ದಾರೆ..

ಇದನ್ನೂ ಓದಿ-ಮರು ಘರ್ಜನೆಗೆ ಮತ್ತೆ ಮರಳುತ್ತಿದೆ RRR : ಬಿಡುಗಡೆಗೆ ಮತ್ತೆ ಸಜ್ಜಾದ ಎಸ್ ಎಸ್ ರಾಜಮೌಳಿ ಚಿತ್ರ

ಇನ್ನು ಫರಿಯಾ ಅಬ್ದುಲ್ಲಾ ಜಾತಿರತ್ನಲು ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಇತ್ತೀಚೆಗಷ್ಟೇ ನರೇಶ್ ಅಭಿನಯದ ‘ಆ ಒಕ್ಕಟಿ ಅಡಕ್ಕು’ ಚಿತ್ರದಲ್ಲಿ ಈ ಚೆಲುವೆ ನಾಯಕಿಯಾಗಿ ನಟಿಸಿದ್ದರು. ಸಿನಿಮಾ ಪ್ರಮೋಷನ್ ಭಾಗವಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಫರಿಯಾ ಅಬ್ದುಲ್ಲಾ ತಮ್ಮ ವೃತ್ತಿ ಮತ್ತು ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 

'ನನಗೆ ನನ್ನ ಮದುವೆಯ ಬಗ್ಗೆ ಯಾವುದೇ ಭರವಸೆ ಇಲ್ಲ. ನಾನು ಖಂಡಿತವಾಗಿಯೂ ಮದುವೆಯಾಗಬೇಕು ಎಂದು ಯೋಚಿಸುವುದಿಲ್ಲ. ಆದರೆ ನಾನು ಮಕ್ಕಳನ್ನು ಪ್ರೀತಿಸುತ್ತೇನೆ. ಮದುವೆಯಾಗದೇ ಮಕ್ಕಳನ್ನು ಪಡೆಯಲು ಬಯಸುತ್ತೇನೆ" ಎಂದಿದ್ದಾಳೆ. ಸದ್ಯ, ಫರಿಯಾ ಅವರ ಕಾಮೆಂಟ್‌ಗಳು ವೈರಲ್ ಆಗಿವೆ.

ಇದನ್ನೂ ಓದಿ-Shruti Hariharan :ಬಿಸಿಲಿನಲ್ಲಿ ಏಣಿ ಹತ್ತಿ ವಿಭಿನ್ನ ಉಡುಗೆಯಲ್ಲಿ ಕಂಡ ನಾತಿಚರಾಮಿ ಹುಡುಗಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News