23 ವಯಸ್ಸಿನಲ್ಲೇ ʼಅದನ್ನೆಲ್ಲʼ ಮಾಡಿದೆ, ಮದುವೆಗೂ ಮುನ್ನವೇ ತಾಯಿಯಾದೆ.. ಖ್ಯಾತ ನಟಿ ಓಪನ್‌ ಕಾಮೆಂಟ್!‌

South Actress: ರೊಮ್ಯಾಂಟಿಕ್ ತಾರೆ ಶಕೀಲಾ ತಮ್ಮ ವೈಯಕ್ತಿಕ ಜೀವನದ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು... ಹಲವರನ್ನು ಪ್ರೀತಿಸಿ ಮದುವೆಯಾಗದಿದ್ದರೂ ತಾಯಿಯಾಗಿದ್ದೇನೆ ಎಂದಿದ್ದಾರೆ..   

Written by - Savita M B | Last Updated : Mar 24, 2024, 11:17 AM IST
  • ಅಡಲ್ಟ್ ಚಿತ್ರಗಳ ಮೂಲಕ ಮಲಯಾಳಂ ಚಿತ್ರರಂಗವನ್ನು ಆಳಿದವರು ಶಕೀಲಾ.
  • ಒಂದು ಹಂತದಲ್ಲಿ ಅವಳು ಸ್ಟಾರ್ ನಟಿ ಆಗಿದ್ದರು..
  • ಬಿಗ್ ಬಾಸ್ ಸೀಸನ್ 7ರಲ್ಲಿ ಶಕೀಲಾ ಭಾಗವಹಿಸಿ ಇನ್ನಷ್ಟು ಖ್ಯಾತಿ ಪಡೆದರು..
23 ವಯಸ್ಸಿನಲ್ಲೇ ʼಅದನ್ನೆಲ್ಲʼ ಮಾಡಿದೆ, ಮದುವೆಗೂ ಮುನ್ನವೇ ತಾಯಿಯಾದೆ.. ಖ್ಯಾತ ನಟಿ ಓಪನ್‌ ಕಾಮೆಂಟ್!‌  title=

Actress Shakeela: ಅಡಲ್ಟ್ ಚಿತ್ರಗಳ ಮೂಲಕ ಮಲಯಾಳಂ ಚಿತ್ರರಂಗವನ್ನು ಆಳಿದವರು ಶಕೀಲಾ. ಒಂದು ಹಂತದಲ್ಲಿ ಅವಳು ಸ್ಟಾರ್ ನಟಿ ಆಗಿದ್ದರು.. ಆದರೆ ತಾರಾಗಣದ ಅಭಾವದಿಂದ ಶಕೀಲಾ ಅನೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡಿದರು. ಕಳೆದ ವರ್ಷ ಪ್ರಸಾರವಾದ ಬಿಗ್ ಬಾಸ್ ಸೀಸನ್ 7ರಲ್ಲಿ ಶಕೀಲಾ ಭಾಗವಹಿಸಿ ಇನ್ನಷ್ಟು ಖ್ಯಾತಿ ಪಡೆದರು..   

ಇದನ್ನೂ ಓದಿ-Samantha: ಬೋಲ್ಡ್‌ ಫೋಟೋಶೂಟ್‌ ಶೇರ್‌ ಮಾಡಿ ತನ್ನನು ತಾನು ಡ್ರ್ಯಾಗನ್‌ ಎಂದ ಸ್ಯಾಮ್!!

ಬಿಗ್ ಬಾಸ್ ತೆಲುಗು 7 ರಲ್ಲಿ ಭಾಗವಹಿಸಿದ್ದ ಶಕೀಲಾ 2 ನೇ ವಾರದಲ್ಲಿ ಎಲಿಮಿನೇಟ್ ಆಗಿದ್ದರು.. ಇತ್ತೀಚಿನ ಸಂದರ್ಶನದಲ್ಲಿ ಶಕೀಲಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನೇಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಬಿಗ್ ಬಾಸ್ ಶೋ ಆಫರ್ ಕರೆ ಬಂದಾಗ ಅದು ಫೇಕ್ ಎಂದುಕೊಂಡಿದ್ದೆ. ನಂತರ ನಾನು ನಂಬಿದೆ. ಎರಡು ಮೂರು ವಾರಗಳಿಗಿಂತ ಹೆಚ್ಚು ಇರಲು ನನಗೆ ಇಷ್ಟವಿರಲಿಲ್ಲ. ಯಾಕೆಂದರೆ ಆಗ ಜಗಳ ಶುರುವಾಗುತ್ತದೆ. ಅಮ್ಮನಾಗಿ ಮನೆಯೊಳಗೆ ಹೋದೆ, ಅಮ್ಮನಾಗಿ ಬಿಡಬೇಕು ಅಂದುಕೊಂಡೆ. ಬಿಗ್ ಬಾಸ್ ಕಾರ್ಯಕ್ರಮದಿಂದ ಮೊದಲೇ ಎಲಿಮಿನೇಟ್ ಆದ ಬಗ್ಗೆ ನನಗೆ ಬೇಸರವಿಲ್ಲ. ಇಲ್ಲಿಯವರೆಗೂ ಒಟ್ಟು 400 ಚಿತ್ರಗಳಲ್ಲಿ ನಟಿಸಿದ್ದೇನೆ. ತೆಲುಗಿನಲ್ಲಿ ಸುಮಾರು 40 ಸಿನಿಮಾ ಮಾಡಿದ್ದೇನೆ. ಇನ್ನೂ ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸುತ್ತಿದ್ದೇನೆ" ಎಂದಿದ್ದಾರೆ.. 

ಇದನ್ನೂ ಓದಿ-Sharukh Khan: ರೋಲ್‌ ಮಾಡೆಲ್‌ ಆಗಿದ್ದ ಶಾರುಖ್‌ ಖಾನ್.. ಪಬ್ಲಿಕ್‌ ಪ್ಲೇಸ್‌ನಲ್ಲಿ ಸಿಗರೇಟ್‌ ಸೇದಿದ ವಿಡಿಯೋ ವೈರಲ್‌!!

ಅಲ್ಲದೇ "ನಾನು ನನ್ನ ಕುಟುಂಬಕ್ಕಾಗಿ ವಯಸ್ಕ ಚಿತ್ರಗಳನ್ನು ಮಾಡಿದ್ದೆ.. ಆದರೆ ಈಗ ಅವರು ನನ್ನೊಂದಿಗಿಲ್ಲ. ಹಣವಿದ್ದಾಗ ಯಾರಾದರೂ ನಮ್ಮೊಂದಿಗೆ ಇರುತ್ತಾರೆ. ಇಲ್ಲದಿದ್ದರೆ ಯಾರು ಇರುವುದಿಲ್ಲ. ನನಗೆ ಆಹಾರ ಮತ್ತು ಬಟ್ಟೆಗೆ ಯಾವುದೇ ತೊಂದರೆ ಇಲ್ಲ. ಆದರೆ ನನ್ನ ಕುಟುಂಬ ನನ್ನೊಂದಿಗಿಲ್ಲ. ನಾನು 23 ನೇ ವಯಸ್ಸಿನಲ್ಲಿ ಎಲ್ಲವನ್ನೂ ನೋಡಿದೆ. ಅನುಭವಿ ತಾರಾಪಟ್ಟ ಪಡೆದುಕೊಂಡೆ. ನಾನು ಐದು ಕಾರುಗಳು ಮತ್ತು ಮನೆಗಳನ್ನು ಖರೀದಿಸಿದೆ. ನಾನು ಅನೇಕ ಜನರನ್ನು ಪ್ರೀತಿಸಿದ್ದೇನೆ. ಪ್ರೀತಿಪಾತ್ರರೆಲ್ಲ ಮೋಸ ಮಾಡಿ ಹೊರಟು ಹೋಗಿದ್ದಾರೆ. ಜೀವನವು ಕುಟುಂಬ ಮಾತ್ರವಲ್ಲ. ನಾನು ಟ್ರಾನ್ಸ್ಜೆಂಡರ್ ಅನ್ನು ದತ್ತು ತೆಗೆದುಕೊಂಡಿದ್ದೇನೆ... ಅವರಿಗೆ ಮದುವೆ ಮಾಡುತ್ತಿದ್ದೇನೆ. ನಾನು ಮದುವೆಯಾಗಿಲ್ಲ ಆದರೂ ಬಾಡಿಗೆ ತಾಯ್ತನದ ಮೂಲಕ ತಾಯಿಯಾದೆ. ಸದ್ಯ ನನಗೆ ತೆಲುಗಿನಲ್ಲಿ ಸಿನಿಮಾ ಮಾಡುವ ಆಸೆ ಇದೆ" ಎಂದು ಶಕೀಲಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News