ಮತ್ತೆ ಶುರುವಾಗುತ್ತಾ ಮಜಾ ಟಾಕೀಸ್?‌

 ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ನಟನಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿ ಕನ್ನಡಿಗರಿಗೆ ಇಷ್ಟವಾಗಿದ್ದು ಸುಳ್ಳಲ್ಲ. ಆದರೆ, ಅದಕ್ಕಿಂತಲೂ ಹೆಚ್ಚಾಗಿ ಸೃಜನ್ ಕನ್ನಡಿಗರ ಮನೆಮಗನಾಗಿದ್ದು ಟಾಕಿಂಗ್ ಶೋ ಮಜಾ ಟಾಕೀಸ್‌ ಮೂಲಕ, ಮಜಾ ಟಾಕೀಸ್‌ನಿಂದಲೇ ಸೃಜನ್‌ರನ್ನು ಜನ ಬಹಳ ಇಷ್ಟಪಟ್ಟಿದ್ದಾರೆ.

Written by - CHARITHA PATEL | Edited by - Manjunath Naragund | Last Updated : Mar 29, 2022, 06:49 PM IST
  • 3 ಸೀಸನ್‌ಗಳಲ್ಲಿ ನೂರಾರು ಎಪಿಸೋಡ್‌ನಿಂದ ಮಜಾ ಟಾಕೀಸ್ ಯಶಸ್ವಿಯಾಗಿದೆ.
  • ಸೃಜನ್ ಲೋಕೇಶ್ (Srujan Lokesh) ಮತ್ತು ತಂಡದ ಕಾಮಿಡಿ ಸಖತ್ ಇಷ್ಟವಾಗಿದೆ. ಸಿನಿಮಾಗಳ ಪ್ರಚಾರಕ್ಕೆ‌ ಮಜಾ ಮನೆಯೇ ಮಂದಿರವಾಗಿತ್ತು.
ಮತ್ತೆ ಶುರುವಾಗುತ್ತಾ ಮಜಾ ಟಾಕೀಸ್?‌ title=

ಬೆಂಗಳೂರು:  ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ನಟನಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿ ಕನ್ನಡಿಗರಿಗೆ ಇಷ್ಟವಾಗಿದ್ದು ಸುಳ್ಳಲ್ಲ. ಆದರೆ, ಅದಕ್ಕಿಂತಲೂ ಹೆಚ್ಚಾಗಿ ಸೃಜನ್ ಕನ್ನಡಿಗರ ಮನೆಮಗನಾಗಿದ್ದು ಟಾಕಿಂಗ್ ಶೋ ಮಜಾ ಟಾಕೀಸ್‌ ಮೂಲಕ, ಮಜಾ ಟಾಕೀಸ್‌ನಿಂದಲೇ ಸೃಜನ್‌ರನ್ನು ಜನ ಬಹಳ ಇಷ್ಟಪಟ್ಟಿದ್ದಾರೆ.

3 ಸೀಸನ್‌ಗಳಲ್ಲಿ ನೂರಾರು ಎಪಿಸೋಡ್‌ನಿಂದ ಮಜಾ ಟಾಕೀಸ್ ಯಶಸ್ವಿಯಾಗಿದೆ. ಸೃಜನ್ ಲೋಕೇಶ್ (Srujan Lokesh) ಮತ್ತು ತಂಡದ ಕಾಮಿಡಿ ಸಖತ್ ಇಷ್ಟವಾಗಿದೆ. ಸಿನಿಮಾಗಳ ಪ್ರಚಾರಕ್ಕೆ‌ ಮಜಾ ಮನೆಯೇ ಮಂದಿರವಾಗಿತ್ತು. 

ಇದನ್ನೂ ಓದಿ: Garadi Shoot In Badami: ಬಾದಾಮಿಯಲ್ಲಿ ಯೋಗರಾಜ್ ಭಟ್ಟರ "ಗರಡಿ"

ಮಜಾಟಾಕೀಸ್‌ ಸೃಜನ್ ಲೋಕೇಶ್ ಅವರನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಯಾವುದೇ ಒಂದು ಶೋನ ಸೀಸನ್‌ಗಳು ಒಂದಲ್ಲ ಒಂದು ದಿನ ಮುಕ್ತಾಯವಾಗಲೇ ಬೇಕು. ಎಷ್ಟೇ ಅದ್ಭುತ ಶೋವಾಗಿದ್ದರೂ ನಿರಂತರ ಪ್ರಸಾರದ ನಂತರ ಒಂದೊಳ್ಳೆ ಬ್ರೇಕ್ ಬೇಕಾಗುತ್ತದೆ. ಅಂತೆಯೇ ಸೃಜಾನ್‌ರ ಮಜಾ ಟಾಕೀಸ್‌ಗೆ ಬ್ರೇಕ್ ಬಿದ್ದು ವರ್ಷ ಸಮೀಪಿಸುತ್ತಿದೆ. 2021ರ ಜುಲೈ 3 ಮತ್ತು 4 ರಂದು ಮಜಾ ಟಾಕೀಸ್ ಗ್ರ್ಯಾಂಡ್ ಫಿನಾಲೆಯನ್ನು‌ ಮುಗಿಸಿತು. ಆಮೇಲೆ ಸೃಜನ್ ರಾಜಾರಾಣಿ ಶೋನಲ್ಲಿ ಕಾಣಿಸಿಕೊಂಡ್ರು.

ಇದನ್ನೂ ಓದಿ: 'Antu-Intu' Updates - ಇಬ್ಬರು ಹೆಣ್ಣುಮಕ್ಕಳ ಉಸ್ತುವಾರಿಯಲ್ಲಿ ಶೀಘ್ರದಲ್ಲಿಯೇ ಬರಲಿದೆ "ಅಂತು ಇಂತು" ಚಿತ್ರ

ಇದೀಗ ʻನನ್ನಮ್ಮ ಸೂಪರ್ ಸ್ಟಾರ್‌ʼನಲ್ಲಿ ಸೃಜಾ ಬ್ಯುಸಿ ಇದ್ದಾರೆ. ಸೃಜಾ ನಡೆಸಿಕೊಡುವ ಕಾರ್ಯಕ್ರಮಗಳಿಗೆ ಟಿಆರ್‌ಪಿ ಇದ್ದೇ ಇರುತ್ತೆ. ಅವರ ರಿಯಾಲಿಟಿ ಶೋಗಳು 100% ಗೆಲ್ತಾವೆ.ಯಾವುದೇ ಶೋ ಇರಲಿ ಇಲ್ಲದಿರಲಿ ಮಜಾ ಟಾಕೀಸ್ ಮಾತ್ರ ದೀರ್ಘಾವಧಿ ನಿಲ್ಲಬಾರದು ಎಂಬುದು ಅಭಿಮಾನಿಗಳ ಆಸೆ. ನನ್ನಮ್ಮ ಸೂಪರ್ ಸ್ಟಾರ್ ಬಳಿಕ ಸೃಜನ್ ಮತ್ತೆ ಮಜಾ ಟಾಕೀಸ್ ನಡೆಸುತ್ತಾರೆಂಬ ಚರ್ಚೆ ನಡೆಯುತ್ತಿದೆ.

ಸೃಜಾ ಹೊಸ ರಿಯಾಲಿಟಿ ಶೋದತ್ತ ಮುಖ‌ಮಾಡಿದರೂ ಜೊತೆ ಜೊತೆಗೆ ಇದನ್ನೂ ನಡೆಸಿಕೊಂಡು ಹೋಗಲಿ ಅನ್ನೋರು ಇದ್ದಾರೆ. ಸದ್ಯದಲ್ಲೇ ಇದಕ್ಕೆ ಉತ್ತರ ಸಿಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News