Rashmika : ವಿಜೇತರೆಲ್ಲರಿಗೂ ವಿಶ್ ಮಾಡಿದ ರಶ್ಮಿಕಾ ಕನ್ನಡದ ಚಾರ್ಲಿ ಯನ್ನೇ ಮರೆತು ಬಿಟ್ರಾ?

Rashmika Mandanna :69ನೇ ರಾಷ್ಟ್ರೀಯ ಚಲನಚಿತ್ರ​ ಪ್ರಶಸ್ತಿಯ ಬೆಸ್ಟ್​ ಫೀಚರ್​ ಸಿನಿಮಾ ವಿಭಾಗದಲ್ಲಿ ರಕ್ಷಿತ್​ ಶೆಟ್ಟಿ ಅವರ 777 ಚಾರ್ಲಿ ಅತ್ಯುತ್ತಮ ಕನ್ನಡ ಪ್ರಶಸ್ತಿ ಪಡೆದಿದೆ.   

Written by - Chetana Devarmani | Last Updated : Aug 25, 2023, 04:15 PM IST
  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಿನ್ನೆ ಅನೌನ್ಸ್ ಆಗಿದೆ
  • ಪರಭಾಷೆಯ ಸಿನಿಮಾಗಳಿಗೆ ವಿಶ್ ಮಾಡಿರುವ ರಶ್ಮಿಕಾ
  • ಕನ್ನಡ ಸಿನಿಮಾ ಚಾರ್ಲಿಗೆ ವಿಶ್‌ ಮಾಡದ ಕಿರಿಕ್‌ ಬೆಡಗಿ
Rashmika : ವಿಜೇತರೆಲ್ಲರಿಗೂ ವಿಶ್ ಮಾಡಿದ ರಶ್ಮಿಕಾ ಕನ್ನಡದ ಚಾರ್ಲಿ ಯನ್ನೇ ಮರೆತು ಬಿಟ್ರಾ?  title=

National Film Awards : ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಿನ್ನೆ ಅನೌನ್ಸ್ ಆಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ರಶ್ಮಿಕಾ ಮಂದಣ್ಣ ಮತ್ತದೆ ವಿಚಾರಕ್ಕೆ ಟ್ರೋಲ್‌ ಆಗಿದ್ದಾರೆ. ಪರಭಾಷೆಯ ಸಿನಿಮಾಗಳಿಗೆ ವಿಶ್ ಮಾಡಿರುವ ರಶ್ಮಿಕಾ ಕನ್ನಡ ಸಿನಿಮಾ ಚಾರ್ಲಿಗೆ ವಿಶ್‌ ಮಾಡಿಲ್ಲ. ಇದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. 

ರಶ್ಮಿಕಾ ಮಂದಣ್ಣ ನ್ಯಾಷನಲ್ ಫಿಲ್ಮ್ ಅವಾರ್ಡ್ ಅನೌನ್ಸ್ ಆಗುತ್ತಿದ್ದಂತೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅವಾರ್ಡ್‌ ಗೆದ್ದವರಿಗೆ ವಿಶ್‌ ಮಾಡಿದ್ದಾರೆ. ಪುಷ್ಪ ಸಿನಿಮಾ ಸಂಗೀತ ನಿರ್ದೇಶಕರಿಗೆ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಅವಾರ್ಡ್ ಬಂದಿದ್ದು, ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ವಿಶ್ ಮಾಡಿದ್ದಾರೆ. ಇನ್ನೂ ಬಾಲಿವುಡ್‌ನ ಮಿಷನ್ ಮಜ್ನು ಸಿನಿಮಾದಲ್ಲಿ ರಶ್ಮಿಕಾ ಅವರ ಸಹನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಶೇರ್ ಶಾ ಸಿನಿಮಾ ಕೂಡಾ ಪ್ರಶಸ್ತಿಯನ್ನು ಗೆದ್ದಿದೆ. ಇದಕ್ಕೂ ರಶ್ಮಿಕಾ ವಿಶ್‌ ಮಾಡಿದ್ದಾರೆ. 

ಇದನ್ನೂ ಓದಿ: National Film Awards 2023 : ವಿಜೇತರಿಗೆ ಸಿಗುವ ಬಹುಮಾನದ ಮೊತ್ತ ಎಷ್ಟು?

ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾಗಾಗಿ ಆಲಿಯಾ ಭಟ್ ಬೆಸ್ಟ್ ನಟಿ ಅವಾರ್ಡ್ ಗೆದ್ದಿದ್ದಾರೆ. ನಟಿ ಆಲಿಯಾ ಭಟ್​ ಗೆ ರಶ್ಮಿಕಾ ಮಂದಣ್ಣ ವಿಶೇಷವಾಗಿ ವಿಶ್‌ ಮಾಡಿದ್ದಾರೆ.  ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಬೆಸ್ಟ್ ಆ್ಯಕ್ಟರ್ ನ್ಯಾಷನಲ್ ಅವಾರ್ಡ್ ಬಂದಿದ್ದು, ಅವರಿಗೂ ರಶ್ಮಿಕಾ ವಿಶ್‌ ಮಾಡಿದ್ದಾರೆ. 

69ನೇ ರಾಷ್ಟ್ರೀಯ ಚಲನಚಿತ್ರ​ ಪ್ರಶಸ್ತಿಯ ಬೆಸ್ಟ್​ ಫೀಚರ್​ ಸಿನಿಮಾ ವಿಭಾಗದಲ್ಲಿ ರಕ್ಷಿತ್​ ಶೆಟ್ಟಿ ಅವರ 777 ಚಾರ್ಲಿ ಅತ್ಯುತ್ತಮ ಕನ್ನಡ ಪ್ರಶಸ್ತಿ ಪಡೆದಿದೆ. ಫೀಚರ್‌ ಫಿಲ್ಮ್​ ವಿಭಾಗದಲ್ಲಿ 777 ಚಾರ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗೆದ್ದಿದೆ. ಆದರೆ ಕನ್ನಡದ ಸಿನಿಮಾದಿಂದಲೇ ಫಿಲ್ಮ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ರಶ್ಮಿಕಾ ಕನ್ನಡ ಸಿನಿಮಾಗೇ ವಿಶ್‌ ಮಾಡಿಲ್ಲ. ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಗೆ ಶುಭ ಕೋರದಿರುವುದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದ ರಶ್ಮಿಕಾ ಟ್ರೋಲ್‌ ಆಗುತ್ತಿದ್ದಾರೆ.

ಇದನ್ನೂ ಓದಿ: 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ: 777 ಚಾರ್ಲಿ ಗೆ ಅತ್ಯುತ್ತಮ ರಾಷ್ಟ್ರೀಯ ಕನ್ನಡ ಚಿತ್ರ ಪ್ರಶಸ್ತಿ   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News