ತಾಂಡೇಲ್‌ To ರಾಮಾಯಣ ನಟಿ ಸಾಯಿ ಪಲ್ಲವಿ ಮುಂಬರುವ ಬಹುನಿರೀಕ್ಷಿತ ಸಿನಿಮಾಗಳಿವು..! ಲಿಸ್ಟ್‌ ಇಲ್ಲಿದೆ

Sai Pallavi upcoming movies : ನಟಿ ಸಾಯಿ ಪಲ್ಲವಿಗೆ ಇಂದು ಜನ್ಮ ದಿನದ ಸಂಭ್ರಮ. ನಟಿ ತಮ್ಮ ಅಭಿನಯ ಮತ್ತು ನೃತ್ಯದ ಮೂಲಕ ಸಾಕಷ್ಟು ಸಾಕಷ್ಟು ಜನ ಪ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. ಅತೀ ಕಡಿಮೆ ಸಮಯದಲ್ಲೇ ಸೂಪರ್‌ ಸ್ಟಾರ್‌ ಗಿರಿ ಪಡೆದ ನಟಿಯ ಮುಂಬರುವ ಸಿನಿಮಾಗಳು ಯಾವುವು ಅಂತ ನೋಡೋಣ ಬನ್ನಿ...

Written by - Krishna N K | Last Updated : May 9, 2024, 04:19 PM IST
    • ನಟಿ ಸಾಯಿ ಪಲ್ಲವಿಗೆ ಇಂದು ಜನ್ಮ ದಿನದ ಸಂಭ್ರಮ.
    • ಸಾಯಿ ಪಲ್ಲವಿ 32ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
    • ಸಾಯಿ ಪಲ್ಲವಿ ನಟನೆಯ ಮುಂಬರುವ ಸಿನಿಮಾಗಳು ಇಲ್ಲಿವೆ.
ತಾಂಡೇಲ್‌ To ರಾಮಾಯಣ ನಟಿ ಸಾಯಿ ಪಲ್ಲವಿ ಮುಂಬರುವ ಬಹುನಿರೀಕ್ಷಿತ ಸಿನಿಮಾಗಳಿವು..! ಲಿಸ್ಟ್‌ ಇಲ್ಲಿದೆ title=

Happy Birthday Sai Pallavi : ಸೌತ್‌ ಸಿನಿರಂಗದ ನ್ಯಾಚುರಲ್‌ ಬ್ಯೂಟಿ, ಅಪರೂಪ ಸೌಂದರ್ಯವತಿ ನಟಿ ಸಾಯಿ ಪಲ್ಲವಿಗೆ ಇಂದು ಜನ್ಮ ದಿನದ ಸಂಭ್ರಮ. ನಟಿ ತಮ್ಮ ಅಭಿನಯ ಮತ್ತು ನೃತ್ಯದ ಮೂಲಕ ಸಾಕಷ್ಟು ಸಾಕಷ್ಟು ಜನ ಪ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ್ದಾರೆ. ಅತೀ ಕಡಿಮೆ ಸಮಯದಲ್ಲೇ ಸೂಪರ್‌ ಸ್ಟಾರ್‌ ಗಿರಿ ಪಡೆದ ನಟಿಯರಲ್ಲಿ ಪಲ್ಲವಿ ಸಹ ಒಬ್ಬರು.

ಸಾಯಿ ಪಲ್ಲವಿ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿರಂಗದಲ್ಲಿ ನಿರತರಾಗಿದ್ದಾರೆ. ಡಾನ್ಸ್‌ ರಿಯಾಲಿಟಿ ಶೋ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ, ಸೌತ್‌ ಸೆನ್ಸೆಷನಲ್‌ ಆಗಿ ಹೊರಹೊಮ್ಮಿದ್ದಾರೆ. ಇದೀಗ ಬಾಲಿವುಡ್‌ಗೂ ಸಹ ಕಾಲಿಟ್ಟಿದ್ದಾರೆ.  

ಇದನ್ನೂ ಓದಿ: ಜ್ಯೋತಿ ರೈ ಅಶ್ಲೀಲ ಖಾಸಗಿ ವಿಡಿಯೋ ವೈರಲ್‌..! ಕೊನೆಗೂ ಮೌನ ಮುರಿದ ನಟಿ, ಏನಂದ್ರು ಗೊತ್ತೆ..?

ʼಪ್ರೇಮಂʼನೊಂದಿಗೆ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಸಾಯಿ ಪಲ್ಲವಿ ಕಲಿ, ಮಾರಿ 2, ಲವ್ ಸ್ಟೋರಿ, ಶ್ಯಾಮ್ ಸಿಂಘ ರಾಯ್ ಮತ್ತು ಗಾರ್ಗಿಯಂತಹ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇಂದು ಸಾಯಿ ಪಲ್ಲವಿ ತಮ್ಮ 32 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ, ಇದೇ ವೇಳೆ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾಗಳು ಯಾವುವು ಅಂತ ತಿಳಿಯೋಣ ಬನ್ನಿ..

ರಾಮಾಯಣ (Ramayana movie) : ನಿತೇಶ್ ತಿವಾರಿ ನಿರ್ದೇಶನದ ಮುಂಬರುವ ಸಿನಿಮಾ ʼರಾಮಾಯಣʼದಲ್ಲಿ ನಟ ರಣಬೀರ್ ಕಪೂರ್ ರಾಮನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಮಾತೆ ಸೀತೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ಬಹಿರಂಗವಾಗದಿದ್ದರೂ, ನಟ ನಟಿಯರ ಕೆಲವು ಚಿತ್ರಗಳು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದವು. ಈ ಚಿತ್ರವು 2025 ರಲ್ಲಿ ತೆರೆ ಕಾಣುವ ನಿರೀಕ್ಷೆಯಿದೆ.

ಇದನ್ನೂ ಓದಿ:ಒಂದು ಕಾಲದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್‌ ಆಗಿದ್ದ ಈತ ಇಂದು ಸೆನ್ಸೇಷನಲ್ ಸ್ಟಾರ್‌!! ‌

ತಾಂಡೇಲ್‌ (Thandel movie) : ಚಂದೂ ಮೊಂಡೇಟಿ ನಿರ್ದೇಶನದ ತಾಂಡೇಲ್ ಚಿತ್ರದಲ್ಲಿ ನಾಗ ಚೈತನ್ಯ ಜೊತೆ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ತಾಂಡೇಲ್‌ 2018 ರಲ್ಲಿ ಆಂಧ್ರಪ್ರದೇಶದ ಮೀನುಗಾರರನ್ನು ಪಾಕಿಸ್ತಾನ ಡ್ರಿಫ್ಟ್ ಮಾಡಿ ಕಸ್ಟಡಿಗೆ ತೆಗೆದುಕೊಂಡ ಘಟನೆಯ ಕಥಾಹಂದರ ಹೊಂದಿದೆ.. ಚೈತನ್ಯ ಒತ್ತೆಯಾಳುಗಳಲ್ಲಿ ಒಬ್ಬನ ಪಾತ್ರದಲ್ಲಿ ನಟಿಸಿದರೆ, ಸಾಯಿ ಅವನ ಪ್ರೇಯಸಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರವು ಡಿಸೆಂಬರ್ 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಅಮರನ್‌ (Amaran movie) : ಮೇಜರ್ ಮುಕುಂದ್ ವರದರಾಜನ್ ಅವರ ಜೀವನಾಧಾರಿತ ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ಜೊತೆ ನಾಯಕಿಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. 2014 ರಲ್ಲಿ ನಡೆದ ಶೋಧ ಕಾರ್ಯಾಚರಣೆ ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ʼಅಮರನ್ʼ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News