ಬಿಜೆಪಿ ಸೇರಿದ ರಾಮಾಯಣ ಮಹಾಭಾರತ ಪಾತ್ರಧಾರಿಗಳಿವರು

'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸಿರುವ ಅರವಿಂದ ತಿವಾರಿ  250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 

Written by - Ranjitha R K | Last Updated : Mar 19, 2021, 05:58 PM IST
  • ದೀಪಿಕಾ ಗುಜರಾತ್‌ನ ವಡೋದರಾದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
  • ನಿತೀಶ್ ಭರದ್ವಾಜ್ 1996 ರಿಂದ 1998 ರವರೆಗೆ ಲೋಕಸಭಾ ಸಂಸದರಾಗಿದ್ದರು.
  • ರೂಪಾ ಗಂಗೂಲಿ ಪ್ರಸ್ತುತ ರಾಜ್ಯಸಭಾ ಸಂಸದರಾಗಿದ್ದಾರೆ
ಬಿಜೆಪಿ ಸೇರಿದ ರಾಮಾಯಣ ಮಹಾಭಾರತ ಪಾತ್ರಧಾರಿಗಳಿವರು title=
ಬಿಜೆಪಿ ಸೇರಿದ ರಾಮಾಯಣ ಮಹಾಭಾರತ ಪಾತ್ರಧಾರಿ (file photo)

ನವದೆಹಲಿ : ರಾಮಾಯಣ (Ramayana ) ಮತ್ತು ಮಹಾಭಾರತದ (Mahabharath) ಪಾತ್ರಗಳ ಬಗ್ಗೆ ನಿಮಗೆ ತಿಳಿದಿರುತ್ತದೆ. ಈ  ಪೈಕಿ ಬಿಜೆಪಿಗೆ ಸೇರಿದ ಪಾತ್ರಧಾರಿಗಳು ಯಾರು ಎನ್ನುವ ಮಾಹಿತಿಯನ್ನು ನಾವು ನೀಡುತ್ತೇವೆ. ಇದರಲ್ಲಿ ರಾಮ, ಸೀತಾ ಮತ್ತು ರಾವಣನ ಪಾತ್ರಧಾರಿಗಳ ಜೊತೆಗೆ ಇನ್ನೂ ಅನೇಕ ಪಾತ್ರಗಳಿವೆ. ಬಿಜೆಪಿಗೆ ಸೇರಿದ ಎಲ್ಲಾ ಪಾತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ. 
 

ಅರವಿಂದ ತಿವಾರಿ : 

ARVIND TIWARI AS RAAVAN

ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟಿಸಿರುವ ಅರವಿಂದ ತಿವಾರಿ (Aravind Tiwari)  250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು 1991 ರಲ್ಲಿ ಬಿಜೆಪಿಯಿಂದ (BJP)  ಟಿಕೆಟ್‌ ಪಡೆದು ಗುಜರಾತ್‌ನ ಸಬರಫ್ ಕಂಠದಲ್ಲಿ ಸ್ಪರ್ಧಿಸಿ ಗೆದ್ದರು. ಇದಾದ ನಂತರ, 2002 ರ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ್ದರು. 

ಇದನ್ನೂ ಓದಿ : Video ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣ ತೊರೆಯುವ ಹಿಂದಿನ ಕಾರಣ ಬಿಚ್ಚಿಟ್ಟ Aamir Khan

ದೀಪಿಕಾ ಚಿಖಲಿಯಾ :

DEEPIKA CHIKHALIA AS GODDESS SITA

ರಾಮಾಯಣ'ದ ಸೀತಾ ಅಂದರೆ ದೀಪಿಕಾ ಚಿಖಲಿಯಾ ಕೂಡ 1991 ರ ಲೋಕಸಭಾ ಚುನಾವಣೆಯಲ್ಲಿ (Election) ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ದೀಪಿಕಾ ಗುಜರಾತ್‌ನ ವಡೋದರಾದಿಂದ ಸ್ಪರ್ಧಿಸಿ  ಗೆಲುವು ಸಾಧಿಸಿದ್ದರು. 
 

ನಿತೀಶ್ ಭಾರದ್ವಾಜ್ :

NITISH BHARADWAJ AS LORD KRISHNA

. 'ಮಹಾಭಾರತ' ಧಾರಾವಾಹಿಯಲ್ಲಿ ಕೃಷ್ಣನ (Lord Krishna) ಪಾತ್ರವನ್ನು ನಿರ್ವಹಿಸಿದ ನಿತೀಶ್ ಭರದ್ವಾಜ್ 1996 ರಿಂದ 1998 ರವರೆಗೆ ಬಿಜೆಪಿ ಲೋಕಸಭಾ ಸಂಸದರಾಗಿದ್ದರು.

ರೂಪಾ ಗಂಗೂಲಿ : 

ROOPA GANGULY AS DRAUPADI

ಮಹಾಭಾರತದ ಧಾರಾವಾಹಿಯ ದ್ರೌಪದಿ ಅಂದರೆ ರೂಪಾ ಗಂಗೂಲಿ ಪ್ರಸ್ತುತ ರಾಜ್ಯಸಭಾ ಸಂಸದರಾಗಿದ್ದಾರೆ. ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ (West Bengal) ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ರೂಪಾ ಗಂಗೂಲಿ 2015 ರಲ್ಲಿ ಬಿಜೆಪಿ  ಸೇರಿದ್ದರು. 

ಇದನ್ನೂ ಓದಿ : ಈ ನಟನಿಂದ ತನಗೆ ಕೌಟುಂಬಿಕ ಹಿಂಸಾಚಾರವಾಗಿದೆ ಎಂದ ಈ ಹಾಲಿವುಡ್ ನಟಿ

ಗಜೇಂದ್ರ ಚೌಹಾಣ್ :

GAJENDRA CHAUHAN AS YUDHISTHIR

 'ಮಹಾಭಾರತ' ದಲ್ಲಿ ಯುಧಿಷ್ಠಿರ ಪಾತ್ರಧಾರಿಯಾಗಿದ್ದ ಗಜೇಂದ್ರ ಚೌಹಾನ್ ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದಾರೆ. ಅವರು film and television institute of Indiaದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. 

ದಾರಾ ಸಿಂಗ್ : 

Dara Singh As Hanuman

ಭಾರತದ ಪ್ರಸಿದ್ಧ ಕುಸ್ತಿಪಟು ಮತ್ತು 'ರಾಮಾಯಣ'ದಲ್ಲಿ ಹನುಮಾನ್ (hanuman) ಪಾತ್ರಧಾರಿಯಾಗಿದ್ದ ದಾರಾ ಸಿಂಗ್ ಕೂಡ ರಾಜಕೀಯದೊಂದಿಗೆ ಸಂಬಂಧ ಹೊಂದಿದ್ದರು. ಅವರು 2003 ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು.  ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ದಾರಾ ಸಿಂಗ್ ರಾಜ್ಯಸಭೆ ಪ್ರವೇಶಿಸಿದ್ದರು. 

ಅರುಣ್ ಗೋವಿಲ್ :

Arun Govil as Ram

  'ರಾಮಾಯಣ'ದ ರಾಮ (Ram) ಅಂದರೆ ಅರುಣ್ ಗೋವಿಲ್ ಕೂಡ  ಬಿಜೆಪಿ ಸೇರಿದ್ದಾರೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿದೆ. ಅರುಣ್ ಗೋವಿಲ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. 

ಇದನ್ನೂ ಓದಿ : ಈಗಲೂ ವೈರಲ್ ಆಗುತ್ತಿದೆ ಸುಶಾಂತ್ ಸಿಂಗ್ ಫೋಟೋಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News