Rakul Preet Singh : ʼಸೆಕ್ಸ್‌ ಎಜುಕೇಶನ್ʼ ಹೇಳಿಕೊಡ್ತಾರಂತೆ ನಟಿ ರಕುಲ್‌..! ಪಾಠ ಕೇಳೋಕೆ ರೆಡಿನಾ..

ಇಂದಿನ ಕಾಲದಲ್ಲಿ ಲೈಂಗಿಕ ಶಿಕ್ಷಣವು ತುಂಬಾ ಅಗತ್ಯವಾಗಿದೆ. ಈ ವಿಷಯದ ಬಗ್ಗೆ ಜನರು ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ಎಂದಿನಂತೆ ಮುಂದೆ ಬಂದಿದೆ. ವಾಸ್ತವವಾಗಿ, ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅಕ್ಷಯ್ ಕುಮಾರ್ ಅವರು ʼಓ ಮೈ ಗಾಡ್ 2ʼ ಚಿತ್ರದಲ್ಲಿ ತೋರಿಸಿದ್ದರು. ಈಗ ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ರಕುಲ್ ಪ್ರೀತ್ ಸಿಂಗ್ ಕೂಡ ಲೈಂಗಿಕ ಶಿಕ್ಷಣದ ಪಾಠ ಹೇಳಲು ಬರುತ್ತಿದ್ದಾರೆ.

Written by - Krishna N K | Last Updated : Jan 11, 2023, 06:09 PM IST
  • ಇಂದಿನ ಕಾಲದಲ್ಲಿ ಲೈಂಗಿಕ ಶಿಕ್ಷಣವು ತುಂಬಾ ಅಗತ್ಯವಾಗಿದೆ.
  • ಈ ವಿಷಯದ ಬಗ್ಗೆ ಜನರು ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಾರೆ.
  • ಇದೀಗ ನಟಿ ರಕುಲ್ ಪ್ರೀತ್ ಸಿಂಗ್ ಲೈಂಗಿಕ ಶಿಕ್ಷಣದ ಪಾಠ ಮಾಟಲು ತೆರೆ ಮೇಲೆ ಬರುತ್ತಿದ್ದಾರೆ.
Rakul Preet Singh : ʼಸೆಕ್ಸ್‌ ಎಜುಕೇಶನ್ʼ ಹೇಳಿಕೊಡ್ತಾರಂತೆ ನಟಿ ರಕುಲ್‌..! ಪಾಠ ಕೇಳೋಕೆ ರೆಡಿನಾ.. title=

Rakul Preet Singh Up Coming Film : ಇಂದಿನ ಕಾಲದಲ್ಲಿ ಲೈಂಗಿಕ ಶಿಕ್ಷಣವು ತುಂಬಾ ಅಗತ್ಯವಾಗಿದೆ. ಈ ವಿಷಯದ ಬಗ್ಗೆ ಜನರು ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ಎಂದಿನಂತೆ ಮುಂದೆ ಬಂದಿದೆ. ವಾಸ್ತವವಾಗಿ, ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅಕ್ಷಯ್ ಕುಮಾರ್ ಅವರು ʼಓ ಮೈ ಗಾಡ್ 2ʼ ಚಿತ್ರದಲ್ಲಿ ತೋರಿಸಿದ್ದರು. ಈಗ ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ರಕುಲ್ ಪ್ರೀತ್ ಸಿಂಗ್ ಕೂಡ ಲೈಂಗಿಕ ಶಿಕ್ಷಣದ ಪಾಠ ಹೇಳಲು ಬರುತ್ತಿದ್ದಾರೆ.

ಯಸ್‌.. ಆದ್ರೆ ರಕುಲ್‌ ಯಾವುದೇ ಶಿಕ್ಷಣ ಸಂಸ್ಥೆ ಓಪನ್‌ ಮಾಡುತ್ತಿಲ್ಲ. ಬದಲಿಗೆ ʼಛತ್ರಿವಾಲಿʼ ಸಿನಿಮಾ ಮೂಲಕ ಜನರಿಗೆ ಲೈಂಗಿಕ ಶಿಕ್ಷಣದ ಅರಿವು ಮೂಡಿಸಲು ಮುಂದಾಗಿದ್ದಾರೆ. ಈ ಚಿತ್ರವು ಥಿಯೇಟರ್‌ನಲ್ಲಿ ಬಿಡುಗಡೆಯಾಗುವುದಿಲ್ಲ ಆದರೆ, ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನೋಡಬಹುದು. ಈ ಚಿತ್ರದ ಟ್ರೈಲರ್ ಅನ್ನು ಜನವರಿ 6 ರಂದು ಬಿಡುಗಡೆ ಮಾಡಲಾಗಿದೆ. ಜನವರಿ 20 ರಂದು ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ: ವಿಧವೆಯನ್ನು ಪ್ರೀತಿಸಿ ಮದುವೆಯಾಗಿದ್ದ ರಾಜಮೌಳಿ..! ಸಿನಿಮಾಗಿಂತ ಕಡಿಮೆ ಏನಿಲ್ಲ ಲವ್ ಕಹಾನಿ..!

ಛತ್ರಿವಾಲಿ ಚಿತ್ರದ ಕಥೆ ಹರಿಯಾಣದ್ದು ಎಂದು ಹೇಳಲಾಗುತ್ತಿದೆ. ರಾಕುಲ್ ಜೊತೆಗೆ ಸತೀಶ್ ಕೌಶಿಕ್, ಸುಮಿತ್ ವ್ಯಾಸ್ ಮತ್ತು ರಾಜೇಶ್ ತೈಲಂಗ್ ಮುಂತಾದ ನಟರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ರಾಕುಲ್ ಕಾಂಡೋಮ್ ಫ್ಯಾಕ್ಟರಿಯಲ್ಲಿ ಕ್ವಾಲಿಟಿ ಕಂಟ್ರೋಲರ್‌ ಹೆಡ್ ಆಗಿ ಕೆಲಸ ಮಾಡಲಿದ್ದಾರೆ. ಸುರಕ್ಷಿತ ಲೈಂಗಿಕತೆ ಮತ್ತು ಗರ್ಭನಿರೋಧಕದಲ್ಲಿ ಕಾಂಡೋಮ್‌ಗಳ ಬಳಕೆಯ ಸಂದೇಶವನ್ನು ಈ ಚಿತ್ರ ನೀಡುತ್ತದೆ.

ಈ ಚಿತ್ರವನ್ನು 2021 ರಲ್ಲಿ ಘೋಷಿಸಲಾಯಿತು. ಚಿತ್ರದ ಚಿತ್ರೀಕರಣವು ಡಿಸೆಂಬರ್‌ಗೆ ಪೂರ್ಣಗೊಂಡಿತು. ಈ ಚಿತ್ರದ ಫಸ್ಟ್ ಲುಕ್ ಅನ್ನು  ರಾಕುಲ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ʼಸೂಚನೆ ಇಲ್ಲದೆ ಮಳೆ ಬರಬಹುದು, ನಿಮ್ಮ ಛತ್ರಿಯನ್ನು ಸಿದ್ಧವಾಗಿಟ್ಟುಕೊಳ್ಳಿʼ ಎಂದು ಶೀರ್ಷಿಕೆ ಬರೆದು ಫಸ್ಟ್‌ ಲುಕ್‌ನ್ನು ಹಂಚಿಕೊಂಡಿದ್ದರು. ಛತ್ರಿವಾಲಿ ಹಾಸ್ಯ ಮತ್ತು ಕೌಟುಂಬಿಕ ಚಿತ್ರವಾಗಿದೆ. ಈ ಚಿತ್ರವನ್ನು ತೇಜಸ್ ವಿಜಯ್ ದಿಯೋಸ್ಕರ್ ನಿರ್ದೇಶಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News