ಡಾ. ರಾಜ್‌ಕುಮಾರ್ ಅವರು ರಾಘಣ್ಣನಿಗೆ ಹೇಳಿದ್ದ ರಾಮಾಯಣದ ಕಥೆ ಏನ್ ಗೊತ್ತಾ?

ಡಾ.ರಾಜ್ ಕುಮಾರ್ ಅವರು ರಾಮಾಯಣಕ್ಕೂ ಪ್ರಾಣಾಯಾಮಕ್ಕೂ ಹೋಲಿಕೆ ಮಾಡಿ ಇವೆರಡರ ನಡುವಿನ ಸಂಬಂಧದ ಬಗ್ಗೆ ಏನ್ ಹೇಳ್ತಿದ್ರು ಎಂಬುದರ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ವಿವರಿಸಿದ್ದಾರೆ.

Last Updated : Apr 25, 2019, 07:27 PM IST
ಡಾ. ರಾಜ್‌ಕುಮಾರ್ ಅವರು ರಾಘಣ್ಣನಿಗೆ ಹೇಳಿದ್ದ ರಾಮಾಯಣದ ಕಥೆ ಏನ್ ಗೊತ್ತಾ?  title=

ಬೆಂಗಳೂರು: ರಾಜ್ಯದ ಮನೆಮನೆ ಮಾತಾಗಿರುವ, ಕನ್ನಡಿಗರ ಮನ ಗೆದ್ದಿರುವ ಝೀ ಕನ್ನಡ ವಾಹಿನಿಯ ಪ್ರಸಿದ್ಧ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ನಾಲ್ಕನೇ ಸೀಸನ್ ನ ಎರಡನೇ ಅತಿಥಿಯಾಗಿ ಈ ವಾರ ರಾಘವೇಂದ್ರ ರಾಜ್ ಕುಮಾರ್ ಆಗಮಿಸಿ, ಸಾಕಷ್ಟು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಅವರೊಂದಿಗಿನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಪ್ರೊಮೋವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಇದರಲ್ಲಿ ಡಾ.ರಾಜ್ ಕುಮಾರ್ ಅವರು ರಾಮಾಯಣಕ್ಕೂ ಪ್ರಾಣಾಯಾಮಕ್ಕೂ ಹೋಲಿಕೆ ಮಾಡಿ ಇವೆರಡರ ನಡುವಿನ ಸಂಬಂಧದ ಬಗ್ಗೆ ಏನ್ ಹೇಳ್ತಿದ್ರು ಎಂಬುದರ ಬಗ್ಗೆ ವಿವರಿಸಿದ್ದಾರೆ.

''ಹೃದಯ ರಾಮ ಇರುವ ಜಾಗ... ತಲೆ ರಾವಣ ಇರುವ ಜಾಗ.. ದಿನವೂ ಇವರಿಬ್ಬರ ನಡುವೆ ಎಲ್ಲಾ ವಿಚಾರದಲ್ಲೂ ಜಗಳ... ಹೃದಯ ಬೆಳಿಗ್ಗೆ 5 ಗಂಟೆಗೆ ಏಳು ಅಂದರೆ ತಲೆ 'ಬೇಡ 7 ಗಂಟೆಗೆ ಏಳು' ಅನ್ನುತ್ತೆ... ಹೀಗೆ ದಿನಾ ಅವರಿಬ್ಬರ ನಡುವೆ ಜಗಳ, ಇದೇ ದಿನಬೆಳಗಾದರೆ ರಾಮಾಯಣ... ಇದನ್ನ ನಿಯಂತ್ರಿಸಲು ನಾನು ಪ್ರಾಣಾಯಾಮ ಮಾಡ್ತೀನಿ. ಪ್ರಾಣಾಯಾಮದಲ್ಲಿ ಪ್ರಾಣದೇವರು ಅಂದರೆ ಆಂಜನೇಯ.. ಅವನು ಸದಾ ರಾಮನ ಬಳಿ ಇರುತ್ತಾನೆ. ರಾಮನ ಬಳಿ ಹೋಗಿ ಅವನ ಸಮಸ್ಯೆ ಕೇಳುತ್ತಾನೆ. ಆಗ ಆಂಜನೇಯ ದೇಹದ ಎಲ್ಲ ಜೀವಕೋಶಗಳನ್ನೂ ಕರೆದೊಯ್ದು ರಾವಣನ ವಿರುದ್ಧ ಹೋರಾಟ ಮಾಡಿ ಗೆಲ್ಲುತ್ತಾನೆ. ಅಂದರೆ ಹೃದಯವನ್ನು ಗೆಲ್ಲುತ್ತಾನೆ...''  ಈ ರೀತಿಯಾಗಿ ರಾಜ್ ರಾಮಾಯಣವನ್ನು ವಿವರಿಸುತ್ತಿದ್ದರು ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ. ಆ ಪ್ರೋಮೋವನ್ನು ನೀವೂ ಸಹ ನೋಡಿ...

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ನಾಲ್ಕನೇ ಸೀಸನ್ ನ ಎರಡನೇ ಅತಿಥಿಯಾಗಿ ರಾಘವೇಂದ್ರ ರಾಜ್ ಕುಮಾರ್ ಭಾಗವಹಿಸಿರುವ ಸಂಚಿಕೆ ಇದೇ ಎಪ್ರಿಲ್ 27ರ ಶನಿವಾರ ರಾತ್ರಿ 9.30 ರಿಂದ 10.30ರವರೆಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
 

Trending News