ಕಲ್ಕಿ 2898 AD ಚಿತ್ರದ ಬಿಡುಗಡೆ ದಿನಾಂಕ ಘೋಷಣೆ : ಜೂನ್‌ 27ರಂದು ಪ್ರಭಾಸ್‌ ಸಿನಿಮಾ ರಿಲೀಸ್‌

Prabhas Kalki 2898 AD : ಇತ್ತೀಚೆಗಷ್ಟೇ ಕಲ್ಕಿ 2898 ಎಡಿ ಚಿತ್ರದ ಅಮಿತಾಬ್‌ ಬಚ್ಚನ್‌ ಅವರ ಹೊಸ ಲುಕ್‌ ಹೇಗಿರಲಿದೆ ಎಂಬುದನ್ನು ರಿವೀಲ್‌ ಮಾಡಿತ್ತು ಚಿತ್ರತಂಡ. ಈಗ ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ ಸರ್ಪ್ರೈಸ್‌ ನೀಡಿದೆ.

Written by - YASHODHA POOJARI | Edited by - Krishna N K | Last Updated : Apr 27, 2024, 08:03 PM IST
    • ನಾಗ್‌ ಅಶ್ವಿನ್ ನಿರ್ದೇಶನದ ಬಹುನಿರೀಕ್ಷಿತ ಕಲ್ಕಿ ಸಿನಿಮಾ
    • ಇಷ್ಟು ದಿನ ಈ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿತ್ತು.
    • ದಕ್ಕೀಗ ಉತ್ತರ ಸಿಕ್ಕಿದೆ. ಇದೇ ಜೂನ್‌ 27ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.
ಕಲ್ಕಿ 2898 AD ಚಿತ್ರದ ಬಿಡುಗಡೆ ದಿನಾಂಕ ಘೋಷಣೆ : ಜೂನ್‌ 27ರಂದು ಪ್ರಭಾಸ್‌ ಸಿನಿಮಾ ರಿಲೀಸ್‌  title=

Kalki Movie release date : ನಾಗ್‌ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ ಸಿನಿಮಾ, ಈಗಾಗಲೇ ಬಹುತೇಕ ಶೂಟಿಂಗ್‌ ಮುಗಿಸಿಕೊಂಡಿದೆ. ಹೀಗಿರುವಾಗಲೇ ಇದೇ ಸಿನಿಮಾದಿಂದ ಬ್ರೇಕಿಂಗ್‌ ಸುದ್ದಿಯೊಂದು ಹೊರಬಿದ್ದಿದೆ. ಈ ವರೆಗೂ ಈ ಸಿನಿಮಾ ಬಿಡುಗಡೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇದೇ ಜೂನ್‌ 27ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.

ನಾಗ ಅಶ್ವಿನ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸೈನ್ಸ್‌ ಫಿಕ್ಷನ್‌ ಕಲ್ಕಿ ಚಿತ್ರ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಇದೇ ಚಿತ್ರದ ಅಮಿತಾಬ್‌ ಬಚ್ಚನ್‌ ಅವರ ಹೊಸ ಲುಕ್‌ ಹೇಗಿರಲಿದೆ ಎಂಬುದನ್ನು ರಿವೀಲ್‌ ಮಾಡಿತ್ತು ಚಿತ್ರತಂಡ. ಈಗ ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ ಸರ್ಪ್ರೈಸ್‌ ನೀಡಿದೆ. ಉತ್ತಮ ನಾಳೆಗಾಗಿ ಎಲ್ಲಾ ಶಕ್ತಿಗಳು ಒಗ್ಗೂಡುತ್ತವೆ ಎಂಬ ಕ್ಯಾಪ್ಷನ್‌ ನೀಡಿದ ವೈಜೈಂತಿ ಮೂವೀಸ್‌, ಹೊಸ ಪೋಸ್ಟರ್‌ ಜತೆಗೆ ಬಿಡುಗಡೆ ದಿನವನ್ನು ರಿವೀಲ್‌ ಮಾಡಿದೆ. 

ಇದನ್ನೂ ಓದಿ: ವಿಭಿನ್ನ ಅವತಾರದಲ್ಲಿ ಶ್ರುತಿ ಹರಿಹರನ್ : ಪೋಟೋಸ್ ಇಲ್ಲಿವೆ

ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ ಸಿನಿಮಾದಲ್ಲಿ ಬಹುತಾರಾಗಣವೇ ಹೈಲೈಟ್.‌ ಪ್ರಭಾಸ್‌ ನಾಯಕನಾಗಿ ನಟಿಸುತ್ತಿದ್ದರೆ, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌, ಕಮಲ್‌ ಹಾಸನ್‌, ದಿಶಾ ಪಟಾಣಿ ಸೇರಿ ಘಟಾನುಘಟಿಗಳೇ ನಟಿಸುತ್ತಿದ್ದಾರೆ. ವೈಜಯಂತಿ ಮೂವೀಸ್‌ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಪುರಾಣ ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ ಇದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News