ಡೇಟಿಂಗ್ ವೆಬ್‌ಸೈಟ್‌ನಲ್ಲಿ ಬಾಲಿವುಡ್ ನಟಿ ಲಾರಾ ದತ್ತಾ ಪ್ರೋಪೈಲ್ ..! ನಟಿ ಹೇಳಿದ್ದೇನು ಗೊತ್ತಾ?

ಡೇಟಿಂಗ್ ವೆಬ್‌ಸೈಟ್‌ನಲ್ಲಿ ಲಾರಾದತ್ತಾ ಅವರ ಪ್ರೋಪೈಲ್ ಇರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಈಗ ಇದಕ್ಕೆ ಸ್ಪಷ್ಟನೆ ನೀಡಿರುವ ನಟಿ ತಾವೂ ಅದರಲ್ಲಿ ಇರಲಿಲ್ಲ, ಆದರೆ ತಮ್ಮ ಸ್ನೇಹಿತರಿಗೆ ಪ್ರೋಪೈಲ್ ರಚಿಸಲು ಸಹಾಯ ಮಾಡಿರುವುದಾಗಿ ಹೇಳಿದ್ದಾರೆ.

Written by - Zee Kannada News Desk | Last Updated : Nov 25, 2021, 02:55 AM IST
  • ಡೇಟಿಂಗ್ ವೆಬ್‌ಸೈಟ್‌ನಲ್ಲಿ ಲಾರಾದತ್ತಾ ಅವರ ಪ್ರೋಪೈಲ್ ಇರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಈಗ ಇದಕ್ಕೆ ಸ್ಪಷ್ಟನೆ ನೀಡಿರುವ ನಟಿ ತಾವೂ ಅದರಲ್ಲಿ ಇರಲಿಲ್ಲ, ಆದರೆ ತಮ್ಮ ಸ್ನೇಹಿತರಿಗೆ ಪ್ರೋಪೈಲ್ ರಚಿಸಲು ಸಹಾಯ ಮಾಡಿರುವುದಾಗಿ ಹೇಳಿದ್ದಾರೆ.
 ಡೇಟಿಂಗ್ ವೆಬ್‌ಸೈಟ್‌ನಲ್ಲಿ ಬಾಲಿವುಡ್ ನಟಿ ಲಾರಾ ದತ್ತಾ ಪ್ರೋಪೈಲ್ ..! ನಟಿ ಹೇಳಿದ್ದೇನು ಗೊತ್ತಾ? title=
file photo

ನವದೆಹಲಿ: ಡೇಟಿಂಗ್ ವೆಬ್‌ಸೈಟ್‌ನಲ್ಲಿ ಲಾರಾದತ್ತಾ ಅವರ ಪ್ರೋಪೈಲ್ ಇರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಈಗ ಇದಕ್ಕೆ ಸ್ಪಷ್ಟನೆ ನೀಡಿರುವ ನಟಿ ತಾವೂ ಅದರಲ್ಲಿ ಇರಲಿಲ್ಲ, ಆದರೆ ತಮ್ಮ ಸ್ನೇಹಿತರಿಗೆ ಪ್ರೋಪೈಲ್ ರಚಿಸಲು ಸಹಾಯ ಮಾಡಿರುವುದಾಗಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ, ಮಾತನಾಡಿದ ಅವರು 'ಹೊಸ ಡೇಟಿಂಗ್ ಪ್ರಕ್ರಿಯೆಯು ತುಂಬಾ ವೇಗವಾಗಿದೆ ಎಂದು ತಾನು ಕಲಿತಿದ್ದೇನೆ ಎಂದು ಲಾರಾ (Lara Dutta) ಬಹಿರಂಗಪಡಿಸಿದರು, ಅವರು ತಮ್ಮ ಮಗಳ ಬಗ್ಗೆಯೂ ಚಿಂತಿಸುತ್ತಿರುವುದಾಗಿ ಹೇಳಿದರು.ಕೆಲವು ವಾರಗಳ ಹಿಂದೆ, ಡೇಟಿಂಗ್ ವೆಬ್‌ಸೈಟ್‌ನಲ್ಲಿ ಲಾರಾ ದತ್ತಾ ಅವರ ನಕಲಿ ಪ್ರೊಫೈಲ್ ಕಾಣಿಸಿಕೊಂಡಿತು ಮತ್ತು ಇದಕ್ಕಾಗಿ ಅವರು ಸ್ಪಷ್ಟೀಕರಣವನ್ನು ನೀಡಬೇಕಾಯಿತು. ತಾನು ಎಂದಿಗೂ ಡೇಟಿಂಗ್ ಆ್ಯಪ್‌ನಲ್ಲಿಲ್ಲ ಎಂದು ಲಾರಾ ಹೇಳಿದ್ದರು.

ಇದನ್ನೂ ಓದಿ: 20 ವರ್ಷಗಳ ಹಿಂದೆ ಮಿಸ್ ಯುನಿವರ್ಸ್ ಕಿರೀಟ ಧರಿಸಿದ್ದ ನಮ್ಮ ಬೆಂಗಳೂರಿನ ಹುಡುಗಿ ಲಾರಾ ದತ್ತ!

ನೀವು ಎಂದಾದರೂ ಡೇಟಿಂಗ್ ಸೈಟ್‌ಗೆ ಹೋಗಿದ್ದೀರಾ? ಎಂದು ಜನರು ನನಗೆ ಕೇಳುತ್ತಲೇ ಇರುತ್ತಾರೆ, ನಾನು ಡೇಟಿಂಗ್ ಮಾಡುತ್ತಿದ್ದ ಸಮಯದಲ್ಲಿ ಅವುಗಳು ಇರಲಿಲ್ಲ,ನನಗೆ ಮದುವೆಯಾಗಿ ಈಗ 11 ವರ್ಷಗಳಾಗಿವೆ, ಹಾಗಾಗಿ. ಈಗ ಅದನ್ನು ಹೊಂದುವ ಉದ್ದೇಶವಿಲ್ಲ.ಡೇಟಿಂಗ್ ವೆಬ್‌ಸೈಟ್‌ಗಳಲ್ಲಿ ತನ್ನ ಚಿತ್ರಗಳೊಂದಿಗೆ ಸಾಕಷ್ಟು ನಕಲಿ ಪ್ರೊಫೈಲ್‌ಗಳಿವೆ ಎಂದು ತನಗೆ ಖಚಿತವಾಗಿದೆ ಎಂದು ಅವರು ಹೇಳಿದರು.

ಈ ತಿಂಗಳ ಆರಂಭದಲ್ಲಿ, ಸ್ಪಷ್ಟೀಕರಣವನ್ನು ನೀಡುತ್ತಾ, ಲಾರಾ ಇನ್‌ಸ್ಟಾಗ್ರಾಮ್‌ನಲ್ಲಿನ ವೀಡಿಯೊದಲ್ಲಿ, “ನಿನ್ನೆಯಿಂದ, ನನ್ನ ಫೀಡ್ ಕೆಲವು ಮೇಮ್‌ಗಳು ಮತ್ತು ಕೆಲವು ಸಂದೇಶಗಳಿಂದ ತುಂಬಿದೆ, ಜನರು ಡೇಟಿಂಗ್‌ನಲ್ಲಿ ನನ್ನ ರೀತಿಯ ಪ್ರೊಫೈಲ್ ಇದೆ ಎಂದು ಹೇಳುತ್ತಿದ್ದಾರೆ.ಆದ್ದರಿಂದ,ಇದು ಸಂಪೂರ್ಣವಾಗಿ ಹುಚ್ಚತನದ ಪರಮಾವಧಿಯಾಗಿದೆ,ನಾನು ನಿನ್ನೆಯಿಂದ ಹುಚ್ಚಳಾನಾಗಿದ್ದೇನೆ, ಜನರಿಗೆ ಒಂದೊಂದಾಗಿ ಉತ್ತರಿಸಲು ಪ್ರಯತ್ನಿಸುತ್ತಿದ್ದೇನೆ ಮತ್ತು ನಿಜವಾಗಿ ಏನೆಂದು ಹೇಳಲು ಪ್ರಯತ್ನಿಸುತ್ತಿದ್ದೇನೆ.ಹಾಗಾಗಿ, ಆನ್‌ಲೈನ್‌ಗೆ ಹೋಗಿ ಮತ್ತು ಇಲ್ಲಿಯೇ ನಿಮ್ಮೊಂದಿಗೆ ಸ್ಪಷ್ಟಪಡಿಸುವುದು ಉತ್ತಮ ಎಂದು ನಾನು ಭಾವಿಸಿದೆ,ಇದೀಗ ನಾನು ಯಾವುದೇ ಡೇಟಿಂಗ್ ಅಪ್ಲಿಕೇಶನ್‌ನಲ್ಲಿಲ್ಲ, ಇದುವರೆಗೆ ಇರಲಿಲ್ಲ ಮತ್ತು ಇದೀಗ ಯಾವುದೂ ಇಲ್ಲ"ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News