Bhagyalakshmi Serial: ವಿವಾಹ ವಾರ್ಷಿಕೋತ್ಸವದಂದು ವಧು-ವರರಾಗಿ ಮಿಂಚಿದ ಭಾಗ್ಯಾ-ತಾಂಡವ್!

Bhagyalakshmi Kannada Serial: ಪ್ರಸ್ತುತ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಭಾಗ್ಯ ವಿವಾಹ ವಾರ್ಷಿಕೊತ್ಸವ ಕಾರ್ಯಕ್ರಮದ ನಡೆಯುತ್ತಿದೆ. ಆ ಸಂಭ್ರಮದಲ್ಲಿ ತಾಂಡವ್-ಭಾಗ್ಯಾ ಮದು ಮಕ್ಕಳಂತೆ ತಯಾರಾಗಿ ಗಮನ ಸೆಳೆಯುತ್ತಿದ್ದಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Mar 19, 2024, 12:08 PM IST
  • ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಇರುವಾಗ ಭಾಗ್ಯಾಗೆ ಲಕ್ಷ್ಮಿ ಕರೆ ಮಾಡಿ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸುತ್ತಾಳೆ.
  • ಭ್ಯಾಗ್ಯಾ ತಂಗಿಯನ್ನು ಸಮಾಧಾನ ಮಾಡುತ್ತಾ. ಹೆದರಬೇಡ, ನಿನ್ನ ಭಾವ ನನಗೆ ಡಿವೋರ್ಸ್‌ ಕೊಡುವುದಿಲ್ಲ. ಅದಕ್ಕೆ ನಾನು ಬಿಡುವುದೂ ಇಲ್ಲ ಎಂದ್ಹೇಳುತ್ತಾಳೆ.
  • ಭಾಗ್ಯಾ ಮದುಮಗಳಂತೆ ತುಂಬಾ ಸುಂದರವಾಗಿಯೇ ಕಾಣುತ್ತಿದ್ದು, ಹೆಂಡತಿಯನ್ನು ಒಂದು ಕ್ಷಣ ನೋಡಿದ ತಾಂಡವ್‌ ಕೂಡಾ ಬೆರಗಾಗುತ್ತಾನೆ.
Bhagyalakshmi Serial: ವಿವಾಹ ವಾರ್ಷಿಕೋತ್ಸವದಂದು ವಧು-ವರರಾಗಿ ಮಿಂಚಿದ ಭಾಗ್ಯಾ-ತಾಂಡವ್! title=

Thandav Bhagya Marriage Anniversary: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ತಾಂಡವ್‌ ಮನೆಯ ಮಂದಿಯೆಲ್ಲಾ ಕಾತುರದಿಂದ ಕಾಯುತ್ತಿದ್ದ ಸುಂದರ ಕ್ಷಣ ಬಂದಾಯ್ತು. ಮನೆಯವರೆಲ್ಲಾ ತಾಂಡವ್‌ ಹಾಗೂ ಭಾಗ್ಯಾ 16ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಲು ಸಡಗರದಿಂದ ಕಾಯುತ್ತಿದ್ದಾರೆ. ಮಗಳು ಗಂಡನ ಮನೆಯಲ್ಲಿ ಸುಖವಾಗಿರಬೇಕೆಂದು ಸುನಂದಾ ಬಯಸಿದರೇ, ಇತ್ತ ತನ್ವಿ ಹಾಗೂ ತನ್ಮಯ್‌ ಅಪ್ಪ ಅಮ್ಮ ಒಂದಾಗಿರಬೇಕೆಂದು ಆಸೆ ಪಡುತ್ತಿದ್ದಾರೆ. ಅದೇ ರೀತಿ ಧರ್ಮರಾಜ್‌ ಕುಸುಮಾ ಸೊಸೆ ಖುಷಿಯಿಂದ ಇರಬೇಕೆಂದು  ಪ್ರತಿ ಕ್ಷಣವೂ ಹಾರೈಸುತ್ತಿದ್ದಾರೆ. ಇನ್ನೊಂದೆಡೆ ಪೂಜಾ ಕೂಡ ಅಕ್ಕನ ಜೀವನ ಸರಿ ಆಗಲಿ ಎಂದು ಅಂದುಕೊಳ್ಳುತ್ತಿದ್ದಾಳೆ. 

ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಇರುವಾಗ ಭಾಗ್ಯಾಗೆ ಲಕ್ಷ್ಮಿ ಕರೆ ಮಾಡಿ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸುತ್ತಾಳೆ. ಹಾಗೆ ಪೂಜಾಗೆ ಲಕ್ಷ್ಮಿ ಅಕ್ಕನನ್ನು ಚೆನ್ನಾಗಿ ಸಿಂಗರಿಸುವಂತೆ ಹೇಳಿದಾಗ, ನನಗೂ ಗೊತ್ತು, ಅಕ್ಕನನ್ನು ಹೇಗೆ ಅಲಂಕಾರ ಮಾಡಬೇಕು ಅಂತ. ಮೊದಲು ನನ್ನ ಅಕ್ಕನ ಜೀವನ ಸರಿ ಆಗಲಿ ಎಂದು ಕಾಯುತ್ತಿದ್ದೇನೆಂದು ಹೇಳುತ್ತಾಳೆ. ಪೂಜಾ ಮಾತು ಕೇಳಿ ಲಕ್ಷ್ಮಿಗೆ ಗೊಂದಲಗೊಂಡಾಗ, ಅಷ್ಟರಲ್ಲಿ ಭಾಗ್ಯಾ ಸನ್ನೆ ಮಾಡುತ್ತಾಳೆ. ಆಗ ಪೂಜಾ ಏನಿಲ್ಲ ನೀನೇ ಹೇಳಿದಂತೆ ನನ್ನ ಭಾವ ಸ್ವಲ್ಪ ಸಿಡುಕು ಅಲ್ವಾ, ಅದನ್ನೆಲ್ಲಾ ಬಿಟ್ಟು ಅವರು ಅಕ್ಕನಿಗೆ ಒಳ್ಳೆ ಗಂಡನಾಗಿರಲಿ ಅನ್ನೋದು ನನ್ನ ಆಸೆ ಎಂದು ಹೇಳುತ್ತಾಳೆ. 

ಇದನ್ನೂ ಓದಿ: Sandalwood: 2300 ಕೋಟಿ ಒಡೆಯನನ್ನು 2ನೇ ಮದುವೆಯಾದ ಸ್ಟಾರ್‌ ನಟಿ! ಕನ್ನಡಿಗರ ಮನಗೆದ್ದ ಈ ಚೆಲುವೆ ಯಾರು ಗೊತ್ತಾ? 6 ವರ್ಷದ ಬಳಿಕ ಗುಟ್ಟು ರಟ್ಟು!

ಲಕ್ಷ್ಮಿ ಜೊತೆಗೆ ಫೋನ್‌ನಲ್ಲಿ ಮಾತನಾಡಿ ಮುಗಿಸಿದ ಬಳಿಕ ಭಾಗ್ಯಾ, ಪೂಜಾ ಹತ್ತಿರ ನನ್ನ ಜೀವನದ ಮೇಲೆ ಎಲ್ಲರಿಗೂ ಯಾಕೆ ಇಕಷ್ಟು ಆತಂಕ ಎಂದು ತಂಗಿಯನ್ನು ಕೇಳುತ್ತಾಳೆ. ಆ ವೇಳೆ ಪೂಜಾ ಅಕ್ಕನ ಪ್ರಶ್ನೆಗೆ ಭಾವುಕಳಾಗಿ ಭಾಗ್ಯಾಳನ್ನು ತಬ್ಬಿಕೊಂಡು, ಕಣ್ಣೀರಿಟ್ಟು ನಿನ್ನ ಜೀವನ ಸರಿ ಆಗಬೇಕು ಅಕ್ಕಾ, ಭಾವ ಪ್ರತಿ ಭಾರಿ ನಿನ್ನನ್ನು ಕಡೆಗಣಿಸುವುದು, ನಿನ್ನನ್ನು ನಿಕೃಷ್ಟವಾಗಿ ಕಾಣುವುದು ನನಗೆ ಇಷ್ಟವಿಲ್ಲ. ಸದ್ಯಕ್ಕಂತೂ ಡಿವೋರ್ಸ್‌ ಕೊಡುತ್ತೇನೆ ಎನ್ನುತ್ತಿದ್ದಾರೆ ನನಗೆ ಅದೇ ಭಯ ಎಂದು ಹೇಳುತ್ತಾಳೆ. ಅದಕ್ಕೆ ಭ್ಯಾಗ್ಯ ತಂಗಿಯನ್ನು ಸಮಾಧಾನ ಮಾಡುತ್ತಾ. ಹೆದರಬೇಡ, ನಿನ್ನ ಭಾವ ನನಗೆ ಡಿವೋರ್ಸ್‌ ಕೊಡುವುದಿಲ್ಲ. ಅದಕ್ಕೆ ನಾನು ಬಿಡುವುದೂ ಇಲ್ಲ ಎಂದ್ಹೇಳುತ್ತಾಳೆ.

ಮತ್ತೊಂದು ಕಡೆ ಶ್ರೇಷ್ಠಾಗೆ ಕುಸುಮಾ  ಹೂವು, ತೋರಣ ಕಟ್ಟಲು ಹೇಳುತ್ತಾಳೆ. ಆಗ ಶ್ರೇಷ್ಠಾ ಎಲ್ಲವನ್ನೂ ರೆಡಿ ಮಾಡಿ ಕಟ್ಟುತ್ತಿರುವಾಗ ತಾಂಡವ್‌ ಆಕೆಯನ್ನು ನೋಡುದರೂ, ಅವಳೊಂದಿಗೆ ಏನು ಮಾತನಾಡುವುದಿಲ್ಲ. ಅಷ್ಟರಲ್ಲಿ ಅಲ್ಲಿಗೆ ತನ್ವಿ ಬಂದಿದ್ದನ್ನು ನೋಡಿ, ಶ್ರೇಷ್ಠ ಈ ಮಕ್ಕಳಿಂದ ಎಲ್ಲವೂ ಹಾಳಾಗುತ್ತಿದೆ ಎಂದು ಬೈದುಕೊಳ್ಳುತ್ತಾಳೆ. ಅದೇ ಸಂದರ್ಭದಲ್ಲಿ ಶ್ರೇಷ್ಠ ಈಗ ನಾನು ಜಾರಿ ಕೆಳಗೆ ಬೀಳುತ್ತೇನೆ, ಆಗ ತಾಂಡವ್‌ ನನ್ನನ್ನು ಹಿಡಿದುಕೊಳ್ಳುತ್ತಾನೆ. ಒಳ್ಳೆ ಸೀನ್‌ ಕ್ರಿಯೇಟ್‌ ಆಗುತ್ತದೆ ಎಂದು ಅಂದುಕೊಂಡು ಕೆಳಗೆ ಬೀಳುತ್ತಾಳೆ. ಆದರೆ ಈಕೆಯ ದುರಾದೃಷ್ಟ ಅನ್ನುವಂತೆ ತಾಂಡವ್‌ ಸುಮ್ಮನೆಯೇ ನಿಂತಿರುತ್ತಾನೆ. ಇದನ್ನು ನೋಡಿ ಶ್ರೇಷ್ಠಾ ಕೋಪಗೊಳ್ಳುತ್ತಾಳೆ. 

ಇದನ್ನೂ ಓದಿ: Ramesh Arvind: ಚಂದನವನದ ಖ್ಯಾತ ನಟ ರಮೇಶ್‌ ಅರವಿಂದ್‌ಗೆ ಮಂತ್ರಾಲಯದ ಪರಿಮಳ ಪ್ರಶಸ್ತಿ!!

ಬಳಿಕ ಶೇಷ್ಠಾ ತಾಂಡವ್‌ನನ್ನು ಯಾರೂ ಇಲ್ಲದ ಸಮಯವನ್ನು ನೋಡಿ ಟೆರೆಸ್‌ಗೆ  ಕರೆದುಕೊಂಡು ಹೋಗಿ, ನಿನಗೆ ನಾಚಿಕೆ ಆಗುವುದಿಲ್ಲವಾ? ನಾನು ಮೇಲಿಂದ ಬೀಳುವಾಗ ಹಿಡಿದುಕೊಳ್ಳೋಕೆ ಆಗಲಿಲ್ವಾ ನಿನಗೆ ಎಂದು ಪ್ರಶ್ನಿಸುತ್ತಾಳೆ. ಆಗ ಶ್ರೇಷ್ಠಾ ಮಾತು ಕೇಳಿ  ಕೋಪಗೊಂಡ ತಾಂಡವ್‌, ನೀನು ಬಿದ್ದ ತಕ್ಷಣ ನಾನು ಬಂದು ಹಿಡಿದುಕೊಳ್ಳೋಕೆ ನಾನು ಹೀರೋ ಅಲ್ಲ, ಯಾರಾದರೂ ನಮ್ಮಿಬ್ಬರನ್ನು ಇಲ್ಲಿ ನೋಡಿದರೆ ಸರಿ ಇರುವುದಿಲ್ಲ ಎಂದು  ಹೇಳಿ ಅಲ್ಲಿಂದ ಹೋಗುತ್ತಾನೆ.

ವಿವಾಹ ವಾರ್ಷಿಕೋತ್ಸವದ ಕಾರ್ಯಕ್ರಮ ಆರಂಭವಾಗುತ್ತದೆ. ತಾಂಡವ್‌ ಮೊದಲು ಬಂದು ಹಸೆಮಣೆ ಮೇಲೆ ಕೂತಾಗ, ಮನಸ್ಸಿನಲ್ಲಿಯೇ ಇವಳಿಗೆ ಡಿವೋರ್ಸ್‌ ಕೊಡಲು ಕಾಯುತ್ತಿದ್ದೇನೆ. ಆದರೆ ಮನೆಯವರು ಮತ್ತೆ ಮದುವೆ ಮಾಡಲು ಕಾಯುತ್ತಿದ್ದಾರೆ ಎಂದು ಬೈದುಕೊಳ್ಳುತ್ತಾನೆ. ನಂತರ ಪೂಜಾ ಭಾಗ್ಯಾಳನ್ನು ಕರೆದುಕೊಂಡು ಬರುತ್ತಾಳೆ. ಎಲ್ಲರೂ ಭಾಗ್ಯಾಳನ್ನು ನೋಡಿ ಖುಷಿಯಾಗುತ್ತಾರೆ. ಭಾಗ್ಯಾ ಮದುಮಗಳಂತೆ ತುಂಬಾ ಸುಂದರವಾಗಿಯೇ ಕಾಣುತ್ತಿದ್ದು, ಹೆಂಡತಿಯನ್ನು ಒಂದು ಕ್ಷಣ ನೋಡಿದ ತಾಂಡವ್‌ ಕೂಡಾ ಬೆರಗಾಗುತ್ತಾನೆ. ಇಬ್ಬರೂ ಹಸೆಮಣೆ ಮೇಲೆ ಕೂತಾಗ, ಮಕ್ಕಳು ಕೇಳಿದ್ದರಿಂದ ತಾಂಡವ್‌, ನಿಮ್ಮ ಅಮ್ಮ ಬಹಳ ಚೆನ್ನಾಗಿ ಕಾಣುತ್ತಿದ್ದಾಳೆ ಎಂದು ಹೊಗಳುತ್ತಾನೆ. ಹಾಗಾದ್ರೆ ಮುಂದೆ ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮ ಯಾವುದೇ ಅಡೆತಡೆ ಇಲ್ಲದೇ ನಡೆಯುತ್ತಾ? ಅಥವಾ ಸಂಭ್ರಮವನ್ನು ಕೆಡಿಸಲು  ಪೂಜಾ ಏನು ಪ್ಲ್ಯಾನ್‌ ಮಾಡುತ್ತಾಳೆ  ಎಂದು ಕಾದು ನೋಡಬೇಕು.

ಇದನ್ನೂ ಓದಿ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುತ್ತಾರಾ ಮಾಲಾಶ್ರೀ ಪುತ್ರಿ ಆರಾಧನಾ.?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News