"ರಾಮರಸ" ಸಿನಿಮಾ ಟೈಟಲ್‌ ಬಿಡುಗಡೆ ಮಾಡಿದ ಧ್ರುವ ಸರ್ಜಾ

Ramarasa Movie: ಗುರು ದೇಶಪಾಂಡೆ ಅವರು ಈ ಹಿಂದೆ ಸಾಂಗ್ ರೆಕಾರ್ಡಿಂಗ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದರು. ಇಂದು ಧ್ರುವ ಸರ್ಜಾ ಅವರಿಂದ ಶೀರ್ಷಿಕೆ ಅನಾವರಣ ಮಾಡಿಸಿದ್ದಾರೆ.

Written by - YASHODHA POOJARI | Last Updated : Apr 19, 2024, 01:55 PM IST
    • ಗುರು ದೇಶಪಾಂಡೆ ನಿರ್ದೇಶನದ "ರಾಮರಸ" ಸಿನಿಮಾ
    • "ರಾಮರಸ" ಸಿನಿಮಾ ಟೈಟಲ್‌ ಬಿಡುಗಡೆ
    • ಟೈಟಲ್‌ ಬಿಡುಗಡೆ ಮಾಡಿದ ಧ್ರುವ ಸರ್ಜಾ
"ರಾಮರಸ" ಸಿನಿಮಾ ಟೈಟಲ್‌ ಬಿಡುಗಡೆ ಮಾಡಿದ ಧ್ರುವ ಸರ್ಜಾ  title=

ಬೆಂಗಳೂರು: ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ "ಪ್ರೊಡಕ್ಷನ್ ನಂ 4" ಚಿತ್ರದ ಹಾಡುಗಳ ಧ್ವನಿಮುದ್ರಣ (ಸಾಂಗ್ ರೆಕಾರ್ಡಿಂಗ್) ಕೆಲವು ದಿನಗಳ ಹಿಂದೆ ನೆರವೇರಿತ್ತು. ಈಗ ಆ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಚಿತ್ರಕ್ಕೆ "ರಾಮರಸ" ಎಂದು ನಾಮಕರಣ ಮಾಡಲಾಗಿದೆ. "ಜಟ್ಟ", " ಮೈತ್ರಿ ಚಿತ್ರಗಳ ಖ್ಯಾತಿಯ ಬಿ.ಎಂ ಗಿರಿರಾಜ್ ನಿರ್ದೇಶಿಸುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿದರು. 

ಶ್ರೀರಾಮನವಮಿಯ ದಿವಸದಂದೆ ಈ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ನಡೆಯಬೇಕಿತ್ತು. ಆದರೆ ಕಾರಣಾಂತರದಿಂದ ಮಾರನೇ ದಿನ ಬಿಡುಗಡೆಯಾಗುತ್ತಿದೆ. "ರಾಮರಸ" ಟೈಟಲ್ ಚೆನ್ನಾಗಿದೆ. ಮೋಷನ್ ಪೋಸ್ಟರ್ ಕೂಡ ಅದ್ಭುತವಾಗಿದೆ. ಗುರು ದೇಶಪಾಂಡೆ ಅವರು ನಮ್ಮ ಅಣ್ಣನ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ನೂತನ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ‌ .ನನ್ನ ಸ್ನೇಹಿತ ಕೂಡ ಈ ಚಿತ್ರದಲ್ಲಿ ನಟಸುತ್ತಿದ್ದಾನೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಧ್ರುವ ಸರ್ಜಾ ಹಾರೈಸಿದರು. 

ಇದನ್ನೂ ಓದಿ: Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?

"ರಾಮರಸ" , ಹಾರಾರ್ ಕಾಮಿಡಿ ಜಾನರ್ ನ ಚಿತ್ರ. ಜಿ ಅಕಾಡೆಮಿಯ ಹದಿನಾರು ಜನ ಹೊಸ ಪ್ರತಿಭೆಗಳಿಗೆ ತರಭೇತಿ ನೀಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ಗುರು ದೇಶಪಾಂಡೆ ಅವರು ಈ ಹಿಂದೆ ಸಾಂಗ್ ರೆಕಾರ್ಡಿಂಗ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ದರು. ಇಂದು ಧ್ರುವ ಸರ್ಜಾ ಅವರಿಂದ ಶೀರ್ಷಿಕೆ ಅನಾವರಣವನ್ನು ಮಾಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಂಗ್ ರೆಕಾರ್ಡಿಂಗ್ ಪೂಜೆ ಮಾಡುವುದು ವಿರಳ. ಹಳೆಯ ಸಂಪ್ರದಾಯಗಳನ್ನು ಪುನಃ ಗುರು ದೇಶಪಾಂಡೆ ಅವರು ಚಿತ್ರರಂಗಕ್ಕೆ ತರುತ್ತಿದ್ದಾರೆ ಎಂದು ನಿರ್ದೇಶಕ ಬಿ.ಎಂ.ಗಿರಿರಾಜ್ ತಿಳಿಸಿದರು.

2008 ರಲ್ಲಿ ಮೊದಲ ನಿರ್ದೇಶನದೊಂದಿಗೆ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶಿಸಿದೆ. ಅಂದಿನಿಂದ ನನ್ನ ಹೆಚ್ಚು ಚಿತ್ರಗಳಲ್ಲಿ‌ ಹೊಸ ಕಲಾವಿದರಿಗೆ ಅವಕಾಶ ಕೊಡುತ್ತಾ ಬಂದಿದ್ದೇನೆ. ಇದು ನಮ್ಮ‌ ಜಿ ಸಿನಿಮಾಸ್ ಲಾಂಛನದಲ್ಲಿ ನಾನು ನಿರ್ಮಾಣ ಮಾಡುತ್ತಿರುವ ನಾಲ್ಕನೇ ಸಿನಿಮಾ.‌ ಈ ಚಿತ್ರದಲ್ಲೂ ಜಿ ಅಕಾಡೆಮಿಯ ಹದಿನಾರು ಜನ ನೂತನ ಪ್ರತಿಭೆಗಳು ಅಭಿನಯಿಸುತ್ತಿದ್ದಾರೆ. ಅವರಿಗೆ ಅಭಿನಯಕ್ಕೆ ಬೇಕಾದ ವರ್ಕ್ ಶಾಪ್ ನಡೆಸಲಾಗಿದೆ. ಇವರೊಂದಿಗೆ ಕನ್ನಡದ ಖ್ಯಾತ ನಟರೊಬ್ಬರು ನಟಿಸುತ್ತಿದ್ದು, .ಮಾತುಕತೆ ಅಂತಿಮ ಹಂತದಲ್ಲಿದೆ. ಮೇ ಎರಡನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಂ.ಗಿರಿರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅವರ ಹಿಂದಿನ ಚಿತ್ರಗಳು ನನಗೆ ಬಹಳ ಇಷ್ಟವಾಗಿದ್ದವು. 

ಕನ್ನಡದಲ್ಲಷ್ಟೇ ಕಮರ್ಷಿಯಲ್, ಆರ್ಟ್ ಅಂತ ವಿಭಾಗಗಳಿದೆ. ಆದರೆ ಬೇರೆ ಭಾಷೆಗಳಲ್ಲಿ ಆ ಚಿತ್ರ ಪ್ರಶಸ್ತಿ ಪಡೆದುಕೊಂಡಿರುತ್ತದೆ ಹಾಗೂ ಗಳಿಕೆಯಲ್ಲೂ ಮುಂದಿರುತ್ತದೆ. ಈ ಚಿತ್ರ ಕೂಡ ಅಂತಹ ಚಿತ್ರವಾಗಬೇಕೆಂದು ನನ್ನ ಆಸೆ. ಬಿ.ಜೆ.ಭರತ್ ಈಗಾಗಲೇ "ರಾಮರಸ" ದ ಎರಡು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಪುನೀತ್ ಆರ್ಯ ಹಾಡುಗಳನ್ನು ಬರೆದಿದ್ದಾರೆ. ಸುನೀಲ್ ಹೆಚ್ ಸಿ ಗೌಡ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ‌ ನಿರ್ವಹಿಸುತ್ತಿದ್ದಾರೆ‌. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಶೀರ್ಷಿಕೆ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ವಿಶೇಷ ಧನ್ಯವಾದ ಎಂದರು ನಿರ್ಮಾಪಕ ಗುರು ದೇಶಪಾಂಡೆ. 

ಇದನ್ನೂ ಓದಿ: ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!

ಜಿ ಅಕಾಡೆಮಿಯಲ್ಲಿ ಅಭಿನಯ ಕಲಿತಿರುವ ಹದಿನಾರು ನೂತನ ಪ್ರತಿಭೆಗಳು ಹಾಗೂ ಸಹ ನಿರ್ದೇಶಕರಾಗಿ ಕಾರ್ಯ ನಿರವಹಿಸಲಿರುವ ಮೂವರು ನವ ಸಹ ನಿರ್ದೇಶಕರು ಹಾಗೂ ನೂತನ ಸಹ ನಿರ್ಮಾಪಕರೊಬ್ಬರು ತಮ್ಮ ಪರಿಚಯ ಮಾಡಿಕೊಂಡರು.  ಸಂಗೀತ ನಿರ್ದೇಶಕ ಬಿ.ಜೆ.ಭರತ್. ಗೀತರಚನೆಕಾರ ಪುನೀತ್ ಆರ್ಯ, ಕಾರ್ಯಕಾರಿ ನಿರ್ಮಾಪಕ ಸುನೀಲ್ ಹೆಚ್ ಸಿ ಗೌಡ ಹಾಗೂ ವಿತರಕ ವೆಂಕಟ್ ಗೌಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News