Devil: ಅಕ್ಷಯ ತೃತೀಯದಂದು ಚಾಲೆಂಜಿಂಗ್‌ ಸ್ಟಾರ್‌ ಡೆವಿಲ್ ಮೇಕಿಂಗ್ ಗ್ಲಿಂಪ್ಸ್ ಔಟ್‌: ದರ್ಶನ್‌ ಲುಕ್‌ ಹೇಗಿದೆ ಗೊತ್ತೇ??

Devil Glimpse: ಬಾಕ್ಸ್‌ ಆಫೀಸ್‌ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡಿವಿಲ್‌ ದಿ ಹೀರೋ ಸಿನಿಮಾದ ಹೊಸ ಮೇಕಿಂಗ್‌ ವಿಡಿಯೋ ಗ್ಲಿಂಪ್ಸ್‌ ಅನ್ನು ಚಿತ್ರತಂಡ ಅಕ್ಷಯ ತೃತೀಯದಂದು ರಿಲೀಸ್‌ ಮಾಡಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : May 10, 2024, 05:45 PM IST
  • ಅಕ್ಷಯ ತೃತೀಯದಂದು ಚಿತ್ರತಂಡ ಮೇಕಿಂಗ್‌ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ದರ್ಶನ್ ಪಾತ್ರದ ಖದರ್ ಹೇಗೆದೆ ಎಂಬುದನ್ನು ತಿಳಿಯಬಹುದು.
  • ಡೆವಿಲ್‌ ಶೀರ್ಷಿಕೆಯಂತೆ ದರ್ಶನ್‌ ಮಾಡುತ್ತಿರುವ ರೋಲ್‌ ವಿಲನ್‌ ಆಗಿದ್ದು, ಹಾಗೆಯೇ ಹೀರೋ ಅನ್ನೋ ಫೀಲ್ ಕೂಡ ತರಲಿದ್ದಾರೆ.
  • ಡೈರೆಕ್ಟರ್ ಮಿಲನ ಪ್ರಕಾಶ್ ಸಿನಿಮಾದ ಬಗ್ಗೆಯಾಗಲಿ, ಪಾತ್ರದ ಬಗ್ಗೆಯಾಗಲೇ ಅಷ್ಟಾಗಿ ಏನೋ ಹೇಳಿಕೊಂಡಿಲ್ಲ.
Devil: ಅಕ್ಷಯ ತೃತೀಯದಂದು ಚಾಲೆಂಜಿಂಗ್‌ ಸ್ಟಾರ್‌ ಡೆವಿಲ್ ಮೇಕಿಂಗ್ ಗ್ಲಿಂಪ್ಸ್ ಔಟ್‌: ದರ್ಶನ್‌ ಲುಕ್‌ ಹೇಗಿದೆ ಗೊತ್ತೇ?? title=

Devil New Glimpse Out: ಸ್ಯಾಂಡಲ್‌ವುಡ್‌ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್  ಅಭಿನಯದ ಬಹು ನಿರೀಕ್ಷಿತ ಡೆವಿಲ್  ಚಿತ್ರದ ಮೇಕಿಂಗ್‌ ವಿಡಿಯೋ ರಿಲೀಸ್‌ ಆಗಿದೆ. ಅಕ್ಷಯ ತೃತೀಯದಂದು ಚಿತ್ರತಂಡ ಮೇಕಿಂಗ್‌ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ದರ್ಶನ್ ಪಾತ್ರದ ಖದರ್ ಹೇಗೆದೆ ಎಂಬುದನ್ನು ತಿಳಿಯಬಹುದು. ಈ ಚಿತ್ರದ ಮೇಕಿಂಗ್‌ ಗ್ಲಿಂಪ್ಸ್ ನೋಡಿದರೇ ಸಾಕು, ಸಿನಿಮಾದ ಫಸ್ಟ್ ಲುಕ್ ಹೇಗೆ ತಯಾರಾಗಿದೆ ಅನ್ನೋದು ಗೊತ್ತಾಗುತ್ತದೆ.

ಡೆವಿಲ್‌ ಮೇಕಿಂಗ್‌ ಗ್ಲಿಪ್ಸ್‌ ವಿಡಿಯೋದಲ್ಲಿ  ಕ್ಯಾಮರಾಮನ್, ಡೈರೆಕ್ಟರ್, ದರ್ಶನ್ ಮತ್ತು ತಂಡದ ಇತರ ಸದಸ್ಯರೆಲ್ಲರೂ ಕೂಡ ಇದ್ದಾರೆ. ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿಯೇ ಇದ್ದು, ಇಷ್ಟು ದಿನ ನಟ ದರ್ಶನ್‌ ಅವರನ್ನು ಹೀರೋ ಆಗಿ ನೋಡುತ್ತಿದ್ದ ಪ್ರೇಕ್ಷಕರು, ಈ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಶೀರ್ಷಿಕೆಯಂತೆ  ದರ್ಶನ್‌ ಮಾಡುತ್ತಿರುವ ರೋಲ್‌  ವಿಲನ್‌ ಆಗಿದ್ದು, ಹಾಗೆಯೇ ಹೀರೋ ಅನ್ನೋ ಫೀಲ್ ಕೂಡ ತರಲಿದ್ದಾರೆ.

ಇದನ್ನೂ ಓದಿ:  Rajanikanth: ಸುಸೈಡ್‌ ಮಾಡಿಕೊಳ್ಳಲು ಪ್ರಯತ್ನಿಸಿದ್ದರಂತೆ ರಜನಿಕಾಂತ್! ʼಆʼ ಘಟನೆಯಿಂದ ಬದಲಾಯ್ತು ಸೂಪರ್‌ ಸ್ಟಾರ್‌ ಲೈಫ್‌!!

ಡೈರೆಕ್ಟರ್ ಮಿಲನ ಪ್ರಕಾಶ್ ಸಿನಿಮಾದ ಬಗ್ಗೆಯಾಗಲಿ, ಪಾತ್ರದ ಬಗ್ಗೆಯಾಗಲೇ ಅಷ್ಟಾಗಿ ಏನೋ ಹೇಳಿಕೊಂಡಿಲ್ಲ. ಆದರೆ ಈ ಡೆವಿಲ್‌ ಮೇಕಿಂಗ್‌ ಗ್ಲಿಪ್ಸ್‌ ವಿಡಿಯೋದಲ್ಲಿ ನಿರ್ದೇಶಕ ಮಿಲನ ಪ್ರಕಾಶ್, ಕ್ಯಾಮರಾಮ್ಯಾನ್‌ ಸುಧಾಕರ್  ಹಾಗೂ ನಟ ದರ್ಶನ್‌ ಕ್ಯಾಮರಾ ಫೇಸ್ ಮಾಡುತ್ತಿರುವುದೆಲ್ಲಾ ಹೆಚ್ಚು ಹೈಲೈಟ್‌ ಆಗಿದೆ. ಇದಕ್ಕೂ ಮುಂಚೆ ಡಿಬಾಸ್‌ ಹುಟ್ಟುಹಬ್ಬ ಫೆಬ್ರವರಿ 16 ರಂದು ಈ ಚಿತ್ರದ ಫಸ್ಟ್ ಗ್ಲಿಂಪ್ಸ್ರಿವೀಲ್‌ ಆಗಿತ್ತು. 

ನಟ ದರ್ಶನ್‌ಗೆ ಇತ್ತೀಚೆಗೆ ಶೂಟಿಂಗ್ ಟೈಮ್‌ನಲ್ಲಿ ಎಡಗೈಗೆ ಪೆಟ್ಟು ಆಗಿದ್ದರೂ ಕೂಡ, ಆ್ಯಕ್ಷನ್ ಸೀನ್‌ ಚಿತ್ರೀಕರಣ ಮುಗಿದ ಮೇಲೆ ಎಡಗೈ ಶಸ್ತ್ರ ಚಿಕಿತ್ಸೆ ಮಾಡಿಸಿದರು. ಆದರೆ ಈ ನಟ ಡೆವಿಲ್ ಸಿನಿಮಾ ಅಕ್ಟೋಬರ್ ನಲ್ಲಿಯೇ ತೆರೆಕಾಣಬೇಕಿತ್ತು. ಕೈಗೆ ಪೆಟ್ಟು ಬೀಳದೇ ಇದ್ದರೇ,  ಇಷ್ಟೊತ್ತಿಗಾಗಲೇ  ಶೇಕಡ 70 ರಷ್ಟು ಚಿತ್ರೀಕರಣ ಪೂರ್ಣಗೊಳ್ಳುತ್ತಿತ್ತು. ಆದರೆ ಇದೀಗ ತಡವಾಗಿದೆಂದು ಹೇಳಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News