Halagali: ಐತಿಹಾಸಿಕ ʻಹಲಗಲಿʼ ಕಥೆಗೆ ನಾಯಕನಾದ ನಟರಾಕ್ಷಸ ಧನಂಜಯ್!!‌

Halagali Update: ಬಹುಕೋಟಿ ವೆಚ್ಚದಲ್ಲಿ ನಿರ್ದೇಶಕ ಸುಕೇಶ್‌ ಸಾರಥ್ಯದಲ್ಲಿ ಮೂಡಿಬರುತ್ತಿರುವ ಐತಿಹಾಸಿಕ ʻಹಲಗಲಿʼ ಸಿನಿಮಾ ಕಥೆಗೆ ನಟರಾಕ್ಷಸ ಡಾಲಿ ಧನಂಜಯ್‌ ಆಯ್ಕೆಯಾಗಿದ್ದಾರೆ.  ಇದರ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.  

Written by - Zee Kannada News Desk | Last Updated : May 19, 2024, 10:49 AM IST
  • ‘ಕೃಷ್ಣ ತುಳಸಿ’ ಚಿತ್ರದ ಖ್ಯಾತ ಡೈರೆಕ್ಟರ್‌ ಸುಕೇಶ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಥೆಯಲ್ಲಿ ಧನಂಜಯ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
  • 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕಿಚ್ಚು ಹತ್ತಿಕೊಂಡಾಗ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ನಿಂತಿದ್ದರು.
  • ʻಹಲಗಲಿʼ ಚಿತ್ರಕ್ಕೆ ಮೊದಲು ಡಾರ್ಲಿಂಗ್‌ ಕೃಷ್ಣ ಹೀರೋ ಆಗಿ ಆಯ್ಕೆಯಾಗಿದ್ದರು. ಪಾತ್ರಕ್ಕಾಗಿ ಈ ನಟ ಹಲವು ತಯಾರಿಗಳನ್ನು ಕೂಡ ಮಾಡಿಕೊಂಡಿದ್ದರು.
Halagali: ಐತಿಹಾಸಿಕ ʻಹಲಗಲಿʼ ಕಥೆಗೆ ನಾಯಕನಾದ ನಟರಾಕ್ಷಸ ಧನಂಜಯ್!!‌ title=

Daali Dhananjay In Halagali: ಐತಿಹಾಸಿಕ ಕಥೆಯ ʻಹಲಗಲಿʼ ಸಿನಿಮಾಗೆ ನಟ ಡಾಲಿ ಧನಂಜಯ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ. ‘ಕೃಷ್ಣ ತುಳಸಿ’ ಚಿತ್ರದ ಖ್ಯಾತ ಡೈರೆಕ್ಟರ್‌ ಸುಕೇಶ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಥೆಯಲ್ಲಿ ಧನಂಜಯ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸದ್ಯ ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.

ಹಲಗಲಿ ಚಿತ್ರಕಥೆ ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ಬ್ರಿಟಿಷರಿಗೆ ಗೆರಿಲ್ಲಾ ವಾರ್‌ಫೇರ್‌ ಮೂಲಕ ಸಿಂಹಸ್ವಪ್ನವಾಗಿ ಕಾಡಿದ ಹಲಗಲಿ ಬೇಡರ ಕುರಿತಾದ ಕಥಾಹಂದರ ಹೊಂದಿದೆ. 1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಕಿಚ್ಚು ಹತ್ತಿಕೊಂಡಾಗ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಬೇಡರು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ನಿಂತಿದ್ದರು. ಈ ವಿಷಯದ ಕುರಿತಾಗಿ ಈ ಸಿನಿಮಾ ಮೂಡಿಬರಲಿದೆ.

ಇದನ್ನೂ ಓದಿ: Aishwarya Rai Bachchan: ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ಐಶ್ವರ್ಯಾ ರೈ ಬಚ್ಚನ್! ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್‌ ಪ್ರಾರ್ಥನೆ

ಈಗಾಗಲೇ ʻಹಲಗಲಿʼ ಚಿತ್ರದ ಮುಹೂರ್ತ ನೆರವೇರಿದ್ದು, ಒಂದು ಹಂತದ ಶೂಟಿಂಗ್‌ ಸಹ ಮಾಡಲಾಗಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ಮೊದಲು  ಡಾರ್ಲಿಂಗ್‌ ಕೃಷ್ಣ ಹೀರೋ ಆಗಿ ಆಯ್ಕೆಯಾಗಿದ್ದರು. ಪಾತ್ರಕ್ಕಾಗಿ ಈ ನಟ ಹಲವು ತಯಾರಿಗಳನ್ನು ಕೂಡ ಮಾಡಿಕೊಂಡಿದ್ದರು. ಆದರೆ ಡೇಟ್‌ ಸಮಸ್ಯೆಯಿಂದ ಈ ಬಿಗ್‌ ಬಜೆಟ್‌ ಪ್ರಾಜೆಕ್ಟ್‌ನಿಂದ ಹೊರನಡೆದರು. ಈ ಚಿತ್ರ ಸುಮಾರು 80 ಕೋಟಿ ರೂ ಯಲ್ಲಿ ನಿರ್ಮಾಣವಾಗುತ್ತಿದೆ.

ಬಹುಕೋಟಿ ವೆಚ್ಚದಲ್ಲಿ ಸಿದ್ದತೆಗಳು ನಡೆಯುತ್ತಿದ್ದು, ಚಿತ್ರೀಕರಣಕ್ಕಾಗಿ ಲೊಕೇಷನ್‌ ಹುಡುಕಿ ಅದ್ಧೂರಿ ಸೆಟ್‌ ನಿರ್ಮಿಸುವ ಎಲ್ಲಾ ತಯಾರಿಗಳನ್ನು ಸಿನಿತಂಡ ಮಾಡಿಕೊಳ್ಳುತ್ತಿದೆ. ಹಾಗೆಯೇ ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಮಾಡುವು ಆಲೋಚನೆಯಲ್ಲಿ ಚಿತ್ರತಂಡ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಧನಂಜಯ ಮತ್ತೊಂದು ಐತಿಹಾಸಿಕ ಚಿತ್ರದಲ್ಲಿ ಭಾಗವಾದಂತಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  
.

Trending News