Virat Kohli-Anushka Sharma: ʼನನ್ನ ಪತ್ನಿಯೇ ನನಗೆ ಸ್ಫೂರ್ತಿʼ - ವಿರಾಟ್ ಕೊಹ್ಲಿ

Virat Kohli-Anushka Sharma: ಜೀವನದಲ್ಲಿ ಸ್ಪೂರ್ತಿ ಅಥವಾ ಆದರ್ಶ ಮನೆಯಿಂದ ಪ್ರಾರಂಭವಾಗುತ್ತದೆ.ಹಾಗೆಯೇ ನನಗೆ ಪತ್ನಿ ಅನುಷ್ಕಾ ಶರ್ಮಾವೇ ದೊಡ್ಡ ಸ್ಫೂರ್ತಿ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

Written by - Zee Kannada News Desk | Last Updated : Mar 1, 2023, 02:04 PM IST
  • ಪತ್ನಿ ಅನುಷ್ಕಾ ಶರ್ಮಾವೇ ದೊಡ್ಡ ಸ್ಫೂರ್ತಿ ಎಂದು ವಿರಾಟ್ ಕೊಹ್ಲಿ
  • ವಿರಾಟ್ ಕೊಹ್ಲಿಯ ಸಾಧನೆಗೆ ಶರ್ಮಾರವರ ಕೊಡುಗೆ ಅಪಾರ
  • ಜೀವನದಲ್ಲಿ ಸ್ಪೂರ್ತಿ ಅಥವಾ ಆದರ್ಶ ಮನೆಯಿಂದ ಪ್ರಾರಂಭ
Virat Kohli-Anushka Sharma: ʼನನ್ನ ಪತ್ನಿಯೇ ನನಗೆ ಸ್ಫೂರ್ತಿʼ - ವಿರಾಟ್ ಕೊಹ್ಲಿ title=

Virat Kohli-Anushka Sharma: ವಿರಾಟ್ ಕೊಹ್ಲಿ ತಮ್ಮ ಪತ್ನಿಯ ಬಗ್ಗೆ ಆಗಾಗ ವ್ಯಕ್ತಪಡಿಸುತ್ತಿರುತ್ತಾರೆ . ಹಾಗೆಯೇ ಇತ್ತೀಚೀನ ಸಂದರ್ಶನವೊಂದರಲ್ಲಿ ಅನುಷ್ಕಾ ಶರ್ಮಾ ಮೇಲೆ ಪ್ರೀತಿಯ ಬಗೆ ಬಿಚ್ಚಿಟ್ಟಿದ್ದಾರೆ.   ಅನುಷ್ಕಾ ಶರ್ಮಾ ಜೊತೆಗಿರುವುದು ಅದೃಷ್ಠ ಎಂದು ಭಾವಿಸುತ್ತೇನೆ.ಅವರೊಂದಿಗೆ ಕಳೆದ ಕ್ಷಣ  ತನಗೆ  ಹೊಸ ಜೀವನವನದ ಅನುಭವ  ನೀಡಿದೆ.

 ಆಕೆಯ  ಸ್ವೀಕಾರದಿಂದ ಹೆಚ್ಚು ಕಲಿತಿದ್ದೇನೆ ಎಂದು ಅವರು ಹೇಳಿದರು. ಜೀವನದಲ್ಲಿ ಸ್ಪೂರ್ತಿ ಅಥವಾ ಆದರ್ಶ ಮನೆಯಿಂದ ಪ್ರಾರಂಭವಾಗುತ್ತದೆ.  ಹಾಗೆಯೇ  ನನಗೆ ಪತ್ನಿ ಅನುಷ್ಕಾ ಶರ್ಮಾವೇ ದೊಡ್ಡ ಸ್ಫೂರ್ತಿ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಅನುಷ್ಕಾನ್ನು ಭೇಟಿಯಾಗುವ ಮೊದಲು   ಜೀವನದ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದೆ ಆಕೆಯ ಪ್ರೀತಿಯಲ್ಲಿ ಬಿದ್ದ ಬಳಿಕ ತನ್ನಲ್ಲಿ ಬದಲಾವಣೆಗಳನ್ನು ಕಾಣಲಾರಂಭಿಸಿದ್ದೆನೆ. ವಿರಾಟ್ ಕೊಹ್ಲಿಯ ಸಾಧನೆಗೆ  ಶರ್ಮಾರವರ ಕೊಡುಗೆ ಅಪಾರ ಎಂದರು. 

ಇದನ್ನೂ ಓದಿ: IND vs AUS : ಮೊದಲ ಎಸೆತದಲ್ಲಿ ಆಸ್ಟ್ರೇಲಿಯಾ ದೊಡ್ಡ ಪ್ರಮಾದ, ರೋಹಿತ್ ಶರ್ಮಾ ಜಸ್ಟ್‌ ಮಿಸ್‌.!

ಲಾಕ್‌ಡೌನ್‌ನಲ್ಲಿ ಒಬ್ಬರನ್ನೊಬ್ಬರು ಅರಿಯಲು ಸಹಕಾರಿಯಾಯಿತು.ಇಡೀ ಜಗತ್ತು COVID-19 ನಿಂದ ತತ್ತರಿಸುತ್ತಿರುವಾಗ ಅವರು 2021 ರಲ್ಲಿ ತಮ್ಮ ಮಗಳು ವಾಮಿಕಾಳಿಗೆ  ಪೋಷಕರಾದರು. ಆ  ಸಮಯದಲ್ಲಿ ಅನುಷ್ಕಾ ಶರ್ಮಾ ತಾಯಿತನ ನಿಭಾಯಿಸಿದರ  ಮುಂದೆ ನನ್ನ ಸಮಸ್ಯೆಗಳು ಏನೂ ಇಲ್ಲ ಎಂದು ಅವರು ಹೇಳಿದರು. ತ್ಯಾಗದ ಸಂಕೇತಕ್ಕೆ   ಶರ್ಮಾರವನ್ನು ಹೋಲಿಸಿದ್ದಾರೆ.

2018 ರಲ್ಲಿ, ಅವರು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ತಮ್ಮ 22 ನೇ ಟೆಸ್ಟ್ ಶತಕವನ್ನು ಸಿಡಿಸಿದರು. ಅವರು ಜೇಮ್ಸ್ ಆಂಡರ್ಸನ್ ಅವರನ್ನು ತೀವ್ರವಾಗಿ ಪರೀಕ್ಷಿಸಿದ 120 ಕ್ಕೂ ಹೆಚ್ಚು ರನ್ಗಳನ್ನು ಮಾಡಿದರು. ಅವರಂತೆಯೇ ಅನುಷ್ಕಾ ಶರ್ಮಾ ಕೂಡ ನರ್ವಸ್ ಆಗಿದ್ದರು ಎಂದು ಹೇಳಿದ್ದಾರೆ. ಅದಕ್ಕೂ ಮೊದಲು ಅವರು ದೀರ್ಘಕಾಲ ಟೆಸ್ಟ್ ಶತಕ ಗಳಿಸಿರಲಿಲ್ಲ.

ಇದನ್ನೂ ಓದಿ: Team India: ಟೀಂ ಇಂಡಿಯಾಗೆ ದಿಢೀರ್ ಎಂಟ್ರಿ ಕೊಟ್ಟ ಈ ಮಾರಕ ಬೌಲರ್!

ಎಪಿಕ್ ನಾಕ್ ನಂತರ ಡ್ರೆಸ್ಸಿಂಗ್ ಕೋಣೆಗೆ ಕಾಲಿಟ್ಟಾಗ ಅವರು ಭಾವುಕನಾದೆ ಅಲ್ಲೆ ಅನುಷ್ಕಾ ಅಲ್ಲಿದ್ದಳು. ಅವಳು ಸ್ವಲ್ಪ ಭಾವೋದ್ರಿಕ್ತಳಾದಳು. ಅವಳು ನನಗೆ  ಧೈರ್ಯ  ಹೇಳಿ ಸಮಾಧಾನ ಪಡಿಸಿದಳು  ಏಕೆಂದರೆ ಅವಳು ಕ್ರೀಡಾಂಗಣದ ಪರಿಸ್ಥಿಯನ್ನು  ಅರ್ಥಮಾಡಿಕೊಂಡಿದ್ದಳು.  ನಾನು ಸೋತಾಗ ಧೈರ್ಯ ಹೇಳಿ  ಗೆದ್ದಾಗ ನನಗಿಂತ ಹೆಚ್ಚು ಅವಳೇ ಸಂತಸದಿಂದ ಇರುವಳು ಎಂದು ಪತ್ನಿಯ ಮೇಲಿನ ಪ್ರೀತಿಯನ್ನು ವಿರಾಟ್‌ ವ್ಯಕ್ತ ಪಡಿಸಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News