ಅಭಿಮಾನಿ ಕಲ್ಪನೆಯ ಸೀತೆಯರಿವರು..ಹಾಗಾದ್ರೆ ಈ ಪಾತ್ರ ಯಾರಿಗೆ ಚೆನ್ನಾಗಿ ಹೊಂದುತ್ತೆ ನೀವೇ ಹೇಳಿ..!

Adipurush : ಆದಿಪುರುಷ್‌ ಸಿನಿಮಾ ರಿಲೀಸ್‌ ಆದಾಗಿನಿಂದಲೂ ಸೋಷಿಯಲ್‌ ಮಿಡಿಯಾದಲ್ಲಿ ರಾಮ ಸೀತೆ ವೇಷ ಧರಿಸಿ ರೀಲ್ಸ್‌ ಹಾಗೂ ಪೋಸ್ಟ್‌ಗಳನ್ನು ಶೇರ್‌ ಮಾಡುತ್ತಿದ್ದಾರೆ. ಇದೀಗ ಅಂತದ್ದೇ ಒಂದು ಪೋಸ್ಟ್‌ ಸಖತ್‌ ವೈರಲ್‌ ಆಗಿದ್ದು, ಅದರಲ್ಲಿ ನಿಮ್ಮ ಫೇವರೆಟ್‌ ಯಾರು ನೀವೆ ಹೇಳಿ..  

Written by - Savita M B | Last Updated : Jun 22, 2023, 11:47 AM IST
  • ಆದಿಪುರುಷ್‌ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ.
  • ಈ ಚಿತ್ರಕ್ಕೆ ಹೆಚ್ಚು ನೆಗೆಟಿವ್‌ ಕಾಮೆಂಟ್‌ಗಳು ಲಭ್ಯವಾಗಿವೆ
  • ಈ ಮೂವರಲ್ಲಿ ಸೀತೆಯ ಪಾತ್ರ ಯಾರಿಗೆ ಚೆನ್ನಾಗಿ ಹೊಂದುತ್ತೆ, ನೀವೇ ಹೇಳಿ
ಅಭಿಮಾನಿ ಕಲ್ಪನೆಯ ಸೀತೆಯರಿವರು..ಹಾಗಾದ್ರೆ ಈ ಪಾತ್ರ ಯಾರಿಗೆ ಚೆನ್ನಾಗಿ ಹೊಂದುತ್ತೆ ನೀವೇ ಹೇಳಿ..!   title=

Bollywood Actress in Sita Getup : ಆದಿಪುರುಷ್‌ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ಹೆಚ್ಚು ನೆಗೆಟಿವ್‌ ಕಾಮೆಂಟ್‌ಗಳು ಲಭ್ಯವಾಗಿದ್ದು, ಚಿತ್ರದಲ್ಲಿ ರಾಮಾಯಣ ಪಾತ್ರಗಳಿಗಿಂತ ಬೇರೆ ರೀತಿಯಾಗಿ ತೋರಿಸಲಾಗಿದೆ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಈ ಸಿನಿಮಾ ಬ್ಯಾನ್‌ ಮಾಡುವಂತೆ ಸಾಕಷ್ಟು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. 

ಆದಿಪುರುಷ್‌ ಸಿನಿಮಾದಲ್ಲಿ ಬಾಲಿವುಡ್‌ ನಟಿ ಕೃತಿ ಸಾನೋನ್‌ ಸೀತಾ ಮಾತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ನಟನೆ ಚೆನ್ನಾಗಿದ್ದರೂ ಚಿತ್ರದಲ್ಲಿ ಅವರನ್ನು ತೋರಿಸಿರುವ ರೀತಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕೃತಿ ಸಾನೋನ್‌ ಅವರನ್ನು ಸೀತೆಯ ಪಾತ್ರದಲ್ಲಿ ಅಷ್ಟು ಹಾಟ್‌ ಆಗಿ ತೋರಿಸುವ ಅವಶ್ಯಕತೆ ಏನಿತ್ತು..? ಸೀತೆಯನ್ನು ಕಮರ್ಷಿಯಲ್‌ ದೃಷ್ಟಿಯಿಂದ ಹಾಟ್‌ ಆಗಿ ಚಿತ್ರೀಕರಿಸಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಇದನ್ನೂ ಓದಿ-Ram Charan : ರಾಮ್ ಚರಣ್ ಮಗುವಿನ ಮೊದಲ ಫೋಟೋ ಲೀಕ್?

ಈ ನಡುವೆ ಸಮಂತಾ, ಅನುಷ್ಕಾ, ರಶ್ಮಿಕಾ ಮಂದಣ್ಣ, ಸೀತೆಯ ವೇಷದಲ್ಲಿ ಇರುವ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಏನಿದು ಆದಿಪುರುಷ್‌ ಸಿನಿಮಾದಲ್ಲಿ ಈ ನಟಿಯರೆಲ್ಲಾ ಇದ್ದಾರಾ..? ಕನ್ಫ್ಯೂಸ್‌ ಆಗ್ಬೇಡಿ.. ಇದು ಅಭಿಮಾನಿಯ ಕಲ್ಪನೆ ಮಾತ್ರ. ಹೌದು ಟ್ವೀಟರ್‌ ಬಳಕೆದಾರರೊಬ್ಬರು ಈ ಫೋಟೋಗಳನ್ನು ಮಾರ್ಫಿಂಗ್‌ ಮಾಡಿ ತಮ್ಮ ಪೇಜ್‌ನಲ್ಲಿ ಹಂಚಿಕೊಂಡು, ಈ ಮೂವರಲ್ಲಿ ಸೀತೆಯ ಪಾತ್ರ ಯಾರಿಗೆ ಚೆನ್ನಾಗಿ ಹೊಂದುತ್ತೆ..? ಎಂದು ಪ್ರಶ್ನಿಸಿದ್ದಾರೆ. 

ಈ ಪೋಸ್ಟ್‌ಗೆ ಕಾಮೆಂಟ್‌ಗಳ ಸುರಿಮಳೆಯೆ ಸುರಿದಿದ್ದು, ತಮ್ಮ ನೆಚ್ಚಿನ ನಟಿಯರ ಹೆಸರನ್ನು ಕಾಮೆಂಟ್‌ ಮಾಡುತ್ತಿದ್ದಾರೆ. ಈ ಮೂವರಿಗಿಂತ ಸಾಯಿ ಪಲ್ಲವಿಗೆ ಜಾನಕಿಯ ಪಾತ್ರ ಸರಿಯಾಗಿಉ ಹೊಂದುತ್ತದೆ ಎಂದು ಒಬ್ಬರು, ಮತ್ತೊಬ್ಬರು ನಿತ್ಯಾ ಮೆನನ್‌, ಇನ್ನೂ ಕೆಲವು ಕೃತಿ ಸನೋನ್‌ ಮಾತ್ರ ಈ ಪಾತ್ರಕ್ಕೆ ಸರಿಯಾಗಿ ಒಪ್ಪುತ್ತಾರೆ ಎಂದಿದ್ದಾರೆ. 

ಇದನ್ನೂ ಓದಿ-Bharjari Bachelors: ʼಭರ್ಜರಿ ಬ್ಯಾಚುಲರ್ಸ್ʼ ಗಳಿಗೆ ʼಪ್ರೀತಿ ಪಾಠ ಹೇಳಲುʼ ರೆಡಿಯಾದ ಕರುನಾಡ ಕ್ರೇಜಿ ಸ್ಟಾರ್..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News