ಮೊದಲ ಸ್ಪರ್ಧಿ ನಟನೂ ಅಲ್ಲ, ನಟಿಯೂ ಅಲ್ಲ! ಬಿಗ್ ಬಾಸ್ ಮನೆಗೆ ಆಟವಾಡಲು ಬರ್ತಿದೆ ಮುದ್ದು 'ಚಾರ್ಲಿ’

Bigg Boss Contestant Charlie: ಬಿಗ್ ಬಾಸ್ ಶುರುವಾಗುತ್ತೆ ಅನ್ನುವಷ್ಟರಲ್ಲಿ ಆ ನಟರು ಎಂಟ್ರಿ ಕೊಡಬಹುದೇ? ಅಥವಾ ಈ ನಟಿಗೆ ಅವಕಾಶ ಸಿಗಬಹುದೇ? ಎಂಬೆಲ್ಲಾ ಲೆಕ್ಕಾಚಾರವನ್ನು ಪ್ರೇಕ್ಷಕರು ಮಾಡಿದ್ದರು. ಆದರೆ ಈ ಎಲ್ಲಾ ಊಹೆಯನ್ನು ಮೀರಿದ ಸ್ಪರ್ಧಿಯೊಬ್ಬರು ಈ ಬಾರಿ ಬಿಗ್ ಬಾಸ್’ಗೆ ಎಂಟ್ರಿ ಕೊಡುತ್ತಿದ್ದಾರೆ.

Written by - Bhavishya Shetty | Last Updated : Sep 24, 2023, 08:44 AM IST
    • ಅಕ್ಟೋಬರ್ 8ರಿಂದ ಬಿಗ್ ​ಬಾಸ್ ಸೀಸನ್ 10 ಪ್ರಾರಂಭ
    • ಈ ಬಾರಿ ಬಿಗ್ ಬಾಸ್ ಸಾಮಾನ್ಯವಾಗಿರುವುದಿಲ್ಲ, ವಿಶೇಷತೆಗಳ ಆಗರವನ್ನೇ ಹೊತ್ತು ತರಲಿದೆ
    • ಎಲ್ಲಾ ಊಹೆಯನ್ನು ಮೀರಿದ ಸ್ಪರ್ಧಿಯೊಬ್ಬರು ಈ ಬಾರಿ ಬಿಗ್ ಬಾಸ್’ಗೆ ಎಂಟ್ರಿ ಕೊಡುತ್ತಿದ್ದಾರೆ
ಮೊದಲ ಸ್ಪರ್ಧಿ ನಟನೂ ಅಲ್ಲ, ನಟಿಯೂ ಅಲ್ಲ! ಬಿಗ್ ಬಾಸ್ ಮನೆಗೆ ಆಟವಾಡಲು ಬರ್ತಿದೆ ಮುದ್ದು 'ಚಾರ್ಲಿ’ title=
bigg boss and Charlie

Bigg Boss Contestant Charlie: ಅಕ್ಟೋಬರ್ 8ರಿಂದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ​ಬಾಸ್ ಸೀಸನ್ 10 ಪ್ರಾರಂಭವಾಗುತ್ತಿದೆ. ಬಿಗ್ ಬಾಸ್ ಯಾವಾಗ ಶುರುವಾಗುತ್ತೋ ಏನೋ.. ಎಂದು ಕಾದು ಕುಳಿತಿದ್ದ ಪ್ರೇಕ್ಷಕರಿಗೆ ಕಡೆಗೂ ಸಿಹಿಸುದ್ದಿ ಸಿಕ್ಕಿದೆ. ಆದ್ರೆ ಈ ಬಾರಿ ಬಿಗ್ ಬಾಸ್ ಸಾಮಾನ್ಯವಾಗಿರುವುದಿಲ್ಲ.. ವಿಶೇಷತೆಗಳ ಆಗರವನ್ನೇ ಹೊತ್ತು ತರಲಿದೆ…

ಇದನ್ನೂ ಓದಿ: ಮುಂದಿನ 18 ವರ್ಷ ಈ ರಾಶಿಗೆ ರಾಜರಂತಹ ಜೀವನ: ಸಂಪತ್ತಿನ ಮಳೆ ಫಿಕ್ಸ್, ಅದೃಷ್ಟ ಬೆಳಗಿ ಬೆನ್ನಿಗೆ ನಿಲ್ಲುವನು ರಾಹು

ಬಿಗ್ ಬಾಸ್ ಶುರುವಾಗುತ್ತೆ ಅನ್ನುವಷ್ಟರಲ್ಲಿ ಆ ನಟರು ಎಂಟ್ರಿ ಕೊಡಬಹುದೇ? ಅಥವಾ ಈ ನಟಿಗೆ ಅವಕಾಶ ಸಿಗಬಹುದೇ? ಎಂಬೆಲ್ಲಾ ಲೆಕ್ಕಾಚಾರವನ್ನು ಪ್ರೇಕ್ಷಕರು ಮಾಡಿದ್ದರು. ಆದರೆ ಈ ಎಲ್ಲಾ ಊಹೆಯನ್ನು ಮೀರಿದ ಸ್ಪರ್ಧಿಯೊಬ್ಬರು ಈ ಬಾರಿ ಬಿಗ್ ಬಾಸ್’ಗೆ ಎಂಟ್ರಿ ಕೊಡುತ್ತಿದ್ದಾರೆ.

ಈ ಬಾರಿಯ ಬಿಗ್ ​ಬಾಸ್​ ಸೀಸನ್ 10 ಹಲವು ವಿಶೇಷತೆಗಳಿಂದ ಕೂಡಿರಲಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ತನ್ನ ಕಲ್ಮಶ ರಹಿತ ಅಭಿನಯ ಮತ್ತು ಮನಸ್ಸಿನಿಂದ ಎಲ್ಲರ ಮನಗೆದ್ದ 777 ಚಾರ್ಲಿ ಸಿನಿಮಾದ ‘ಚಾರ್ಲಿ’ ಈ ಬಾರಿ ಬಿಗ್’ಬಾಸ್ ಮನೆಗೆ ಎಂಟ್ರಿ ಕೊಡ್ತಿದೆ.

ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗದ ಆ 3 ವಿಶ್ವದಾಖಲೆಗಳು ಯಾವುವು?

ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯೇ ಸ್ಪಷ್ಟ ಮಾಹತಿ ನೀಡಿದ್ದು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. “ಬೆಸ್ಟ್ ರೇಟೆಡ್ ಚಲನಚಿತ್ರ 777 ಚಾರ್ಲಿ ಸಿನಿಮಾದ ‘ಚಾರ್ಲಿ’ ಈ ಬಾರಿಯ ಬಿಗ್ ಬಾಸ್ ಸೀಸನ್ 10ರ ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿದ್ದಾರೆ. ಅಭಿನಂದನೆಗಳು ಚಾರ್ಲಿ” ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News