SuperTech ಚೆರ್ಮನ್ ಆರ್.ಕೆ ಆರೋರಾ ವಿರುದ್ಧ ಕಠಿಣ ಕ್ರಮ, ಇಷ್ಟು ದಿನಗಳವರೆಗೆ ಇಡಿ ವಶಕ್ಕೆ ಒಪ್ಪಿಸಿದ ನ್ಯಾಯಾಲಯ

Money Laundering Case: ಪ್ರಕರಣದಲ್ಲಿ ನಡೆದ ದೊಡ್ಡ ಪಿತೂರಿಯನ್ನು ಬಯಲಿಗೆಳೆಯಲು ಆರೋಪಿಯ ಕಸ್ಟಡಿ ವಿಚಾರಣೆಯಅವಶ್ಯಕತೆ ಇದೆ ಎಂದು ಕೇಂದ್ರೀಯ ಸಂಸ್ಥೆ ತನ್ನ ಅರ್ಜಿಯಲ್ಲಿ ವಾದಿಸಿತ್ತು. ನವದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ನಡೆದ ಮೂರನೇ ಸುತ್ತಿನ ವಿಚಾರಣೆಯ ಬಳಿಕ ಮಂಗಳವಾರ ರಾತ್ರಿ ಆರ್.ಕೆ ಆರೋರಾ ಅವರನ್ನು ಅಕ್ರಮ ಹಣವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿ ಬಂಧಿಸಲಾಗಿದೆ.   

Written by - Nitin Tabib | Last Updated : Jun 28, 2023, 07:49 PM IST
  • ಸೂಪರ್‌ಟೆಕ್ ಗ್ರೂಪ್, ಅದರ ನಿರ್ದೇಶಕರು ಮತ್ತು ಪ್ರವರ್ತಕರು ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ಪೊಲೀಸ್ ಇಲಾಖೆಗಳ ಮೂಲಕ
  • ದಾಖಲಿಸಲಾದ ಅನೇಕ ಎಫ್‌ಐಆರ್‌ಗಳಲ್ಲಿ ಹಣ ವರ್ಗಾವಣೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ.
  • ಏಪ್ರಿಲ್‌ನಲ್ಲಿ ಇಡಿ ರಿಯಲ್ ಎಸ್ಟೇಟ್ ಗ್ರೂಪ್ ಮತ್ತು ಅದರ ನಿರ್ದೇಶಕರ 40 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು.
  • ಹೇಳಿಕೆಯೊಂದರ ಪ್ರಕಾರ, ಇಡಿ ಆರ್‌ಕೆ ಅರೋರಾ ಮತ್ತು ಅವರ ಕಂಪನಿಯು ಜನರನ್ನು ವಂಚಿಸುತ್ತಿದೆ ಮತ್ತು "ಕ್ರಿಮಿನಲ್ ಪಿತೂರಿ" ಯಲ್ಲಿ ತೊಡಗಿದೆ ಎಂದು ಆರೋಪಿಸಿದೆ.
SuperTech ಚೆರ್ಮನ್ ಆರ್.ಕೆ ಆರೋರಾ ವಿರುದ್ಧ ಕಠಿಣ ಕ್ರಮ, ಇಷ್ಟು ದಿನಗಳವರೆಗೆ ಇಡಿ ವಶಕ್ಕೆ ಒಪ್ಪಿಸಿದ ನ್ಯಾಯಾಲಯ title=

Money Laundering Case: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಸೂಪರ್‌ಟೆಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್‌ಕೆ ಅರೋರಾ ಅವರನ್ನು ಜುಲೈ 10 ರವರೆಗೆ ಜಾರಿ ನಿರ್ದೇಶನಾಲಯ (ಇಡಿ) ಕಸ್ಟಡಿಗೆ ಕಳುಹಿಸಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಹಿಂದಿನ ರಾತ್ರಿ ಆರ್‌ಕೆ ಅರೋರಾ ಅವರನ್ನು ಬಂಧಿಸಲಾಗಿತ್ತು. ಮನಿ ಲಾಂಡರಿಂಗ್ ಪ್ರಕರಣದಲ್ಲಿ ವಿಚಾರಣೆಗಾಗಿ ಕಾನೂನು ಜಾರಿ ಸಂಸ್ಥೆ RK ಅರೋರಾ ಅವರನ್ನು 14 ದಿನಗಳ ಕಸ್ಟಡಿಯನ್ನು ಕೋರಿತ್ತು ಮತ್ತು ಪಟಿಯಾಲ ಹೌಸ್ ಕೋರ್ಟ್ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.

ವಿಚಾರಣೆ ನಡೆಸಿದ ಇಡಿ
ಪ್ರಕರಣದಲ್ಲಿ ನಡೆಸಲಾಗಿರುವ ದೊಡ್ಡ ಪಿತೂರಿಯನ್ನು ಬಯಲಿಗೆಳೆಯಲು ಆರೋಪಿಗಳ ಕಸ್ಟಡಿ ವಿಚಾರಣೆಯ ಅವಶ್ಯಕತೆ ಇದೆ ಎಂದು ಕೇಂದ್ರೀಯ ಸಂಸ್ಥೆ ತನ್ನ ಅರ್ಜಿಯಲ್ಲಿ ತಿಳಿಸಿತ್ತು. ನವದೆಹಲಿಯಲ್ಲಿರುವ ಕೇಂದ್ರೀಯ ಏಜೆನ್ಸಿಯ ಕಚೇರಿಯಲ್ಲಿ ಮೂರನೇ ಸುತ್ತಿನ ನಡೆದ ವಿಚಾರಣೆಯ ನಂತರ ಮಂಗಳವಾರ ರಾತ್ರಿ ಆರ್‌ಕೆ ಅರೋರಾ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ-Stock Market Update: ಹೊಸ ಇತಿಹಾಸ ಬರೆದ ಷೇರು ಮಾರುಕಟ್ಟೆ, 19000 ಅಂಕಗಳ ಗಡಿ ದಾಟಿದ ನಿಫ್ಟಿ

ಮನಿ ಲಾಂಡರಿಂಗ್
ಸೂಪರ್‌ಟೆಕ್ ಗ್ರೂಪ್, ಅದರ ನಿರ್ದೇಶಕರು ಮತ್ತು ಪ್ರವರ್ತಕರು ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ಪೊಲೀಸ್ ಇಲಾಖೆಗಳ ಮೂಲಕ ದಾಖಲಿಸಲಾದ ಅನೇಕ ಎಫ್‌ಐಆರ್‌ಗಳಲ್ಲಿ ಹಣ ವರ್ಗಾವಣೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ಏಪ್ರಿಲ್‌ನಲ್ಲಿ ಇಡಿ ರಿಯಲ್ ಎಸ್ಟೇಟ್ ಗ್ರೂಪ್ ಮತ್ತು ಅದರ ನಿರ್ದೇಶಕರ 40 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು. ಹೇಳಿಕೆಯೊಂದರ ಪ್ರಕಾರ, ಇಡಿ ಆರ್‌ಕೆ ಅರೋರಾ ಮತ್ತು ಅವರ ಕಂಪನಿಯು ಜನರನ್ನು ವಂಚಿಸುತ್ತಿದೆ ಮತ್ತು "ಕ್ರಿಮಿನಲ್ ಪಿತೂರಿ" ಯಲ್ಲಿ ತೊಡಗಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ-Indian Economy: ವೇಗದಲ್ಲಿ ಚೀನಾಗಿಂತ ಮುಂದೆ ಇರಲಿದೆ ಭಾರತೀಯ ಅರ್ಥವ್ಯವಸ್ಥೆ, ಅಂದಾಜು ವ್ಯಕ್ತಪಡಿಸಿದ ಎಸ್ ಅಂಡ್ ಪಿ

ವಂಚನೆ ಎಸಗಿದ್ದಾರೆ ಎಂಬ ಆರೋಪ ಮಾಡಿದ್ದಾರೆ
ಕಂಪನಿ ಮತ್ತು ಅದರ ನಿರ್ದೇಶಕರು ಬುಕ್ ಮಾಡಲಾಗಿರುವ ಫ್ಲಾಟ್‌ ಗಳಿಂದ ಹಣವನ್ನು ಸಂಗ್ರಹಿಸುವ ಮೂಲಕ ಖರೀದಿದಾರರನ್ನು ವಂಚಿಸಿದ್ದಾರೆ ಮತ್ತು ಹಕ್ಕುದಾರರಿಗೆ ಕಬ್ಜಾ ನೀಡಲು ವಿಫಲವಾಗಿದೆ ಎಂದು ಇಡಿ ಹೇಳಿದೆ. ಈ ಮೂಲಕ ಖರೀದಿದಾರರಿಗೆ ವಂಚನೆ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಇಡಿ ಪರ ವಕೀಲ ಫೈಜಾನ್ ಖಾನ್ ಅವರೊಂದಿಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್‌ಕೆ ಮಟ್ಟಾ ವಾದವನ್ನು ಮಂಡಿಸಿ ಕಂಪನಿ ಮತ್ತು ಅದರ ನಿರ್ದೇಶಕರು ರಿಯಲ್ ಎಸ್ಟೇಟ್‌ನಲ್ಲಿ ಕಾಯ್ದಿರಿಸಿದ ಫ್ಲ್ಯಾಟ್‌ಗಳ ವಿರುದ್ಧ ನಿರೀಕ್ಷಿತ ಖರೀದಿದಾರರಿಂದ ಮುಂಗಡವಾಗಿ ಹಣವನ್ನು ವಸೂಲಿ ಮಾಡುವ ಮೂಲಕ ಜನರನ್ನು ವಂಚಿಸುವಲ್ಲಿ ತೊಡಗಿದ್ದಾರೆ. ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ಖಾನ್ ತಿಳಿಸಿದ್ದಾರೆ ತಿಳಿಸಿದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News