IRCTC Food Service: ರೈಲಿನಲ್ಲಿ ಪ್ರಯಾಣಿಸುವಾಗ ವಾಟ್ಸಾಪ್‌ನಲ್ಲಿ ಈ ರೀತಿ ಫುಡ್ ಆರ್ಡರ್ ಮಾಡಿ

IRCTC Food Service: ಆನ್‌ಲೈನ್ ಆಹಾರ ವಿತರಣಾ ವೇದಿಕೆ ಝೂಪ್‌ ಹೊಸ ವಾಟ್ಸಾಪ್‌ ಸೇವೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಪ್ರಯಾಣಿಕರು ಚಾಟ್ ಮಾಡುವ ಮೂಲಕ ಮೆನು, ಬೆಲೆ ಇತ್ಯಾದಿ ವಿವರಗಳನ್ನು ಪಡೆಯಬಹುದು. ಇದರೊಂದಿಗೆ ಆಹಾರವನ್ನು ಸಹ ಬುಕ್ ಮಾಡಬಹುದು.

Written by - Yashaswini V | Last Updated : Jul 18, 2022, 09:30 AM IST
  • ರೈಲಿನಲ್ಲಿ ಪ್ರಯಾಣದಲ್ಲಿರುವಾಗ ಆಹಾರವನ್ನು ಆರ್ಡರ್ ಮಾಡಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಝೂಪ್ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ.
  • ಇದರಲ್ಲಿ ಪ್ರಯಾಣಿಕರು ವಾಟ್ಸಾಪ್‌ನಲ್ಲಿ ಚಾಟ್ ಮಾಡುವಾಗ ತಮ್ಮ ಆಹಾರವನ್ನು ಆರ್ಡರ್ ಮಾಡಬಹುದು.
  • ಪ್ರಯಾಣಿಕರು ಚಾಟ್ ಮಾಡುವ ಮೂಲಕ ಮೆನು, ಬೆಲೆ ಇತ್ಯಾದಿ ವಿವರಗಳನ್ನು ಪಡೆಯಬಹುದು.
IRCTC Food Service: ರೈಲಿನಲ್ಲಿ ಪ್ರಯಾಣಿಸುವಾಗ  ವಾಟ್ಸಾಪ್‌ನಲ್ಲಿ ಈ ರೀತಿ ಫುಡ್ ಆರ್ಡರ್ ಮಾಡಿ  title=
IRCTC Food Service

IRCTC ಆಹಾರ ಸೇವೆ: ಜನರು ಸಾಮಾನ್ಯವಾಗಿ ದೀರ್ಘ ಪ್ರಯಾಣಕ್ಕಾಗಿ ಭಾರತೀಯ ರೈಲ್ವೆಯನ್ನು ಇಷ್ಟಪಡುತ್ತಾರೆ. ಆದರೆ, ಈ ವೇಳೆ ಸರಿಯಾದ ಸಮಯಕ್ಕೆ ಊಟ ಪಡೆಯುವ ಬಗ್ಗೆಯೂ ಚಿಂತಿಸುತ್ತಾರೆ. ಹೆಚ್ಚಿನ ರೈಲುಗಳಲ್ಲಿ ಆಹಾರ ಸೇವೆ ಲಭ್ಯವಿದೆ ಆದರೂ, ಕೆಲವು ಪ್ರಯಾಣಿಕರು ಹಲವು ಆಹಾರ ಆಯ್ಕೆಗಳಿಗಾಗಿ ಹುಡುಕುತ್ತಿರುತ್ತಾರೆ. ಅದಕ್ಕಾಗಿ ನೀವು ಹೆಚ್ಚು ಚಿಂತಿಸುವ ಅಗತ್ಯವಿಲ್ಲ, ರೈಲಿನೊಳಗೆ ನಿಮಗೆ ಈ ಸೇವೆ ಲಭ್ಯವಿದೆ.

ನೀವು ರೈಲ್ವೆ ಒದಗಿಸುವ ಆಹಾರದ ಬದಲಿಗೆ ಬೇರೆ ಆಹಾರ ಸವಿಯಲು ಬಯಸಿದರೆ ಐಆರ್ಸಿಟಿಸಿ ನಿಮ್ಮ ಆಯ್ಕೆಯ ಆಹಾರವನ್ನು ರೈಲಿನೊಳಗೆ ಆನ್‌ಲೈನ್‌ನಲ್ಲಿ ತಲುಪಿಸಲು ಝೂಪ್ ಅಪ್ಲಿಕೇಶನ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ರೈಲಿನಲ್ಲಿ ಪ್ರಯಾಣಿಸುವಾಗ ವಾಟ್ಸಾಪ್‌ನಲ್ಲಿ ಝೂಪ್‌ನೊಂದಿಗೆ ಚಾಟ್ ಮಾಡಿ ನಿಮಗೆ ಬೇಕಾದ ಆಹಾರವನ್ನು ಆರ್ಡರ್ ಮಾಡಬಹುದು. 

ವಾಸ್ತವವಾಗಿ, ರೈಲಿನಲ್ಲಿ ಪ್ರಯಾಣದಲ್ಲಿರುವಾಗ ಆಹಾರವನ್ನು ಆರ್ಡರ್ ಮಾಡಲು ಪ್ರಯಾಣಿಕರಿಗೆ ಅನುಕೂಲವಾಗುವಂತೆ, ಝೂಪ್ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಇದರಲ್ಲಿ ಪ್ರಯಾಣಿಕರು ವಾಟ್ಸಾಪ್‌ನಲ್ಲಿ ಚಾಟ್ ಮಾಡುವಾಗ ತಮ್ಮ ಆಹಾರವನ್ನು ಆರ್ಡರ್ ಮಾಡಬಹುದು.

ಇದನ್ನೂ ಓದಿ- Aviation Turbine Fuel: ಇಂಧನ ಬೆಲೆಯಲ್ಲಿ ಭಾರೀ ಇಳಿಕೆ: ಶೇ 2.2 ಅಗ್ಗವಾದ ತೈಲ

ಏನಿದು ಹೊಸ ಸೇವೆ?
ಐಆರ್ಸಿಟಿಸಿ ಸಹಭಾಗಿತ್ವದಲ್ಲಿ ಝೂಪ್ ಅಪ್ಲಿಕೇಶನ್  ದೇಶದ ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ಆನ್‌ಲೈನ್ ಆಹಾರ ಸೇವೆಯನ್ನು ಒದಗಿಸುತ್ತದೆ. ಇದೀಗ ತನ್ನ ಪ್ರಯಾಣಿಕರಿಗಾಗಿ ವಾಟ್ಸಾಪ್‌ನಲ್ಲಿ ಚಾಟ್ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರಿಂದ ಅವರು ಮೆನು, ಬೆಲೆ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು ಮತ್ತು ಆನ್‌ಲೈನ್‌ನಲ್ಲಿ ತಮ್ಮ ಆರ್ಡರ್‌ಗಳನ್ನು ಸಹ ಟ್ರ್ಯಾಕ್ ಮಾಡಬಹುದು. ಇದು ಪ್ರಯಾಣದ ಸಮಯದಲ್ಲಿ ನಿಮ್ಮ ಆಯ್ಕೆಯ ಆಹಾರವನ್ನು ತಿನ್ನುವ ಉದ್ವೇಗವನ್ನು ನಿವಾರಿಸುತ್ತದೆ. 

ಯಾವುದೇ ಹೆಚ್ಚುವರಿ ಸೇವಾ ಶುಲ್ಕವಿಲ್ಲ:
ಝೂಪ್ ಕಂಪನಿಯ ಈ ಹೊಸ ಸೇವೆಯು ಸಂಪೂರ್ಣವಾಗಿ ರೈಲು ಪ್ರಯಾಣಿಕರಿಗೆ ಅಗತ್ಯ ಆಹಾರವನ್ನು ಒದಗಿಸುವುದಕ್ಕಾಗಿ ಎಂದು ಹೇಳಿದೆ, ಇದಕ್ಕಾಗಿ ಗ್ರಾಹಕರಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ತೆಗೆದುಕೊಳ್ಳಲಾಗುವುದಿಲ್ಲ. ಐಆರ್ಸಿಟಿಸಿಯೊಂದಿಗೆ ನೋಂದಾಯಿಸಲಾದ ಈ ಆಹಾರ ಆನ್ ಟ್ರ್ಯಾಕ್ ಸೇವೆಯು ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ಲಭ್ಯವಿದೆ. 

ಇದನ್ನೂ ಓದಿ- Traffic Rules Updates: ಚಪ್ಪಲಿ ಧರಿಸಿ ಬೈಕ್ ಅಥವಾ ಸ್ಕೂಟಿ ಚಲಾಯಿಸುವವರೇ ಹುಷಾರ್...! ಕಾರಣ ಇಲ್ಲಿದೆ

ಏನಿದು ಝೂಪ್?
ಐಆರ್ಸಿಟಿಸಿ 2015 ರಲ್ಲಿ ಇ-ಕೇಟರಿಂಗ್ ಆಹಾರ ಸೇವೆಯನ್ನು ಪ್ರಾರಂಭಿಸಿತು. ರೈಲಿನಲ್ಲಿ ಆಹಾರ ವಿತರಣೆಯ ಸೇವೆಯನ್ನು ಒದಗಿಸುವ ಐಆರ್ಸಿಟಿಸಿಗಾಗಿ ಝೂಪ್  ಅತ್ಯಂತ ಹಳೆಯ ಪಾಲುದಾರರಲ್ಲಿ ಒಂದಾಗಿದೆ. ಝೂಪ್ ಇದುವರೆಗೆ 8 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ತನ್ನ ಸೇವೆಯನ್ನು ಒದಗಿಸಿದೆ. 

ಕೊರೊನಾ ಕಾರಣ ಸ್ಥಗಿತಗೊಂಡಿದ್ದ ಸೇವೆ:
ಮಾರ್ಚ್ 2020 ರಲ್ಲಿ, ದೇಶದಲ್ಲಿ ಕರೋನವೈರಸ್ ಕಾರಣ, ಇಡೀ ದೇಶದಲ್ಲಿ ಲಾಕ್‌ಡೌನ್ 
ವಿಧಿಸಲಾಗಿತ್ತು. ಅದೇ ಸಮಯದಲ್ಲಿ, ಕೋವಿಡ್ 19 ಹರಡುವುದನ್ನು ತಡೆಯಲು, ರೈಲ್ವೆಯು ರೈಲುಗಳಲ್ಲಿ ಆಹಾರ ವಿತರಣೆಯನ್ನು ನಿಲ್ಲಿಸಿತ್ತು. ಬಳಿಕ ಫೆಬ್ರವರಿ 1, 2021 ರಿಂದ ರೈಲುಗಳಲ್ಲಿ ಆಹಾರ ವಿತರಣಾ ಸೇವೆಯನ್ನು ಮತ್ತೆ ಪ್ರಾರಂಭಿಸಲಾಯಿತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News