ರೈಲ್ವೆ ಪ್ರಯಾಣಿಕರ ಗಮನಕ್ಕೆ : IRCTC ಆನ್‌ಲೈನ್ ಟಿಕೆಟ್ ಬುಕಿಂಗ್‌ನಲ್ಲಿ ಬದಲಾವಣೆ

ನಿಯಮಗಳ ಬದಲಾವಣೆಯ ನಂತರ, ಈಗ ನೀವು ಟಿಕೆಟ್ ಬುಕಿಂಗ್‌ನಲ್ಲಿ ಕಡಿಮೆ ಸಮಯವನ್ನು ತೆಗೆದುಕೊಳ್ಳಲಿದೆ. ರೈಲ್ವೆ ಇಲಾಖೆಯ ಈ ನಿರ್ಧಾರದಿಂದ, ನೀವು ಟಿಕೆಟ್ ಬುಕಿಂಗ್ ಸಮಯದಲ್ಲಿ ಹೋಗುವ ಸ್ಥಳದ ವಿಳಾಸ ನೀಡಬೇಕಾಗಿಲ್ಲ.

Written by - Channabasava A Kashinakunti | Last Updated : Jun 3, 2022, 06:12 PM IST
  • ರೈಲ್ವೆ ಸಚಿವಾಲಯ ಜಾರಿಗೊಳಿಸಿದೆ ಈ ಆದೇಶ
  • ಈ ನಿಯಮಗಳನ್ನು ಹಿಂಪಡೆದ ರೈಲ್ವೆ ಇಲಾಖೆ
  • ಬದಲಾಗಿದೆ ರೈಲ್ವೆ ಇಲಾಖೆ ಸಾಫ್ಟ್ವೇರ್
ರೈಲ್ವೆ ಪ್ರಯಾಣಿಕರ ಗಮನಕ್ಕೆ : IRCTC ಆನ್‌ಲೈನ್ ಟಿಕೆಟ್ ಬುಕಿಂಗ್‌ನಲ್ಲಿ ಬದಲಾವಣೆ title=

IRCTC Ticket Booking : ನೀವು ರೈಲ್ವೆ ಪ್ರಯಾಣಿಕರಾಗಿದ್ದರೆ ತಪ್ಪದೆ ಈ ಸುದ್ದಿ ಓದಿ. ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವವರಾಗಿದ್ದರೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ನಿಯಮಗಳನ್ನು ಭಾರತೀಯ ರೈಲ್ವೇ ಬದಲಾಯಿಸಿದೆ. ನಿಯಮಗಳ ಬದಲಾವಣೆಯ ನಂತರ, ಈಗ ನೀವು ಟಿಕೆಟ್ ಬುಕಿಂಗ್‌ನಲ್ಲಿ ಕಡಿಮೆ ಸಮಯವನ್ನು ತೆಗೆದುಕೊಳ್ಳಲಿದೆ. ರೈಲ್ವೆ ಇಲಾಖೆಯ ಈ ನಿರ್ಧಾರದಿಂದ, ನೀವು ಟಿಕೆಟ್ ಬುಕಿಂಗ್ ಸಮಯದಲ್ಲಿ ಹೋಗುವ ಸ್ಥಳದ ವಿಳಾಸ ನೀಡಬೇಕಾಗಿಲ್ಲ.

ರೈಲ್ವೆ ಸಚಿವಾಲಯ ಜಾರಿಗೊಳಿಸಿದೆ ಈ ಆದೇಶ

ಮಾರ್ಚ್ 2020 ರಲ್ಲಿ ಕರೋನಾ ಸಮಯದಲ್ಲಿ IRCTC ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಟಿಕೆಟ್‌ ಬುಕ್ ಮಾಡುವಾಗ ಹೋಗುವ ಸ್ಥಳದ ವಿಳಾಸವನ್ನು ನಮೂದಿಸುವುದನ್ನು ಭಾರತೀಯ ರೈಲ್ವೆ ಇಲಾಖೆ ಕಡ್ಡಾಯಗೊಳಿಸಿದೆ. ಆದರೆ ಕೋವಿಡ್-19 ಪ್ರಕರಣಗಳು ಕಡಿಮೆಯಾದ ಕಾರಣ, ಈಗ ಪ್ರಯಾಣಿಕರು IRCTC ಕಡೆಯಿಂದ ಹೋಗುವ ಸ್ಥಳದ ವಿಳಾಸದ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಆದೇಶವನ್ನು ರೈಲ್ವೆ ಸಚಿವಾಲಯವೂ ಜಾರಿಗೊಳಿಸಿದೆ.

ಇದನ್ನೂ ಓದಿ : Honda ಕಾರು ಖರೀದಿಸುವವರಿಗೆ ಗುಡ್ ನ್ಯೂಸ್ , ಎಲ್ಲಾ ಮಾದರಿಗಳ ಮೇಲೆ ಸಿಗುತ್ತಿದೆ ಭಾರೀ ಡಿಸ್ಕೌಂಟ್

ಈ ನಿಯಮಗಳನ್ನು ಹಿಂಪಡೆದ ರೈಲ್ವೆ ಇಲಾಖೆ

ಕೋವಿಡ್ ಪ್ರಕರಣಗಳು ಹೆಚ್ಚಾದಂತೆ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಪತ್ತೆಹಚ್ಚಲು ಹೋಗುವ ಸ್ಥಳದ ವಿಳಾಸವು ಸಹಾಯಕವಾಗುತ್ತದೆ ಎಂಬ ಕಾರಣಕ್ಕೆ ಈ ನಿಯಮ ಜಾರಿಗೆ ತರಲಾಗಿತ್ತು. ಸಧ್ಯ ಪರಿಸ್ಥಿತಿ ಸಹಜವಾಗಿದೆ ಹಾಗಾಗಿ ರೈಲ್ವೆ ಇಲಾಖೆ ನಿಯಮಗಳನ್ನು ಒಂದೊಂದಾಗಿ ಹಿಂಪಡೆಯುತ್ತಿದೆ.

ಬದಲಾಗಿದೆ ರೈಲ್ವೆ ಇಲಾಖೆ ಸಾಫ್ಟ್ವೇರ್

ರೈಲ್ವೆ ಸಚಿವಾಲಯ ಮಾಡಿದ ಬದಲಾವಣೆಗಳು ಹೀಗಿವೆ, ಈಗ ಆನ್‌ಲೈನ್ ಟಿಕೆಟ್ ಬುಕಿಂಗ್ ಮಾಡಲು ಸಮಯ ಕಡಿಮೆ ತೆಗೆದುಕೊಳ್ಳುತ್ತದೆ. ಮೊದಲು ಹೋಗುವ ಸ್ಥಳದ ವಿಳಾಸವನ್ನು ತುಂಬಲು ಒಂದರಿಂದ ಎರಡು ನಿಮಿಷಗಳನ್ನು ತೆಗೆದುಕೊಳ್ಳುತ್ತಿತ್ತು. ರೈಲ್ವೆ ಸಚಿವಾಲಯದ ಸಧ್ಯ ಈ ನಿಯಮವನ್ನು ಹಿಂಪಡೆದಿದೆ. CRIS ಮತ್ತು IRCTC ಆದೇಶದ ಪ್ರಕಾರ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ಮಾಡಿದೆ.

ಕೊರೊನಾ ಸಮಯದಲ್ಲಿ ಎಸಿ ಕೋಚ್‌ಗಳಲ್ಲಿ ದಿಂಬು-ಬೆಡ್ ನೀಡುವುದನ್ನು ಸ್ಥಗಿತಗೊಳಿಸಿತ್ತು, ಸಧ್ಯ ಈ ಸೌಲಭ್ಯವನ್ನು ರೈಲ್ವೆ ಪುನರಾರಂಭಿಸಿದೆ. ಇದಾದ ಬಳಿಕ ವಿವಿಧ ರೈಲುಗಳಲ್ಲಿ ಪ್ರಯಾಣಿಕರಿಗೆ ರಾತ್ರಿ ಮಲಗಲು ದಿಂಬು, ಹೊದಿಕೆಗಳನ್ನು ನೀಡಲಾಗುತ್ತಿದೆ.

ಇದನ್ನೂ ಓದಿ : LPG Gas Subsidy: ನಿಮ್ಮ ಖಾತೆಗೆ ಬರುತ್ತಿದೆಯೇ ಗ್ಯಾಸ್ ಸಿಲಿಂಡರ್ ಸಬ್ಸಿಡಿ ? ಸುಲಭವಾಗಿ ಹೀಗೆ ತಿಳಿದುಕೊಳ್ಳಿ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News