Ayushman Bharat Health Account: ಏನಿದು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ? ಇದರ ಲಾಭವೇನು?

Ayushman Bharat Health Account: ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್- ಎಬಿಎಚ್ಎ ಯಾವುದೇ ಒಬ್ಬ ವ್ಯಕ್ತಿಯ ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡಲು ಬಳಸುವ ಒಂದು ಸಂಖ್ಯೆ/ ಖಾತೆಯಾಗಿದೆ. ಭಾರತದಲ್ಲಿ ಆರೋಗ್ಯ ಸೇವೆಗಳಿಗೂ ಸಹ ಡಿಜಿಟಲ್ ಟಚ್ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. 

Written by - Yashaswini V | Last Updated : Apr 9, 2024, 10:09 AM IST
  • ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್-ಎಬಿಎಚ್ಎ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುತ್ತದೆ.
  • ಇದು ಭಾರತ ಸರ್ಕಾರದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ಪ್ರಮುಖ ಭಾಗವಾಗಿದೆ
  • ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ- ಎಬಿಎಚ್ಎ ಪ್ರಯೋಜನಗಳೇನು ಎಂದು ತಿಳಿಯೋಣ...
Ayushman Bharat Health Account: ಏನಿದು ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ? ಇದರ ಲಾಭವೇನು?  title=

Ayushman Bharat Health Account: ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ ಅಥವಾ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ-  ಎಬಿಎಚ್ಎ ಯೋಜನೆಯು ಭಾರತದ ಪ್ರಮುಖ ಆರೋಗ್ಯ ರಕ್ಷಣಾ ಯೋಜನೆಯಾಗಿದೆ. ಈ ಯೋಜನೆಯು ಆಯುಷ್ಮಾನ್ ಭಾರತ್ ಅಡಿಯಲ್ಲಿ ಒದಗಿಸಲಾದ ನಗದು ರಹಿತ ಚಿಕಿತ್ಸೆ ಮತ್ತು ಆರೋಗ್ಯ ಸೇವೆಗಳ ವೆಚ್ಚವನ್ನು ನಿರ್ವಹಿಸಲು ಸಹಾಯಕವಾಗಿದೆ. ಯಾವುದೀ ಯೋಜನೆ, ಇದರಿಂದ ಜನಸಾಮಾನ್ಯರಿಗೆ ಏನು ಪ್ರಯೋಜನ ಎಂದು ತಿಳಿಯೋಣ... 

ಏನಿದು ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್? 
ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್- ಎಬಿಎಚ್ಎ  (Ayushman Bharat Health Account- ABHA) ಯಾವುದೇ ಒಬ್ಬ ವ್ಯಕ್ತಿಯ ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡಲು ಬಳಸುವ ಒಂದು ಸಂಖ್ಯೆ/ ಖಾತೆಯಾಗಿದೆ. ಇದು ಭಾರತ ಸರ್ಕಾರದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ಪ್ರಮುಖ ಭಾಗವಾಗಿದೆ.   ಭಾರತದಲ್ಲಿ ಆರೋಗ್ಯ ಸೇವೆಗಳಿಗೂ ಸಹ ಡಿಜಿಟಲ್ ಟಚ್ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ. 

ಎಬಿ‌ಎಚ್ಎ ಸಂಖ್ಯೆಯನ್ನು ಪಡೆಯುವುದು ಹೇಗೆ? 
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ABDM) ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳುವ ಮೂಲಕ ಯಾವುದೇ ವ್ಯಕ್ತಿ ತನ್ನ ಆರೋಗ್ಯ ಐಡಿ ಅಥವಾ ABHA ಸಂಖ್ಯೆಯನ್ನು ಪಡೆಯಬಹುದು.

ಇದನ್ನೂ ಓದಿ- FD Interest Rates: ಸ್ಥಿರ ಠೇವಣಿ ಮಾಡುವವರಿಗೊಂದು ಗುಡ್ ನ್ಯೂಸ್, ಇಲ್ಲಿ ಸಿಗುತ್ತಿದೆ ನಿಮ್ಮ ಎಫ್ಡಿಗೆ ಅತಿ ಹೆಚ್ಚು ಬಡ್ಡಿ!

ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ-  ಎಬಿಎಚ್ಎ ಪ್ರಯೋಜನ: 
ಭಾರತ ಸರ್ಕಾರದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ಪ್ರಮುಖ ಭಾಗವಾಗಿರುವ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್-ಎಬಿಎಚ್ಎ ಜನಸಾಮಾನ್ಯರಿಗೆ ಉತ್ತಮ ಆರೋಗ್ಯವನ್ನು ಹೊಂದಲು, ಅನಾರೋಗ್ಯ ಸಂದರ್ಭದಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ತುಂಬಾ ಪ್ರಯೋಜನಕಾರಿ ಆಗಿದೆ. ಈ ಯೋಜನೆಯಡಿ ಸಿಗುವ ಪ್ರಮುಖ ಪ್ರಯೋಜನಗಳೆಂದರೆ... 

ನಗದು ರಹಿತ ಚಿಕಿತ್ಸೆ: 
ಆಯುಷ್ಮಾನ್ ಭಾರತ್‌ಗೆ (Ayushman Bharat) ಜೋಡಣೆಯಾಗಿರುವ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ಪಡೆಯುವ ಬಡ ರೋಗಿಗಳು ಎಬಿಎಚ್ಎ ಸಂಖ್ಯೆಯನ್ನು ಬಳಸಿ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು. ಅರ್ಥಾತ್, ರೋಗಿಗಳು ಚಿಕಿತ್ಸೆ ಪಡೆಯಲು ಹಣಕಾಸಿನ ಅಗತ್ಯವಿಲ್ಲ. 

ಎಲೆಕ್ಟ್ರಾನಿಕ್ ಆರೋಗ್ಯ ದಾಖಲೆಗಳು (EHR): 
ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್-ಎಬಿಎಚ್ಎ ರೋಗಿಗಳ ಮಾಹಿತಿಯನ್ನು ವಿದ್ಯುನ್ಮಾನವಾಗಿ ಸಂಗ್ರಹಿಸಲು ಮತ್ತು ವೀಕ್ಷಿಸಲು ಅನುಮತಿಸುತ್ತದೆ. ಇದರೊಂದಿಗೆ, ವೈದ್ಯರು ಹಳೆಯ ಚಿಕಿತ್ಸೆಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ ಮತ್ತು ಚಿಕಿತ್ಸೆಯು ಸುಲಭವಾಗುತ್ತದೆ.

ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ: 
ಈ ಆರೋಗ್ಯ ಖಾತೆಯು ಎಲ್ಲೆಡೆ ಮಾನ್ಯವಾಗಿರುತ್ತದೆ. ಹಾಗಾಗಿ, ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್-ಎಬಿಎಚ್ಎ ಕಾರ್ಡ್‌ನ ಸಹಾಯದಿಂದ ವ್ಯಕ್ತಿಯು ಆಯುಷ್ಮಾನ್ ಭಾರತ್ ಯೋಜನೆಯಡಿ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. 

ಇದನ್ನೂ ಓದಿ- Indian Railways: ಪ್ರಯಾಣಿಕರು ಈಗ ಸ್ಲೀಪರ್ ಕೋಚ್‌ಗೆ ಟಿಕೆಟ್ ಬುಕ್ ಮಾಡಿ ಎಸಿ ಕೋಚ್‌ನಲ್ಲಿ ಪ್ರಯಾಣಿಸಬಹುದು!

ಪಾರದರ್ಶಕತೆ ಮತ್ತು ಹೊಣೆಗಾರಿಕೆ: 
ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್-ಎಬಿಎಚ್ಎ ನಗದು ರಹಿತ ವಹಿವಾಟು ಮತ್ತು ಎಲೆಕ್ಟ್ರಾನಿಕ್ ದಾಖಲೆಗಳಿಂದ ಚಿಕಿತ್ಸೆಯಲ್ಲಿನ ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಸಹಕಾರಿ ಆಗಿದೆ. 

ಆರ್ಥಿಕ ಭದ್ರತೆ: 
ಈ ಯೋಜನೆಯಡಿ ಬಡವರು ನಿರ್ಗತಿಕರಿಗೆ ಉಚಿತ ಚಿಕಿತ್ಸೆ ದೊರೆಯುವುದರಿದ್ನ ಅವರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಬೇಕಾಗಿಲ್ಲ. ಒಂದೊಮ್ಮೆ ಖರ್ಚಾದರೂ ಕೂಡ ಅತಿ ಕಡಿಮೆ ಖರ್ಚು ಮಾಡಬೇಕಾಗಬಹುದು. 

ಉತ್ತಮ ಆರೋಗ್ಯ ಸೇವೆ: 
ಮೊದಲೇ ತಿಳಿಸಿದಂತೆ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್-ಎಬಿಎಚ್ಎ ರೋಗಿಗಳ ಮಾಹಿತಿಯನ್ನು ವಿದ್ಯುನ್ಮಾನವಾಗಿ ಸಂಗ್ರಹಿಸಲು ಮತ್ತು ವೀಕ್ಷಿಸಲು ಅನುಮತಿಸುವುದರಿದ್ನ ವೈದ್ಯರು ಸುಲಭವಾಗಿ ರೋಗಿಗಳ ಆರೋಗ್ಯ ಇತಿಹಾಸವನ್ನು ಪರಿಶೀಲಿಸಿ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News