Car Showroom ನಲ್ಲಿ ನೌಕರಿ ಗಿಟ್ಟಿಸಿದ ಶ್ವಾನ, ಗ್ರಾಹಕರ ಜೊತೆಗೆ ನೇರವಾಗಿ ಡೀಲ್ ನಡೆಸುತ್ತಂತೆ

ಬ್ರೆಜಿಲ್ ನಿಂದ ಒಂದು ವಿಶಿಷ್ಟ ಸುದ್ದಿ ಪ್ರಕಟವಾಗಿದೆ. ಅಲ್ಲಿನ ಒಂದು ಹುಂಡೈ ಕಾರ್ ಷೋರೂಮ್ ನಲ್ಲಿ ಬೀದಿ ನಾಯಿಗೆ ಷೋರೂಮ್ ನಲ್ಲಿ ಕೆಲಸ ನೀಡಲಾಗಿದೆ. 

Last Updated : Aug 14, 2020, 09:41 AM IST
Car Showroom ನಲ್ಲಿ ನೌಕರಿ ಗಿಟ್ಟಿಸಿದ ಶ್ವಾನ, ಗ್ರಾಹಕರ ಜೊತೆಗೆ ನೇರವಾಗಿ ಡೀಲ್ ನಡೆಸುತ್ತಂತೆ  title=

ಬ್ರೆಜಿಲ್: ಬ್ರೆಜಿಲ್ ನಿಂದ ಒಂದು ವಿಶಿಷ್ಟ ಸುದ್ದಿ ಪ್ರಕಟವಾಗಿದೆ. ಅಲ್ಲಿನ ಒಂದು ಹುಂಡೈ ಕಾರ್ ಷೋರೂಮ್ (Car Showroom) ನಲ್ಲಿ ಬೀದಿ ನಾಯಿಗೆ ಷೋರೂಮ್ ನಲ್ಲಿ ಕೆಲಸ ನೀಡಲಾಗಿದೆ. ಈ ವರ್ಷದ ಆರಂಭದಲ್ಲಿ, ಬ್ರೆಜಿಲ್‌ನ ಹ್ಯುಂಡೈ ಪ್ರೈಮ್ ಬ್ರಾಂಚ್‌ನ ನೌಕರರು ಶೋ ರೂಂ ಹೊರಗೆ ದಾರಿ ಕಾಯುತ್ತಾ ಕುಳಿತ ಒಂದು ನಾಯಿಯನ್ನು ಗಮನಿಸಿದ್ದಾರೆ. ಸಮಯ ಕಳೆದಂತೆ ಶ್ವಾನ ಹೊರಟು ಹೋಗುತ್ತದೆ ಎಂದು ಅವರು ಭಾವಿಸಿದ್ದರು. ಆದರೆ, ನಾಯಿ ಮಾತ್ರ ಷೋರೂಮ್ ಹೊರಗಡೆಯಿಂದ ಹೋಗಲೇ ಇಲ್ಲ. ಅದರಲ್ಲೂ ವಿಶೇಷವಾಗಿ ಮಳೆಗಾಳದ ರಾತ್ರಿಯಲ್ಲಿಯೂ ಕೂಡ ನಾಯಿ ಅಲ್ಲಿಂದ ಕದಲಿಲ್ಲ. ಇದನ್ನು ಗಮನಿಸಿದ  ಶೋ ರೂಂನ ವ್ಯವಸ್ಥಾಪಕ ಎಮರ್ಸನ್ ಮರಿಯಾನೊ ನಾಯಿಯ ಮೇಲೆ ಮೇಲೆ ಕರುಣೆ ತೋರಿ ಸ್ವಲ್ಪ ಆಹಾರ ಮತ್ತು ನೀರನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಷೋರೂಮ್ ನೌಕರರ ಹೃದಯವನ್ನು ಗೆಲ್ಲಲು ಕೂಡ ನಾಯಿ ಹೆಚ್ಚು ಸಮಯ ತೆಗೆದುಕೊಂಡಿಲ್ಲ. ಬಳಿಕ ಅಂತಿಮವಾಗಿ  ನಾಯಿಯನ್ನು ಡೀಲರ್ಷಿಪ್ ಮಾಸ್ಕಾಟ್ ಆಗಿ ನಾಯಿಯನ್ನು ದತ್ತು ತೆಗೆದುಕೊಳ್ಳಲಾಗಿದೆ.

ಡೀಲರ್ ನಾಯಿಗೆ ತಕ್ಸನ್ ಪ್ರೈಮ್ ಎಂಬ ಹೆಸರನ್ನು ನೀಡಿ, ನಾಯಿಯನ್ನು ವೃತ್ತಿಪರ ಸಲಹೆಗಾರನಾಗಿ ನೇಮಿಸಿಕೊಂಡಿದ್ದಾರೆ. ನಾಯಿಗೂ ಕೂಡ ಸ್ಟಾಫ್ ಐಡಿ ಬ್ಯಾಜ್ ನೀಡಲಾಗಿದೆ. ಫೋನ್ ಬಳಸಲು ನಾಯಿಗೆ ತರಬೇತಿ ಕೂಡ ನೀಡಲಾಗಿದೆ. ಆದರೆ, ಆರಂಭಿಕ ಯೋಜನೆಯಂತೆ ನಾಯಿಗೆ ಕೇವಲ ವಾಸಿಸಲು ಒಂದು ಸುರಕ್ಷಿತ ಸೂರು ನೀಡುವುದಾಗಿತ್ತು. ಗ್ರಾಹಕರ ಜೊತೆಗೆ ಟಕ್ಸನ್ ವ್ಯವಹರಿಸುತ್ತಿರುವ ರೀತಿ ಮಾತ್ತು ಮಾತುಕತೆ ನಡೆಸುವ ಕ್ಷಮತೆಯನ್ನು ಪರಿಗಣಿಸಿ ಅದಕ್ಕೆ ಪ್ರಮೋಶನ್ ನೀಡಲಾಗಿದೆ.

ಈ ಕುರಿತು ಟಾಪ್ ಮೋಟರ್ಸ್ ಗೆ ಮಾಹಿತಿ ನೀಡಿರುವ ಷೋರೂಮ್ ವ್ಯವಸ್ಥಾಪಕ ಎಮರ್ಸನ್ ಗ್ರಾಹಕರ ಪ್ರತಿ ಟಕ್ಸನ್ ತೋರುವ ಕಾಳಜಿ ಹಾಗೂ ವಿನಯಶೀಲ ಸ್ವಭಾವದ ಕಾರಣ ಶೋರೂಮ್ ಮಾರಾಟದಲ್ಲಿ ತುಂಬಾ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.

Trending News