Viral Video: ನೀರಿನಲ್ಲಿ ಅವಿತು ಕುಳಿತ ಅನಕೊಂಡಾ ಫೋಟೋ ಕ್ಲಿಕ್ಕಿಸಲು ಮುಂದಾದ ವ್ಯಕ್ತಿ, ಮುಂದೇನಾಯ್ತು ನೀವೇ ನೋಡಿ

Anaconda attacked on Boat Rider- ಬ್ರೆಜಿಲ್‌ನಲ್ಲಿ, ದೋಣಿಯಲ್ಲಿ ಸವಾರಿ ನಡೆಸುತ್ತಿದ್ದ ವ್ಯಕ್ತಿಯೊಬ್ಬ ನೀರಿನ ಅಡಿಯಲ್ಲಿ ಎರಡು ಮರಗಳ ದಿಮ್ಮಿಗಳ ನಡುವೆ ಅವಿತು ಕುಳಿತಿದ್ದ ಅನಕೊಂಡವನ್ನು ಫೋಟೋ ಕ್ಲಿಕ್ಕಿಸಲು ಮತ್ತು ವಿಡಿಯೋ ಶೂಟ್ ಮಾಡಲು ಮುಂದಾಗಿದ್ದಾನೆ. ಆದರೆ ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಅನಕೊಂಡ ಆತನ ಮೇಲೆ ದಾಳಿ ನಡೆಸಿದೆ. ಈ ವೇಳೆ ದೋಣಿಯಲ್ಲಿ ಕುಳಿತಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.   

Written by - Nitin Tabib | Last Updated : Jul 8, 2022, 06:49 PM IST
  • ಬ್ರೆಜಿಲಿಯನ್ ಮೀನುಗಾರಿಕೆ ನಡೆಸುತ್ತಿದ್ದ ಗೈಡ್ ವೊಬ್ಬ ಅನಕೊಂಡ ಹಾವು ನಡೆಸಿದ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
  • ಆದರೆ, ಇದೀಗ ಈ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರ ವೈರಲ್ ಆಗುತ್ತಿದೆ.
Viral Video: ನೀರಿನಲ್ಲಿ ಅವಿತು ಕುಳಿತ ಅನಕೊಂಡಾ ಫೋಟೋ ಕ್ಲಿಕ್ಕಿಸಲು ಮುಂದಾದ ವ್ಯಕ್ತಿ, ಮುಂದೇನಾಯ್ತು ನೀವೇ ನೋಡಿ title=
Anaconda Viral Video

Brazil Anaconda attacked on Boat Rider: ಬ್ರೆಜಿಲಿಯನ್ ಮೀನುಗಾರಿಕೆ ನಡೆಸುತ್ತಿದ್ದ ಗೈಡ್ ವೊಬ್ಬ ಅನಕೊಂಡ ಹಾವು ನಡೆಸಿದ ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ, ಇದೀಗ ಈ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರ ವೈರಲ್ ಆಗುತ್ತಿದೆ. ಈ ತುಣುಕನ್ನು 38 ವರ್ಷದ ಜೊವೊ ಸೆವೆರಿನೊ ಸೆರೆಹಿಡಿದಿದ್ದಾರೆ. ಇದರಲ್ಲಿ ಅನಕೊಂಡ ನೀರಿನಿಂದ ಜಿಗಿದು ಕಚ್ಚುತ್ತಿರುವುದನ್ನು ನೀವು ನೋಡಬಹುದಾಗಿದೆ. ಜೂನ್ 30 ರಂದು ಮಧ್ಯ ಬ್ರೆಜಿಲಿಯನ್ ರಾಜ್ಯವಾದ ಗೋಯಾಸ್‌ನ ಅರಗುವಾಯಾ ನದಿಯ ದಡದಲ್ಲಿ ಮಿಸ್ಟರ್ ಸೆವೆರಿನೋ ಪ್ರವಾಸಿಗರ ಗುಂಪನ್ನು ಹೊಂದಿರುವ ದೋಣಿಯ ಸಾರಥ್ಯವನ್ನು ವಹಿಸಿಕೊಂಡಿದ್ದರು.

20 ಸೆಕೆಂಡುಗಳ ವೀಡಿಯೊ
20-ಸೆಕೆಂಡ್‌ಗಳ ವೀಡಿಯೊದಲ್ಲಿ  ಎರಡು ಮರದ ದಿಮ್ಮಿಗಳ ನಡುವೆ ನೀರಿನ ಅಡಿಯಲ್ಲಿ ಸುರುಳಿಯಾಗಿರುವ ಕುಳಿತುರುವ ಅನಕೊಂಡವನ್ನು ನೀವು ನೋಡಬಹುದಾಗಿದೆ. ಮಿಸ್ಟರ್ ಸೆವೆರಿನೊ (ಕ್ಲಿಪ್‌ನಲ್ಲಿ ಕಾಣಿಸುವುದಿಲ್ಲ) ಅನಕೊಂಡದ ಮೇಲೆ ಕ್ಯಾಮೆರಾವನ್ನು ಕೇಂದ್ರೀಕರಿಸುತ್ತಿದ್ದಂತೆ, ನೀರಿನ ಅಡಿಯಲ್ಲಿದ್ದ ವಿಶ್ರಾಂತಿ ಪಡೆಯುತ್ತಿದ್ದ ಅನಕೊಂಡ ಇದ್ದಕ್ಕಿದ್ದಂತೆ ದಾಳಿ ನಡೆಸುತ್ತದೆ, ಈ ದಾಳಿಗೆ ದೋಣಿಯಲ್ಲಿದ್ದವರು ಕಕ್ಕಾಬಿಕ್ಕಿಯಾಗಿದ್ದಾರೆ. ದಾಳಿಯ ನಂತರ  ಮಿಸ್ಟರ್ ಸೆವೆರಿನೊ ಅಕಿಗಳು ಆತಂಕದಿಂದ ನಗುತ್ತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದಾಗಿದೆ..

ಗೈಡ್ ಗೆ ಕಂಡ ಹಾವು 
ಈ ಕುರಿತು ನ್ಯೂಯಾರ್ಕ್ ಪೋಸ್ಟ್ ಉಲ್ಲೇಖಿಸಿ ಮಾಹಿತಿ ನೀಡಿರುವ ಮಿಸ್ಟರ್ ಸೇವೆರಿನೋ, 'ಸ್ಟಂಪ್ ನಲ್ಲಿರುವ ಒಂದು ಅನಕೊಂಡ ಹಾವನ್ನು ನಾನು ಗಮನಿಸಿದ್ದೇನೆ. ಗೆಳೆಯರೇ ಅಲ್ಲಿ ನೋಡಿ ಅನಕೊಂಡ ಕುಳಿತಿದೆ. ನಾನು ನಿಮಗಾಗಿ ಅದರ ಚಿತ್ರೀಕರಣ ನಡೆಸಲಿದ್ದೇನೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ- 

ವಿಶ್ವದ ಅತಿದೊಡ್ಡ ಹಾವು
ಆದರೆ, ಈ ದಾಳಿಯ ನಂತರ, ಅನಕೊಂಡ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತದೆ. ದೋಣಿಯಲ್ಲಿದ್ದ ಜನರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಹಾವಿ ಮಿಸ್ಟರ್ ಸೆವೆರಿನೊಗೆ ಕಚ್ಚಿಲ್ಲ ಎಂದು ಪೋಸ್ಟ್ ತನ್ನ ವರದಿಯಲ್ಲಿ ತಿಳಿಸಿದೆ. ಈ ಹಾವನ್ನು ಹಸಿರು ಅನಕೊಂಡ ಎಂದು ಗುರುತಿಸಲಾಗಿದ್ದು, ಇದು 30 ಅಡಿ ಉದ್ದ ಮತ್ತು 550 ಪೌಂಡ್ ತೂಗುತ್ತದೆ. ಇದು ಬೋವಾ ಕುಟುಂಬದ ಸದಸ್ಯ. ದಕ್ಷಿಣ ಅಮೆರಿಕಾದ ಹಸಿರು ಅನಕೊಂಡ ವಿಶ್ವದ ಅತಿದೊಡ್ಡ ಹಾವು ಎನ್ನಲಾಗುತ್ತದೆ.

ಇದನ್ನೂ ಓದಿ-

ಈ ರೀತಿ ತನ್ನ ಬೇಟೆಯಾಡುತ್ತದೆ ಈ ಹಾವು
ನ್ಯಾಷನಲ್ ಜಿಯಾಗ್ರಫಿಕ್ ನಲ್ಲಿ ಬಿತ್ತರವಾದ ವರದಿಯೊಂದರ ಪ್ರಕಾರ, ಹೆಣ್ಣು ಅನಕೊಂಡಗಳು ಗಂಡು ಅನಕೊಂಡಗಿಂತ ಗಾತ್ರದಲ್ಲಿ ದೊಡ್ದದಾಗಿರುತ್ತವೆ. ಈ ಅನಕೊಂಡಗಳು ಸಾಮಾನ್ಯವಾಗಿ ಅಮೆಜಾನ್ ಜಲಾನಯನ ಪ್ರದೇಶದ ಉಷ್ಣವಲಯದ ಮಳೆಕಾಡುಗಳಲ್ಲಿ ಜೌಗು ಮತ್ತು ನಿಧಾನವಾಗಿ ಚಲಿಸುವ ತೊರೆಗಳಲ್ಲಿ ವಾಸಿಸುತ್ತವೆ. ಈ ಅನಕೊಂಡಗಳು ಕಾಡುಹಂದಿ, ಜಿಂಕೆ, ಪಕ್ಷಿಗಳು, ಆಮೆಗಳು ಮತ್ತು ಜಾಗ್ವಾರ್‌ಗಳ ಬೇಟೆ ನಡೆಸುತ್ತವೆ. ವಿಷಕಾರಿಯಲ್ಲದ ಈ ಅನಕೊಂಡಗಳು ತನ್ನ ಇಡೀ ಶರೀರದಿಂದ ಬೇಟೆಯನ್ನು ಸುತ್ತುವರೆಯುತ್ತದೆ ಮತ್ತು ಬೇಟೆ ಪ್ರಾಣ ಬಿಡುವವರೆಗೆ ಅವುಗಳನ್ನು ಹಿಂಡುತ್ತವೆ ಎನ್ನಲಾಗುತ್ತದೆ. ವಿಡಿಯೋ ನೋಡಿ...

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News