WhatsApp Update: ವಾಟ್ಸ್ ಆಪ್ ಬಳಕೆದಾರರಿಗೊಂದು ಭಾರಿ ಸಂತಸದ ಸುದ್ದಿ, ಇನ್ಮುಂದೆ ಗ್ರೂಪ್ ನಲ್ಲಿ ಎಷ್ಟು ಜನರನ್ನು ಸೇರಿಸಬಹುದು ಗೊತ್ತಾ?

WhatsApp Update: ವಾಟ್ಸ್ ಆಪ್ ನ ಒಂದು ಗುಂಪಿನೊಳಗೆ ಸೇರಿಸುವ ಸದಸ್ಯರ ಸಂಖ್ಯೆಯನ್ನು ವಾಟ್ಸ್ ಆಪ್ ಮತ್ತೊಮ್ಮೆ ಪರಿಷ್ಕರಿಸಲಿದೆ. ಪ್ರಸ್ತುತ ಬಳಕೆದಾರರು ಒಂದು ಗುಂಪಿಗೆ 512 ಸದಸ್ಯರನ್ನು ಮಾತ್ರ ಸೇರಿಸಬಹುದಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.  

Written by - Nitin Tabib | Last Updated : Oct 9, 2022, 07:35 PM IST
  • WhatsApp ಶೀಘ್ರದಲ್ಲೇ ಇನ್-ಆಪ್ ಸಮೀಕ್ಷೆ ವೈಶಿಷ್ಟ್ಯವನ್ನು ಪರಿಚಯಿಸಲಿದೆ ಎಂದು ಇತ್ತೀಚೆಗೆ ವರದಿಯಾಗಿದೆ,
  • ಇದರಲ್ಲಿ ಬಳಕೆದಾರರು ಅಧಿಕೃತ WhatsApp ಖಾತೆಯ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ.
WhatsApp Update: ವಾಟ್ಸ್ ಆಪ್ ಬಳಕೆದಾರರಿಗೊಂದು ಭಾರಿ ಸಂತಸದ ಸುದ್ದಿ, ಇನ್ಮುಂದೆ ಗ್ರೂಪ್ ನಲ್ಲಿ ಎಷ್ಟು ಜನರನ್ನು ಸೇರಿಸಬಹುದು ಗೊತ್ತಾ? title=
Whatsapp Latest Update

WhatsApp Update: WhatsApp ತನ್ನ ಬಳಕೆದಾರರಿಗೆ ಶೀಘ್ರದಲ್ಲಿಯೇ ಅದ್ಭುತವಾದ ನವೀಕರಣ ನೀಡಲಿದೆ. ಈ ಅಪ್‌ಡೇಟ್‌ನಲ್ಲಿ ಗುಂಪು ರಚನೆಕಾರರು ಪ್ರಯೋಜನ ಭಾರಿ ಪ್ರಯೋಜನ ಪಡೆಯಲಿದ್ದಾರೆ. ಹೌದು, WhatsApp ಮತ್ತೊಮ್ಮೆ 1 ಗುಂಪಿನೊಳಗೆ ಸೇರಿಸುವ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿದೆ. ಇದುವರೆಗೆ ಬಳಕೆದಾರರು ಒಂದು ಗುಂಪಿಗೆ ಕೇವಲ 512 ಜನರನ್ನು ಮಾತ್ರ ಸೇರಿಸಬಹುದಾಗಿತ್ತು, ಆದರೆ ಇದೀಗ ಅದರ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಈಗ ನೀವು ಒಂದು ಗುಂಪಿಗೆ 1024 ಜನರನ್ನು ಸೇರಿಸಬಹುದು. ಇದಕ್ಕೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

WABetainfo ವರದಿಯ ಪ್ರಕಾರ, Android ಮತ್ತು iOS ಗಾಗಿ WhatsApp ಬೀಟಾ ಎರಡರಲ್ಲೂ, ಗುಂಪಿಗೆ ಸೇರಿಸುವ ಬಳಕೆದಾರರ ಸಂಖ್ಯೆ ಈಗ 512 ರಿಂದ 1024 ಕ್ಕೆ ಹೆಚ್ಚಿಸಿದೆ. ಈ ವೈಶಿಷ್ಟ್ಯದ ಸ್ಕ್ರೀನ್‌ಶಾಟ್ ಅನ್ನು ಸಹ ಅದು ತನ್ನ ವರದಿಯಲ್ಲಿ ಹಂಚಿಕೊಂಡಿದೆ, ಇದರಲ್ಲಿ ವಾಟ್ಸಾಪ್ ಬಳಕೆದಾರರಿಗೆ 1024 ಜನರನ್ನು ಗ್ರೂಪ್‌ಗೆ ಸೇರಿಸುವ ಸೌಲಭ್ಯವನ್ನು ನೀಡುತ್ತಿದೆ ಎಂಬುದನ್ನು ನೀವು ನೋಡಬಹುದಾಗಿದೆ.

ನೀವು ಹೊಸ ನವೀಕರಣವನ್ನು ಪಡೆದುಕೊಂಡಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ನೀವು ಅದರ ಪರಿಶೀಲನೆ ನಡೆಸಬಹುದು. ನಿಮ್ಮ ಖಾತೆಯಿಂದ ನೀವು ಹೊಸ ಗುಂಪನ್ನು ರಚಿಸಬಹುದು ಅಥವಾ ಹಳೆಯ ಗುಂಪಿಗೆ ಹೊಸ ಜನರನ್ನು ಸೇರಿಸಬಹುದು. ನೀವು ಹೊಸ ನವೀಕರಣವನ್ನು ಪಡೆದಿದ್ದರೆ, 512 ಸದಸ್ಯರ ಬದಲಿಗೆ, ನೀವು 1024 ಸದಸ್ಯರನ್ನು ಸೇರಿಸುವ ಆಯ್ಕೆಯನ್ನು ವಾಟ್ಸ್ ಆಪ್ ತೋರಿಸಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ-Tallest Tree: ಕೊನೆಗೂ ಸಿಕ್ತು ವಿಶ್ವದ ಅತ್ಯಂತ ಎತ್ತರದ ಗಿಡ! ವಯಸ್ಸು ಕೇಳಿ ನೀವೂ ದಂಗಾಗುವಿರಿ

ಈ ವಿಶೇಷ ವೈಶಿಷ್ಟ್ಯವು WhatsApp ನಲ್ಲಿ ಲಭ್ಯವಾಗಲಿದೆ
ವಾಟ್ಸಾಪ್‌ ಬಳಕೆದಾರರು ಹಲವಾರು ಹೊಸ ವೈಶಿಷ್ಟ್ಯಗಳಿಗಾಗಿ ದೀರ್ಘಕಾಲದಿಂದ ಕಾಯುತ್ತಿದ್ದಾರೆ. ಇವುಗಳಲ್ಲಿ ಪೋಲ್, ಅವತಾರ್, ಎಡಿಟ್, ಧ್ವನಿ ಸ್ಥಿತಿ ನವೀಕರಣದಂತಹ ವೈಶಿಷ್ಟ್ಯಗಳು ಒಳಗೊಂಡಿವೆ. ಅವತಾರ್ ವೈಶಿಷ್ಟ್ಯದ ಕುರಿತು ಹೇಳುವುದಾದರೆ, ಈ ವೈಶಿಷ್ಟ್ಯದ ಅಡಿಯಲ್ಲಿ, ಬಳಕೆದಾರರು ತಮ್ಮ ಅವತಾರ ಅನ್ನು ರಚಿಸಬಹುದು ಮತ್ತು ಸ್ನೇಹಿತರಿಗೆ ಸ್ಟಿಕ್ಕರ್‌ಗಳನ್ನು ಕಳುಹಿಸುವುದು ಮಾತ್ರವಲ್ಲದೆ ಪ್ರೊಫೈಲ್ ಫೋಟೋದಲ್ಲಿ ಅವತಾರವನ್ನು ಕೂಡ ಹಾಕಬಹುದು.

ಇದನ್ನೂ ಓದಿ-Bumper Offer: ಕೇವಲ 550 ರೂ.ಗೆ ಖದೀದಿಸಿ Redmi 9i Sport ಸ್ಮಾರ್ಟ್‌ಫೋನ್

WhatsApp ಶೀಘ್ರದಲ್ಲೇ ಇನ್-ಆಪ್ ಸಮೀಕ್ಷೆ ವೈಶಿಷ್ಟ್ಯವನ್ನು ಪರಿಚಯಿಸಲಿದೆ ಎಂದು ಇತ್ತೀಚೆಗೆ ವರದಿಯಾಗಿದೆ, ಇದರಲ್ಲಿ ಬಳಕೆದಾರರು ಅಧಿಕೃತ WhatsApp ಖಾತೆಯ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News