WhatsApp: ವಾಟ್ಸಾಪ್‌ನ ಚಾಟ್ ಪಟ್ಟಿಯಲ್ಲಿ ಶೀಘ್ರವೇ ಲಭ್ಯವಾಗಲಿದೆ ಈ ಸೌಲಭ್ಯ

WhatsApp: ವಾಟ್ಸಾಪ್ ಚಾಟ್ ಪಟ್ಟಿಯಲ್ಲಿ ಇಂಟರ್ಫೇಸ್ ಅನ್ನು ಮರುವಿನ್ಯಾಸಗೊಳಿಸುತ್ತಿದ್ದು, ಶೀಘ್ರದಲ್ಲೇ ಬಳಕೆದಾರರಿಗೆ ಚಾಟ್ ಪಟ್ಟಿಯಲ್ಲಿ ಹೊಸ ಸರ್ಚ್ ಬಾರ್ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Mar 21, 2024, 01:55 PM IST
  • ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯ ಪರಿಚಯಿಸಲು ವಾಟ್ಸಾಪ್‌ ಸಿದ್ಧತೆ
  • ಶೀಘ್ರದಲ್ಲೇ ಬಳಕೆದಾರರಿಗೆ ಸಿಗಲಿದೆ ಹೊಸ ಸೌಲಭ್ಯ
  • ಚಾಟ್ ಪಟ್ಟಿಯಲ್ಲಿ ಲಭ್ಯವಾಗಲಿದೆ ಸರ್ಚ್ ಬಾರ್
WhatsApp: ವಾಟ್ಸಾಪ್‌ನ ಚಾಟ್ ಪಟ್ಟಿಯಲ್ಲಿ ಶೀಘ್ರವೇ ಲಭ್ಯವಾಗಲಿದೆ ಈ ಸೌಲಭ್ಯ  title=

WhatsApp New Feature: ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಆಗಾಗ್ಗೆ ತನ್ನ ಬಳಕೆದಾರರಿಗಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ ಚಾಟ್ ಪಟ್ಟಿಯಲ್ಲಿ ಇಂಟರ್ಫೇಸ್ ಅನ್ನು ಮರುವಿನ್ಯಾಸಗೊಳಿಸುತ್ತಿದ್ದು, ಶೀಘ್ರದಲ್ಲೇ ಬಳಕೆದಾರರಿಗೆ ಚಾಟ್ ಪಟ್ಟಿಯಲ್ಲಿ ಹೊಸ ಸರ್ಚ್ ಬಾರ್ ಸೌಲಭ್ಯ ಲಭ್ಯವಾಗಲಿದೆ ಎಂದು ವರದಿಯಾಗಿದೆ. 

ಇತ್ತೀಚಿನ ವರದಿಯ ಪ್ರಕಾರ, ವಾಟ್ಸಾಪ್ ಚಾಟ್ ಲಿಸ್ಟ್ ಇಂಟರ್ಫೇಸ್‌ಗಾಗಿ ಹುಡುಕಾಟ ಬಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗುತ್ತಿದ್ದು ಏನಿದರ ವೈಶಿಷ್ಟ್ಯ, ಇದರಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಎಂದು ತಿಳಿಯೋಣ... 

ಇದನ್ನೂ ಓದಿ- WhatsApp ತರುತ್ತಿದೆ App Lock Feature : ಬಳಕೆದಾರರಿಗೆ ಹೇಗೆ ಸಹಕಾರಿಯಾಗಲಿದೆ ?

ವಾಟ್ಸಾಪ್ ಚಾಟ್ ಪಟ್ಟಿಯಲ್ಲಿ ಸರ್ಚ್ ಬಾರ್: 
ವಾಟ್ಸಾಪ್ ಅಪ್ಡೇಟ್ ಬಗ್ಗೆ ವರದಿ ಮಾಡುವ WABetainfo, ವಾಟ್ಸಾಪ್ ಸರ್ಚ್ ಪಟ್ಟಿಯ ಅಭಿವೃದ್ದಿಯ ಕುರಿತು ಮಾಹಿತಿ ಮಾಹಿತಿ ನೀಡಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆಂಡ್ರಾಯ್ಡ್ 2.24.7.1 ಅಪ್‌ಡೇಟ್‌ಗಾಗಿ ವಾಟ್ಸಾಪ್ ಬೀಟಾ ಕಂಪನಿಯು ಚಾಟ್ ಪಟ್ಟಿ ಇಂಟರ್ಫೇಸ್‌ಗಾಗಿ ಸರ್ಚ್ ಪಟ್ಟಿಯನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು ಬಳಕೆದಾರರಿಗೆ ಹುಡುಕಾಟವನ್ನು ಸುಲಭಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. 

ಇದನ್ನೂ ಓದಿ- ಜಿಯೋ, ಏರ್ ಟೆಲ್ ಸ್ಪೆಷಲ್ ಆಫರ್ ನಲ್ಲಿ ಸಿಗುವುದು Free Netflix

WABetainfo ತನ್ನ ವರದಿಯಲ್ಲಿ, ವಾಟ್ಸಾಪ್ ಇತ್ತೀಚೆಗೆ ನವೀಕರಣದಲ್ಲಿ ಚಾಟ್ ಟ್ಯಾಬ್‌ಗಾಗಿ ಹುಡುಕಾಟ ಪಟ್ಟಿಯನ್ನು ಅಭಿವೃದ್ಧಿಪಡಿಸುತ್ತಿದೆ. ಸ್ಕ್ರೀನ್‌ಶಾಟ್ ಅನ್ನು ಕೂಡ ಶೇರ್ ಮಾಡಿದ್ದು ಇದರಲ್ಲಿ ಸರ್ಚ್ ಬಾರ್ ಆಯ್ಕೆ ಸ್ಪಷ್ಟವಾಗಿ ಗೋಚರಿಸುತ್ತದೆ. ಆದಾಗ್ಯೂ, ಹೊಸ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದೆ. ಮೊದಲಿಗೆ ಪರೀಕ್ಷಾರ್ಥವಾಗಿ ಬೀಟಾ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗುತ್ತದೆ. ಅದರ ನಂತರ ಎಲ್ಲಾ ಬಳಕೆದಾರರಿಗಾಗಿ ಸ್ಥಿರ ಆವೃತ್ತಿಗೆ ಈ ವೈಶಿಷ್ಟ್ಯವನ್ನು ಹೊರತರಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News