ಡಿಲೀಟ್‌ ಆದ WhatsApp ಫೋಟೋಗಳನ್ನು restore ಮಾಡುವುದು ಹೇಗೆ? ಇಲ್ಲಿ ತಿಳಿಯಿರಿ

Restore deleted WhatsApp photos : ಡಿಲೀಟ್‌ ಆದ WhatsApp ಫೋಟೋಗಳನ್ನು ಫೋನ್‌ನ ಆಂತರಿಕ ಸಂಗ್ರಹಣೆ ಮತ್ತು ಬ್ಯಾಕಪ್‌ನಿಂದ ರಿಸ್ಟೋರ್‌ ಮಾಡಬಹುದು. WhatsApp ನಲ್ಲಿ ಡಿಲೀಟ್‌ ಆದ ಫೋಟೋಗಳನ್ನು ಹೇಗೆ ಮರಳಿ ಪಡೆಯಬಹುದು ಎಂದು ನಾವು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ. 

Written by - Chetana Devarmani | Last Updated : Dec 3, 2022, 12:37 PM IST
  • WhatsApp ಫೋಟೋಗಳು ಡಿಲೀಟ್‌ ಆಗಿವೆಯೇ?
  • ಡಿಲೀಟ್‌ ಆದ ಫೋಟೋಗಳನ್ನು restore ಮಾಡುವುದು ಹೇಗೆ?
  • ಇಲ್ಲಿದೆ ನೋಡಿ ಸುಲಭ ವಿಧಾನ
ಡಿಲೀಟ್‌ ಆದ WhatsApp ಫೋಟೋಗಳನ್ನು restore ಮಾಡುವುದು ಹೇಗೆ? ಇಲ್ಲಿ ತಿಳಿಯಿರಿ  title=
WhatsApp

How to restore deleted WhatsApp photos : ವಾಟ್ಸಾಪ್ ಅತ್ಯಂತ ಜನಪ್ರಿಯ ಮತ್ತು ವ್ಯಾಪಕವಾಗಿ ಬಳಸಲಾಗುವ ಮೆಸೇಜ್‌ ಆಪ್‌ ಆಗಿದೆ. ಫೋಟೋಗಳು, ವೀಡಿಯೊಗಳು, ಡಾಕ್ಯೂಮೆಂಟ್‌ಗಳನ್ನು ಹಂಚಿಕೊಳ್ಳಲು ಮತ್ತು ಸಂದೇಶ ಕಳುಹಿಸಲು ವಾಟ್ಸಾಪ್‌ ಬಳಸಲಾಗುತ್ತದೆ. ಇದು ವೈಯಕ್ತಿಕ ಅಥವಾ ವೃತ್ತಿಪರ ಉದ್ದೇಶಗಳಿಗೆ ಬಂದಾಗ ಸಾಕಷ್ಟು ಸೂಕ್ತವಾಗಿದೆ. ನಾವು ನಮ್ಮ ಕುಟುಂಬ ಮತ್ತು ಸ್ನೇಹಿತರಿಂದ WhatsApp ನಲ್ಲಿ ಸಾಕಷ್ಟು ಮಾಹಿತಿಯನ್ನು ಸ್ವೀಕರಿಸುತ್ತೇವೆ. ಕೆಲವೊಮ್ಮೆ ಫೋನ್‌ನ ಸ್ಟೋರೇಜ್ ಅನ್ನು ತೆರವುಗೊಳಿಸಲು ನಾವು ಉದ್ದೇಶಪೂರ್ವಕವಾಗಿ WhatsApp ಫೋಟೋಗಳನ್ನು ಡಿಲೀಟ್‌ ಮಾಡುತ್ತೇವೆ. ಈ ವೇಳೆ ಕೆಲವು ಪ್ರಮುಖ ಫೋಟೋಗಳನ್ನು ಕಳೆದುಕೊಳ್ಳುತ್ತೇವೆ. ನೀವು ದೀರ್ಘಕಾಲದವರೆಗೆ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರೆ, WhatsApp ನಲ್ಲಿ ಡಿಲೀಟ್‌ ಮಾಡಿದ ಫೋಟೋ ಹೇಗೆ ಮರಳಿ ಪಡೆಯುವುದು ಎಂಬುದು ನಿಮಗೆ ತಿಳಿದಿರಬಹುದು.

ಇದನ್ನೂ ಓದಿ : Smartphone Tips: ನಿಮ್ಮ ಸ್ಮಾರ್ಟ್ ಫೋನ್ ನ ಈ ಭಾಗವನ್ನು ಮರೆತೂ ಕೂಡ ಟಚ್ ಮಾಡಬೇಡಿ... ಇಲ್ದಿದ್ರೆ!

ಆದರೆ ಚಾಟ್‌ನಿಂದ ಡಿಲೀಟ್‌ ಆದ ಚಿತ್ರ ಅಥವಾ ಫೈಲ್ ಅನ್ನು ಮರುಪಡೆಯುವುದು ಕಷ್ಟಕರವಾದ ಕೆಲಸವಾಗಿದೆ. ನೀವು ಅಪ್ಲಿಕೇಶನ್‌ನಿಂದ ನೇರವಾಗಿ WhatsApp ಫೋಟೋವನ್ನು ಡಿಲೀಟ್‌  ಮಾಡುವುದರಿಂದ ಅದನ್ನು ಕಳೆದುಕೊಳ್ಳುತ್ತೀರಿ. ನೀವು ತಪ್ಪಾಗಿ WhatsApp ನಿಂದ ಚಿತ್ರ ಅಥವಾ ಫೈಲ್ ಅನ್ನು ಡಿಲೀಟ್‌  ಮಾಡಿದ್ದರೆ, ಅವುಗಳನ್ನು ಮರುಪಡೆಯಲು ಹಲವಾರು ಮಾರ್ಗಗಳಿವೆ.  

WhatsApp, ಡೀಫಾಲ್ಟ್ ಆಗಿ ನಿಮ್ಮ ಚಾಟ್‌ಗಳಿಂದ ಫೋಟೋಗಳನ್ನು ನಿಮ್ಮ Android ಫೋನ್‌ ಅಥವಾ iPhone ಎರಡರಲ್ಲೂ ಡೌನ್‌ಲೋಡ್ ಮಾಡುತ್ತದೆ. ಆದ್ದರಿಂದ ಡಿಲೀಟ್‌ ಆದ WhatsApp ಫೋಟೋಗಳನ್ನು ಮರುಪಡೆಯಲು ನೀವು ಮೊದಲು ನಿಮ್ಮ ಫೋನ್‌ನಲ್ಲಿ ಫೋಟೋಗಳ ಅಪ್ಲಿಕೇಶನ್ ಅನ್ನು ಪರಿಶೀಲಿಸಬೇಕಾಗುತ್ತದೆ. ನೀವು Android ಬಳಕೆದಾರರಾಗಿದ್ದರೆ, ನೀವು ಗ್ಯಾಲರಿ ಅಥವಾ Google ಫೋಟೋಗಳ ಅಪ್ಲಿಕೇಶನ್ ಅನ್ನು ನೋಡಬಹುದು. ಐಫೋನ್ ಬಳಕೆದಾರರು ಫೋಟೋಗಳಲ್ಲಿ ನೋಡಬೇಕು. 

ಆದಾಗ್ಯೂ, ಡಿಲೀಟ್‌ ಆದ WhatsApp ಫೋಟೋಗಳನ್ನುನೀವು ಪಡೆಯದಿದ್ದರೆ ಮತ್ತು ನಿಮ್ಮ ಫೋನ್‌ನಲ್ಲಿ ಕ್ಲೌಡ್ ಸಂಗ್ರಹಣೆಯಲ್ಲಿ ಪರಿಶೀಲಿಸಿ. ಫೋಟೋಗಳನ್ನು ಹುಡುಕಲು ನಿಮ್ಮ ಕ್ಲೌಡ್ ಸ್ಟೋರೇಜ್‌ನಲ್ಲಿ ನೀವು ಕ್ಯಾಮರಾ ಅಪ್‌ಲೋಡ್‌ಗಳು, ಕ್ಯಾಮರಾ ರೋಲ್ ಅಥವಾ ಅಂತಹುದೇ ಫೋಲ್ಡರ್‌ನಲ್ಲಿ ಪರಿಶೀಲಿಸಬಹುದು. ಅಲ್ಲಿ ನೀವು ಡಿಲೀಟ್‌ ಆದ ನಿಮ್ಮ ಫೋಟೋಗಳನ್ನು ಪಡೆಯಬಹುದು.

ಇದನ್ನೂ ಓದಿ : ಒಮ್ಮೆ ರಿಚಾರ್ಜ್ ಮಾಡಿದರೆ ಒಂದು ವರ್ಷ ನಿರಾಳವಾಗಿರಬಹುದು.! ವೊಡಾಫೋನ್ ತಂದಿದೆ ಬೆಸ್ಟ್ ರಿಚಾರ್ಜ್ ಪ್ಲಾನ್

ಮತ್ತೊಂದು ವಿಧಾನ ಎಂದರೆ ನೀವು Android (Google ಡ್ರೈವ್) ಮತ್ತು iOS (iCloud) ಎರಡೂ ಸಾಧನಗಳಲ್ಲಿ WhatsApp ಡೇಟಾ ಬ್ಯಾಕಪ್ ಆಯ್ಕೆಯನ್ನು ಕಾಣಬಹುದು. ನಿಮ್ಮ ಚಾಟ್‌ಗಳು ಮತ್ತು ಫೋಟೋಗಳನ್ನು ಬ್ಯಾಕಪ್ ಮಾಡಿದರೆ ಅವುಗಳನ್ನು ಮರುಪಡೆಯಲು ನಿಮಗೆ ಸುಲಭವಾಗುತ್ತದೆ. ಚಾಟ್ ಬ್ಯಾಕಪ್ ರಚಿಸಲು ನೀವು ನಿಮ್ಮ ಫೋನ್‌ನಲ್ಲಿ WhatsApp ಅನ್ನು ತೆರೆಯಬೇಕು, ಸೆಟ್ಟಿಂಗ್‌ಗೆ ಹೋಗಿ ನಂತರ ಚಾಟ್‌ಗೆ ಹೋಗಿ ನಂತರ ಚಾಟ್ ಬ್ಯಾಕಪ್ ಅನ್ನು ಟ್ಯಾಪ್ ಮಾಡಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News