Google Play Store: ಪ್ರಚಲಿತ Smart TV App ನಿಷೇಧಿಸಿದ Google, ನಿಮ್ಮ ಬಳಿಯೂ ಇದ್ದರೆ ತಕ್ಷಣ ಡಿಲೀಟ್ ಮಾಡಿ

Google Play Store ಇತ್ತೀಚೆಗೆ ತನ್ನ ಪ್ಲಾಟ್‌ಫಾರ್ಮ್‌ನಿಂದ ಎರಡು ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಇದರಲ್ಲಿನ ಒಂದು ಅಪ್ಲಿಕೆಶನ್  ಅನ್ನು ಜನರು ಸಾಮಾನ್ಯವಾಗಿ ಪ್ಲೇ ಸ್ಟೋರ್‌ನಲ್ಲಿ ಹುಡುಕುತ್ತಲೇ ಇರುತ್ತಾರೆ. 

Written by - Nitin Tabib | Last Updated : Nov 15, 2021, 11:39 AM IST
  • ನಿಮ್ಮ ಫೋನ್ ನಲ್ಲಿಯೂ ಕೂಡ ಈ ಎರಡು ಆಪ್ ಗಳಿವೆಯಾ?
  • ಒಂದು ವೇಳೆ ಇದ್ದರೆ ಆ ಆಪ್ ಗಳನ್ನು ತಕ್ಷಣಕ್ಕೆ ತೆಗೆದುಹಾಕಿ
  • ಈ ಆಪ್ ಗಳಲ್ಲಿ ಆಂಟಿ ವೈರಸ್ ಗೂ ಸಿಗದ ರೀತಿಯಲ್ಲಿ ಎನ್ಕ್ರಿಪ್ಟ್ ಮಾಡಲಾಗಿರುವ ಅಪಾಯಕಾರಿ ವೈರಸ್ ಇದೆ
Google Play Store: ಪ್ರಚಲಿತ Smart TV App ನಿಷೇಧಿಸಿದ Google, ನಿಮ್ಮ ಬಳಿಯೂ ಇದ್ದರೆ ತಕ್ಷಣ ಡಿಲೀಟ್ ಮಾಡಿ title=
Google Play Store (File Photo)

Google Play Store ಇತ್ತೀಚೆಗೆ ತನ್ನ ಪ್ಲಾಟ್‌ಫಾರ್ಮ್‌ನಿಂದ ಎರಡು ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಇದರಲ್ಲಿನ ಒಂದು ಅಪ್ಲಿಕೆಶನ್  ಅನ್ನು ಜನರು ಸಾಮಾನ್ಯವಾಗಿ ಪ್ಲೇ ಸ್ಟೋರ್‌ನಲ್ಲಿ ಹುಡುಕುತ್ತಲೇ ಇರುತ್ತಾರೆ. ವಾಸ್ತವದಲ್ಲಿ , ಕಂಪನಿಯು ತೆಗೆದುಹಾಕಿರುವ ಎರಡು ಅಪ್ಲಿಕೇಶನ್‌ಗಳೆಂದರೆ Smart TV remote ಮತ್ತು Halloween Coloring ಗಳಾಗಿವೆ. Kasperskyಯ ಭದ್ರತಾ ವಿಶ್ಲೇಷಕ ಟಟ್ಯಾನಾ ಶಿಶ್ಕೋವಾ ಈ ಎರಡು ಅಪ್ಲಿಕೇಶನ್‌ಗಳ ಹೆಸರನ್ನು ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ. ಈ ಆ್ಯಪ್‌ಗಳು ಜೋಕರ್ ಮಾಲ್‌ವೇರ್‌ನಿಂದ ಪೀಡಿತವಾಗಿವೆ ಎಂದು ಶಿಶ್ಕೋವಾ ಹೇಳಿದ್ದಾರೆ.

ಜೋಕರ್ ಮಾಲ್ವೇರ್ ಎಂದರೇನು
ಜೋಕರ್ ಮಾಲ್‌ವೇರ್ ಅಪಾಯಕಾರಿ (Scam Alert) ಮತ್ತು ಜನಪ್ರಿಯ ಮಾಲ್‌ವೇರ್ ಆಗಿದೆ. ಇದು ಬಳಕೆದಾರರಿಗೆ ತಿಳಿಯದೆ ಪ್ರೀಮಿಯಂ ಕಂಟೆಂಟ್ ಗೆ ಚಂದಾದಾರಿಕೆಯನ್ನು ನೀಡುತ್ತದೆ. ವರದಿಯ ಪ್ರಕಾರ, ತನಿಖೆಯಲ್ಲಿ, resources/assets/kup3x4nowz ಫೈಲ್ ಅನ್ನು ಸ್ಮಾರ್ಟ್ ಟಿವಿ ರಿಮೋಟ್ ಅಪ್ಲಿಕೇಶನ್‌ನಲ್ಲಿ ಅಡಗಿದೆ ಮತ್ತು q7y4prmugi ಹೆಸರಿನ ಫೈಲ್ ಅನ್ನು ಹ್ಯಾಲೋವೀನ್ ಕಲರಿಂಗ್ ಅಪ್ಲಿಕೇಶನ್‌ನಲ್ಲಿ ಅಡಗಿದೆ ಎಂದು ಕಂಡುಬಂದಿದೆ. ಆ್ಯಪ್‌ಗಳಲ್ಲಿ ಅಡಗಿರುವ ಅಪಾಯಕಾರಿ ಫೈಲ್‌ಗಳನ್ನು ಯಾವುದೇ ಆಂಟಿವೈರಸ್‌ ಸಿಗದ  ರೀತಿಯಲ್ಲಿ ಎನ್‌ಕ್ರಿಪ್ಟ್ ಮಾಡಲಾಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಇದನ್ನೂ ಓದಿ-iPhone 13ರ ಮೇಲೆ ಸಿಗಲಿದೆ ಹಿಂದೆದೂ ಸಿಗದ Discount, ಸಿಗಲಿದೆ 37 ಸಾವಿರ ರೂ ಗಳ ಭರ್ಜರಿ ರಿಯಾಯಿತಿ

ನೀವೂ ಕೂಡ ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸ್ಮಾರ್ಟ್ ಟಿವಿ ರಿಮೋಟ್' ಮತ್ತು 'ಹ್ಯಾಲೋವೀನ್ ಕಲರಿಂಗ್' ಆಪ್ ಗಳನ್ನೂ ಡೌನ್ಲೋಡ್ ಮಾಡಿದ್ದರೆ, ತಕ್ಷಣ ಅವುಗಳನ್ನು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ತಕ್ಷಣವೇ ಅವುಗಳನ್ನು ಅನ್ ಇನ್ಸ್ಟಾಲ್ ಮಾಡಿ. ನಿಮ್ಮ ಅನುಮತಿಯಿಲ್ಲದೆ ಈ ಅಪ್ಲಿಕೇಶನ್‌ಗಳು ಯಾವುದೇ ಪ್ರೀಮಿಯಂ ಸೇವೆಗೆ ಸೈನ್ ಅಪ್ ಮಾಡಿಲ್ಲ ಎಂಬುದನ್ನು ಸಹ ನೀವು ಪರಿಶೀಲಿಸಬೇಕು.

ಇದನ್ನೂ ಓದಿ-ಮಾರುಕಟ್ಟೆಗೆ ಲಗ್ಗೆ ಇಡಲಿದೆ Redmiಯ ಈ ಸುಂದರ 5G ಸ್ಮಾರ್ಟ್‌ಫೋನ್, ವೈಶಿಷ್ಟ್ಯಗಳನ್ನು ತಿಳಿಯಿರಿ

ಈ ರೀತಿ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಿ
1. ಎಲ್ಲಕ್ಕಿಂತ ಮೊದಲು ನೀವು ಡೌನ್‌ಲೋಡ್ ಮಾಡದ ಯಾವುದಾದರೊಂದು ಅಪ್ಲಿಕೇಶನ್ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇದೆಯಾ ಎಂಬುದನ್ನು ಪರಿಶೀಲಿಸಿ. ಒಂದು ವೇಳೆ ಇದ್ದರೆ ಅಂತಹ ಆಪ್ ಅನ್ನು ತಕ್ಷಣಕ್ಕೆ ಡಿಲೀಟ್ ಮಾಡಿ. 

2. ನಿಮ್ಮ ಫೋನ್ ನಲ್ಲಿನ ಕೆಲ ಆ್ಯಪ್‌ಗಳು ಅಗತ್ಯಕ್ಕಿಂತ ಹೆಚ್ಚು ಡೇಟಾವನ್ನು ಬಳಸುತ್ತಿವೆಯೇ ಎಂಬುದನ್ನು ಸಹ ಪರಿಶೀಲಿಸಿ, ಅಂತಹ ಅಪ್ಲಿಕೇಶನ್‌ಗಳನ್ನು ಸಹ ತೆಗೆದುಹಾಕಿ.

3. ಹೊಸ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು, ದಯವಿಟ್ಟು ಆಪ್ ಸ್ಟೋರ್‌ನಲ್ಲಿ ಅದರ ವಿಮರ್ಶೆಗಳನ್ನು ಓದಿ.

ಇದನ್ನೂ ಓದಿ-Jeff Bezos Predictions: ಬಾಹ್ಯಾಕಾಶದಲ್ಲಿ ಜನಿಸುವ ಮನುಷ್ಯರು ಭೂಮಿಗೆ ರಜೆ ಕಳೆಯಲು ಬರುತ್ತಾರಂತೆ! ಹೇಗೆ ಅಂತೀರಾ? ಈ ಸುದ್ದಿ ಓದಿ ಗೊತ್ತಾಗುತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News