WhatsApp ನೀಡುತ್ತಿದೆ ಹಣ ಗಳಿಸುವ ಸುವರ್ಣಾವಕಾಶ .! ಹೇಗೆ ಗೊತ್ತಾ ?

Earn Money Online On Whatsapp:   ವಾಟ್ಸಾಪ್  ಮೂಲಕ ಹಣ ಗಳಿಸುವುದು ಕೂಡಾ ಸಾಧ್ಯವಾಗುತ್ತಿದೆ.  ವಾಟ್ಸಾಪ್ ಮೂಲಕ ಹಣ ಗಳಿಸಬಹುದು ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ ಎನ್ನುವುದು ಕೂಡಾ ಸತ್ಯ.   

Written by - Ranjitha R K | Last Updated : Dec 6, 2022, 11:02 AM IST
  • ವಾಟ್ಸಾಪ್ ಬಹುತೇಕ ಜನರು ಉಪಯೋಗಿಸುವ ಮೆಸೇಜಿಂಗ್ ಅಪ್ಲಿಕೇಶನ್
  • ವಾಟ್ಸಾಪ್ ಮೂಲಕ ಹಣ ಗಳಿಸುವುದು ಕೂಡಾ ಸಾಧ್ಯವಾಗುತ್ತಿದೆ.
  • ಇಲ್ಲಿ ನಿಯಮ ಪಾಲನೆ ಬಹಳ ಮುಖ್ಯ
WhatsApp ನೀಡುತ್ತಿದೆ ಹಣ ಗಳಿಸುವ ಸುವರ್ಣಾವಕಾಶ .! ಹೇಗೆ  ಗೊತ್ತಾ ?  title=
Earn Money Online On Whatsap

ಬೆಂಗಳೂರು : ವಾಟ್ಸಾಪ್ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಉಪಯೋಗಿಸುವ ಮೆಸೇಜಿಂಗ್ ಅಪ್ಲಿಕೇಶನ್. ಇದು ಮೆಸೇಜಿಂಗ್ ಆ್ಯಪ್‌ ಆಗಿದ್ದರೂ, ಈ ಅಪ್ಲಿಕೇಶನ್‌ ಅನ್ನು ಇನ್ನೂ ಅನೇಕ ಕೆಲಸಗಳಿಗಾಗಿ ಬಳಸಲಾಗುತ್ತದೆ. ಚಾಟ್ ಮಾಡುವುದಕ್ಕೆ, ಕರೆ ಮಾಡುವುದಕ್ಕೆ ಅಥವಾ ಹಣ ವರ್ಗಾವಣೆ ಮಾಡುವುದಕ್ಕೆ ವಾಟ್ಸಾಪ್  ಅನ್ನು ಬಳಸಲಾಗುತ್ತದೆ. ಇವೆಲ್ಲದರ ಜೊತೆಗೆ ವಾಟ್ಸಾಪ್  ಮೂಲಕ ಹಣ ಗಳಿಸುವುದು ಕೂಡಾ ಸಾಧ್ಯವಾಗುತ್ತಿದೆ.  ವಾಟ್ಸಾಪ್ ಮೂಲಕ ಹಣ ಗಳಿಸಬಹುದು ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ ಎನ್ನುವುದು ಕೂಡಾ ಸತ್ಯ. 

ಇಲ್ಲಿ ನಿಯಮಗಳನ್ನು  ಪಾಲಿಸುವುದು ಬಹಳ ಮುಖ್ಯ : 
WhatsApp ಮೂಲಕ ಹಣ ಸಂಪಾದಿಸುವುದು ಕಾನೂನುಬದ್ಧವಾಗಿದೆ. ಇದಕ್ಕೆ ಯಾವುದೇ ಕಾನೂನು ಅಡೆತಡೆಗಳಿಲ್ಲ.   ಆದರೆ ಇದಕ್ಕಾಗಿ ಕೆಲವು ನಿಯಮಗಳನ್ನು ಅನುಸರಿಸಬೇಕು. ವಾಟ್ಸಾಪ್  ಮೂಲಕ ಯಾವುದೇ ಉತ್ಪನ್ನವನ್ನು ಮರುಮಾರಾಟ ಮಾಡುವುದಾದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಬಳಕೆದಾರರೇ ವಹಿಸಿಕೊಳ್ಳಬೇಕು. ಕಾನೂನು ಬಾಹಿರವಾಗಿ ಯಾವುದೇ ಉತ್ಪನ್ನಗಳನ್ನು ವಾಟ್ಸಾಪ್  ನಲ್ಲಿ ಮಾರಾಟ ಮಾಡುವಂತಿಲ್ಲ. ಡ್ರಗ್ಸ್, ಆಲ್ಕೋಹಾಲ್, ಸಿಗರೇಟ್,  ಸಂಪ್ಲಿಮೆಂಟ್ಸ್  ಶಸ್ತ್ರಾಸ್ತ್ರಗಳು, ಆರೋಗ್ಯ ಉತ್ಪನ್ನಗಳನ್ನು ವಾಟ್ಸಾಪ್ ಮೂಲಕ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡುತ್ತಿರುವುದು ಕಂಡುಬಂದರೆ ವಾಟ್ಸಾಪ್ ಖಾತೆಯನ್ನು ನಿಷೇಧಿಸಲಾಗುವುದು. 

ಇದನ್ನೂ ಓದಿ : ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ .! ನಿಮ್ಮ ಫೋನ್ ಈ ರೀತಿ ಹ್ಯಾಕ್ ಆಗಿ ಬಿಡಬಹುದು.!

ಹಣವನ್ನು ಹೇಗೆ ಗಳಿಸುವುದು ? :
WhatsAppನೊಂದಿಗೆ ವ್ಯಾಪಾರ ಮಾಡಬೇಕಾದರೆ ಬಳಕೆದಾರರು ಮೊದಲು WhatsApp ಬ್ಯುಸಿನೆಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ನಂಬರ್ ಅನ್ನು ವೆರಿಫೈ ಮಾಡಿ ಬ್ಯುಸಿನೆಸ್ ಹೆಸರನ್ನು ನಮೂದಿಸಬೇಕು. ವ್ಯಾಪಾರದ ಹೆಸರನ್ನು ಸೆಟ್ ಮಾಡಲು ಸೆಟ್ಟಿಂಗ್‌ಗಳಿಗೆ ಹೋಗಿ ಬ್ಯುಸಿನೆಸ್ ನೇಮ್ ಮೇಲೆ ಕ್ಲಿಕ್ ಮಾಡಿ, ವ್ಯಾಪಾರದ ಹೆಸರನ್ನು ನಮೂದಿಸಬೇಕು. ನಂತರ ವಿಳಾಸ, ವೆಬ್‌ಸೈಟ್ ಮತ್ತು ಕೆಟ ಗರಿಯನ್ನು ಸೆಟ್ ಮಾಡಬೇಕು. ಇಲ್ಲಿ ನೀವು ಅನೇಕ ವಿಷಯಗಳನ್ನು ಕಸ್ಟಮೈಸ್ ಮಾಡಬಹುದು. ಜನರಿಗೆ ನಿಮ್ಮ ಬ್ಯುಸಿನೆಸ್ ಬಗ್ಗೆ ತಿಳಿಸಲು   ಗ್ರೂಪ್ ಮಾಡಿ ಅಥವಾ ಕಾಂಟಾಕ್ಟ್ ಪಟ್ಟಿಯಲ್ಲಿರುವ ಜನರೊಂದಿಗೆ  ಶೇರ್ ಮಾಡಿಕೊಂಡು ಮಾಡಬಹುದು. 

ಈ ಪ್ರಕ್ರಿಯೆಯ ನಂತರ ನೀವು ನಿಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು. ನೀವು ಮನೆಯಲ್ಲಿರಲಿ ಅಥವಾ ಯಾವುದೇ ಊರಿನಲ್ಲಿರಲಿ ವಾಟ್ಸಾಪ್ ಮೂಲಕ ವ್ಯಾಪಾರ ಮಾಡಬಹುದು. ಆದರೆ ಇದಕ್ಕಾಗಿ ನಿಮಗೆ ಇಂಟರ್ನೆಟ್ ನ ಅಗತ್ಯವಿರುತ್ತದೆ. ಇನ್ನು ಎಷ್ಟು ಹಣ ಗಳಿಸುತ್ತೀರಿ ಎನ್ನುವುದು ನೀವು ಹಾಕುವ ಶ್ರಮದ ಮೇಲೆ ನಿರ್ಧರಿತವಾಗಿದೆ. ಈಗಾಗಲೇ ಈ ಆ್ಯಪ್‌ನಿಂದ ಹಲವು ಮಂದಿ ಲಕ್ಷಗಟ್ಟಲೆ ಆದಾಯವನ್ನೂ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : ನಿಮ್ಮ ಬಳಿ ಈ ಡಿವೈಸ್ ಇದ್ದರೆ ಬಿಸಿಲಿನಿಂದಲೇ ಚಾರ್ಜ್ ಆಗುತ್ತದೆ ಸ್ಮಾರ್ಟ್ ಫೋನ್ ಮತ್ತು ಲ್ಯಾಪ್‌ಟಾಪ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News