BSNL Cheapest Plan: 200 ಕ್ಕಿಂತ ಕಡಿಮೆ ಬೆಲೆಯಲ್ಲಿ 100 ದಿನಗಳವರೆಗೆ ಅದ್ಭುತ ಪ್ರಯೋಜನ

BSNL Cheapest Plan: ಸರ್ಕಾರಿ ಟೆಲಿಕಾಂ ಕಂಪನಿ BSNL,ತನ್ನ ಗ್ರಾಹಕರಿಗೆ 200 ರೂಪಾಯಿಗಿಂತ ಕಡಿಮೆ ಬೆಲೆಯ ಹೊಸ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ ಈ ಪ್ಲಾನ್ ನಲ್ಲಿ 100 ದಿನಗಳವರೆಗೆ  ಹಲವು ಪ್ರಯೋಜನಗಳನ್ನು ಕೂಡಾ ನೀಡುತ್ತಿದೆ. 

Written by - Ranjitha R K | Last Updated : Sep 12, 2022, 02:30 PM IST
  • BSNLನ ಪ್ರಿಪೇಯ್ಡ್ ಯೋಜನೆಯು 200 ರೂ.ಗಿಂತ ಕಡಿಮೆಯದ್ದಾಗಿದೆ.
  • ಈ ರೀಚಾರ್ಜ್ ಪ್ಲಾನ್ ಬೆಲೆ ಕೇವಲ 197 ರೂ.
  • 200 ರೂ.ಗಿಂತ ಕಡಿಮೆ ಮೊತ್ತದಲ್ಲಿ 100 ದಿನಗಳವರೆಗೆ ಪ್ರಯೋಜನ
BSNL Cheapest Plan: 200 ಕ್ಕಿಂತ ಕಡಿಮೆ ಬೆಲೆಯಲ್ಲಿ 100 ದಿನಗಳವರೆಗೆ ಅದ್ಭುತ ಪ್ರಯೋಜನ  title=
BSNL Cheapest Plan (file photo)

BSNL Cheapest Plan : ಖಾಸಗಿ ಟೆಲಿಕಾಂ ಕಂಪನಿಗಳು, Jio, Airtel ಮತ್ತು Vi ತಮ್ಮ ಗ್ರಾಹಕರಿಗೆ ಹಲವು ಹೊಸ ಹೊಸ ಯೋಜನೆಗಳನ್ನು ನೀಡುತ್ತಲೇ ಬಂದಿವೆ. ಆದರೆ ಬಿಎಸ್ ಎನ್ ಎಲ್ ನ ಈ ಪ್ಲಾನ್ ಎಲ್ಲಾ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸರಿಯಾದ ಟಕ್ಕರ್ ನೀಡುತ್ತಿದೆ.   ಸರ್ಕಾರಿ ಟೆಲಿಕಾಂ ಕಂಪನಿ BSNL,ತನ್ನ ಗ್ರಾಹಕರಿಗೆ 200 ರೂಪಾಯಿಗಿಂತ ಕಡಿಮೆ ಬೆಲೆಯ ಹೊಸ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ ಈ ಪ್ಲಾನ್ ನಲ್ಲಿ 100 ದಿನಗಳವರೆಗೆ  ಹಲವು ಪ್ರಯೋಜನಗಳನ್ನು ಕೂಡಾ ನೀಡುತ್ತಿದೆ. 

BSNL ಅಗ್ಗದ ಯೋಜನೆ :
ಬಿಎಸ್ ಎನ್ ಎಲ್  ಪ್ರಿಪೇಯ್ಡ್ ಯೋಜನೆಯು 200 ರೂ.ಗಿಂತ ಕಡಿಮೆಯದ್ದಾಗಿದೆ. ಅಂದರೆ ಈ ರೀಚಾರ್ಜ್ ಪ್ಲಾನ್ ಬೆಲೆ ಕೇವಲ 197 ರೂ. ಈ ಯೋಜನೆಯ ವಿಶೇಷತೆಯೆಂದರೆ ಇದು ಕಡಿಮೆ ಬೆಲೆಯಲ್ಲಿ ಅನೇಕ ಪ್ರಯೋಜನಗಳನ್ನು ನೀಡುತ್ತಿದೆ. ಈ ಯೋಜನೆಗೆ ಹೋಲಿಸಿದರೆ ಖಾಸಗಿ ಕಂಪನಿಗಳಾದ ಜಿಯೋ, ಏರ್‌ಟೆಲ್ ಅಥವಾ ವೊಡಾಫೋನ್ ಐಡಿಯಾ  ಇಷ್ಟು ಅಗ್ಗದ ಬೆಲೆಯ ರೀಚಾರ್ಜ್ ಯೋಜನೆಯನ್ನು ಇಲ್ಲಿಯವರೆಗೆ ನೀಡಿಲ್ಲ. 

ಇದನ್ನೂ ಓದಿ : ಇನ್ನು WhatsApp ಕಾಲ್ ಮಾಡಿದರೂ ಹಣ ಪಾವತಿಸಬೇಕು.! ಸರ್ಕಾರದ ಕ್ರಮದ ಹಿಂದಿದೆ ಈ ಕಾರಣ

200 ರೂ.ಗಿಂತ ಕಡಿಮೆ ಮೊತ್ತದಲ್ಲಿ 100 ದಿನಗಳವರೆಗೆ ಪ್ರಯೋಜನ :
197 ರೂಪಾಯಿ ಪ್ಲಾನ್‌ನ ವ್ಯಾಲಿಡಿಟಿ 100 ದಿನಗಳವರೆಗೆ ಇರಲಿದೆ. 100 ದಿನಗಳ ಈ ಯೋಜನೆಯಲ್ಲಿ ಬಳಕೆದಾರರಿಗೆ ಅನಿಯಮಿತ ಡೇಟಾದ ಜೊತೆಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮಾಡುವ ಸೌಲಭ್ಯವನ್ನು ಕೂಡಾ ನೀಡಲಾಗುತ್ತಿದೆ. ಪ್ರತಿದಿನ 2GB ಡೇಟಾವನ್ನು ಬಳಸಿದ ನಂತರ, ಇಂಟರ್ನೆಟ್‌ಗೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ. ಆದರೆ, ಡಾಟಾ ಸ್ಪೀಡ್ ಮಾತ್ರ 40Kbpsಗೆ ಕಡಿಮೆಯಾಗುತ್ತದೆ. ಈ ಯೋಜನೆಯು ದಿನಕ್ಕೆ 100 SMS ಸೌಲಭ್ಯದೊಂದಿಗೆ ಬರುತ್ತದೆ. ಆದರೆ ಇದರ ಲಾಭವನ್ನು ಮೊದಲ 18 ದಿನಗಳವರೆಗೆ ಮಾತ್ರ ಪಡೆಯಬಹುದು. 

ಇದನ್ನೂ ಓದಿ :   ಇನ್ನು WhatsApp ಕಾಲ್ ಮಾಡಿದರೂ ಹಣ ಪಾವತಿಸಬೇಕು.! ಸರ್ಕಾರದ ಕ್ರಮದ ಹಿಂದಿದೆ ಈ ಕಾರಣ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News