Team India ಪರ 212 ವಿಕೆಟ್ ಕಬಳಿಸಿರುವ ಈ ಆಟಗಾರನಿಗೆ ಇನ್ನೂ ಸಿಕ್ಕಿಲ್ಲ ಟೆಸ್ಟ್ ಆಡುವ ಅವಕಾಶ! ಹೆಸರು ಕೇಳಿದ್ರೆ ಶಾಕ್ ಆಗ್ತೀರ

Indian Test Team: ಟೀಂ ಇಂಡಿಯಾದಲ್ಲಿಯೂ ಅಂತಹ ಒಬ್ಬ ಆಟಗಾರನಿದ್ದಾರೆ. ಅವರ ವೃತ್ತಿಜೀವನವು ಸುಮಾರು 7 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದರೂ ಸಹ ಒಮ್ಮೆಯೂ ಟೆಸ್ಟ್ ಆಡುವ ಅವಕಾಶ ಸಿಕ್ಕಿಲ್ಲ. ಈ ಆಟಗಾರರು ಇದುವರೆಗೆ ಏಕದಿನ ಹಾಗೂ ಟಿ20ಯಲ್ಲಿ ಟೀಂ ಇಂಡಿಯಾ ಪರ ಒಟ್ಟು 212 ವಿಕೆಟ್ ಪಡೆದಿದ್ದಾರೆ

Written by - Bhavishya Shetty | Last Updated : Jun 4, 2023, 01:13 PM IST
    • ಕೆಲವೇ ಕೆಲವು ಆಟಗಾರರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ
    • ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದರೂ ಸಹ ಒಮ್ಮೆಯೂ ಟೆಸ್ಟ್ ಆಡುವ ಅವಕಾಶ ಸಿಕ್ಕಿಲ್ಲ.
    • ಇದುವರೆಗೆ ಏಕದಿನ ಹಾಗೂ ಟಿ20ಯಲ್ಲಿ ಟೀಂ ಇಂಡಿಯಾ ಪರ ಒಟ್ಟು 212 ವಿಕೆಟ್ ಪಡೆದಿದ್ದಾರೆ.
Team India ಪರ 212 ವಿಕೆಟ್ ಕಬಳಿಸಿರುವ ಈ ಆಟಗಾರನಿಗೆ ಇನ್ನೂ ಸಿಕ್ಕಿಲ್ಲ ಟೆಸ್ಟ್ ಆಡುವ ಅವಕಾಶ! ಹೆಸರು ಕೇಳಿದ್ರೆ ಶಾಕ್ ಆಗ್ತೀರ title=
Yuzvendra Chahal

Indian Test Team: ಟೆಸ್ಟ್ ಪಂದ್ಯ ಕ್ರಿಕೆಟ್‌ ನ ದೊಡ್ಡ ಸ್ವರೂಪವಾಗಿದೆ. ಟೆಸ್ಟ್ ಕ್ರಿಕೆಟ್‌ ನಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. ಆದರೆ ಕೆಲವೇ ಕೆಲವು ಆಟಗಾರರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಕೆಲವರು ಏಕದಿನ ಮತ್ತು ಟಿ20ಯಲ್ಲಿ ಯಶಸ್ವಿಯಾಗಿದ್ದರೂ ಸಹ ಟೆಸ್ಟ್ ಪದಾರ್ಪಣೆ ಮಾಡಲು ಅವಕಾಶ ಸಿಕ್ಕಿರುವುದಿಲ್ಲ.

ಇದನ್ನೂ ಓದಿ: ಈತ ಆಸೀಸ್’ಗೆ ಬಲ, Team Indiaಗೆ ಹಾಲಾಹಲ! ಈತನ ನಾಯಕತ್ವದಿಂದಲೇ ನಿವೃತ್ತಿ ಘೋಷಿಸಿದ್ರು ಧೋನಿ…

ಟೀಂ ಇಂಡಿಯಾದಲ್ಲಿಯೂ ಅಂತಹ ಒಬ್ಬ ಆಟಗಾರನಿದ್ದಾರೆ. ಅವರ ವೃತ್ತಿಜೀವನವು ಸುಮಾರು 7 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದರೂ ಸಹ ಒಮ್ಮೆಯೂ ಟೆಸ್ಟ್ ಆಡುವ ಅವಕಾಶ ಸಿಕ್ಕಿಲ್ಲ. ಈ ಆಟಗಾರರು ಇದುವರೆಗೆ ಏಕದಿನ ಹಾಗೂ ಟಿ20ಯಲ್ಲಿ ಟೀಂ ಇಂಡಿಯಾ ಪರ ಒಟ್ಟು 212 ವಿಕೆಟ್ ಪಡೆದಿದ್ದಾರೆ.

ಐಪಿಎಲ್ 2016ರಿಂದ ಟೀಂ ಇಂಡಿಯಾಗೆ ಮಾಂತ್ರಿಕ ಸ್ಪಿನ್ನರ್ ಸಿಕ್ಕಿದ್ದಾರೆ. ಈ ಆಟಗಾರ ಅಮೋಘ ಆಟ ಪ್ರದರ್ಶಿಸುವ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಗಳಿಸಿದ್ದಾರೆ. ಈ ಆಟಗಾರ ಬೇರೆ ಯಾರೂ ಅಲ್ಲ ಯುಜ್ವೇಂದ್ರ ಚಾಹಲ್. ಇವರು ಟೀಂ ಇಂಡಿಯಾ ಪರ ODI ಮತ್ತು T20 ಮಾದರಿಯಲ್ಲಿ ಹಲವು ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಯುಜ್ವೇಂದ್ರ ಚಾಹಲ್ ಟಿ20ಯಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಯುಜ್ವೇಂದ್ರ ಚಾಹಲ್ 2016 ರಲ್ಲಿ ಟೀಂ ಇಂಡಿಯಾ ಪರ ಮೊದಲ ODI ಆಡಿದ್ದರು. ಈ ವರ್ಷ ಟಿ20ಗೆ ಪದಾರ್ಪಣೆ ಮಾಡಿದ್ದರು. ಟೀಂ ಇಂಡಿಯಾ ಪರ ಇದುವರೆಗೆ 72 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 121 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ 75 ಟಿ20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 91 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಈ ಶ್ರೇಷ್ಠ ದಾಖಲೆಯ ನಂತರವೂ ಯುಜ್ವೇಂದ್ರ ಚಾಹಲ್ ಟೆಸ್ಟ್ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡಿಲ್ಲ.

ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಅತ್ಯಂತ ಯಶಸ್ವಿ ಬೌಲರ್!

ಯುಜ್ವೇಂದ್ರ ಚಾಹಲ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಐಪಿಎಲ್‌ ನ ಒಂದೇ ಸೀಸನ್ ನಲ್ಲಿ ಅತಿ ಹೆಚ್ಚು ವಿಕೆಟ್‌ ಗಳನ್ನು ಪಡೆಯುವ ವಿಷಯದಲ್ಲಿ ವೇಗದ ಬೌಲರ್ ಡ್ವೇನ್ ಬ್ರಾವೋ ಅವರನ್ನು ಮೀರಿಸಿದ್ದಾರೆ. ಬ್ರಾವೋ ಐಪಿಎಲ್‌ ನಲ್ಲಿ 183 ವಿಕೆಟ್‌ ಗಳನ್ನು ಪಡೆದಿದ್ದರು.

ಇದನ್ನೂ ಓದಿ: WTC Finalನಲ್ಲಿ ವಿವಿ ರಿಚರ್ಡ್ಸ್-ಸೆಹ್ವಾಗ್ ದಾಖಲೆಯನ್ನೇ ಮುರಿದು ಇತಿಹಾಸ ಸೃಷ್ಟಿಸಲಿದ್ದಾರೆ ಟೀಂ ಇಂಡಿಯಾದ ಈ ದಿಗ್ಗಜ!

ಇನ್ನು ಯುಜ್ವೇಂದ್ರ ಚಾಹಲ್ ಐಪಿಎಲ್‌ ನಲ್ಲಿ ಇದುವರೆಗೆ ಒಟ್ಟು 187 ವಿಕೆಟ್‌ ಗಳನ್ನು ಪಡೆದಿದ್ದಾರೆ. ಚಹಾಲ್ ಐಪಿಎಲ್ 2023ರ 14 ಪಂದ್ಯಗಳಲ್ಲಿ 21 ವಿಕೆಟ್ ಕಬಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News