Video Viral: ಮಗು ಕೈಯಿಂದ ಲಾಲಿಪಾಪ್ ಕದ್ದ ಸ್ಟಾರ್ ಕ್ರಿಕೆಟಿಗ! ಸಿಕ್ಕಿಬಿದ್ದಾಗ ಆತ ಮಾಡಿದ್ದೇನು ಗೊತ್ತಾ?

Yuzvendra Chahal funny Video: ಐಸಿಸಿ ಟಿ20 ವಿಶ್ವಕಪ್‌’ನಲ್ಲಿ ಭಾಗವಹಿಸಲು ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಯುಜ್ವೇಂದ್ರ ಚಾಹಲ್ ಅವರು ಭುವನೇಶ್ವರ್ ಕುಮಾರ್ ಅವರ ಮಗಳೊಂದಿಗೆ ಮೋಜು ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

Written by - Bhavishya Shetty | Last Updated : Apr 2, 2023, 05:51 PM IST
    • ಮಗು ಕೈಯಿಂದ ಲಾಲಿಪಾಪ್ ತೆಗೆದುಕೊಂಡ ಚಾಹಲ್, ಕಂದಮ್ಮನ ಜೊತೆ ಆಟವಾಡುತ್ತಿದ್ದಾರೆ.
    • ಕ್ರಿಕ್‌ ಟ್ರ್ಯಾಕರ್ ತಮ್ಮ ಅಧಿಕೃತ ಹ್ಯಾಂಡಲ್‌’ನಲ್ಲಿ ಇನ್‌ಸ್ಟಾಗ್ರಾಮ್ ರೀಲ್ ಅನ್ನು ಹಂಚಿಕೊಂಡಿದೆ.
    • ಮಗು ಸ್ಟ್ರಾಲರ್‌’ನಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಚಾಹಲ್, ಕೆಲವು ತಮಾಷೆಯ ಸನ್ನೆಗಳನ್ನು ಮಾಡುವುದನ್ನು ಕಾಣಬಹುದು
Video Viral: ಮಗು ಕೈಯಿಂದ ಲಾಲಿಪಾಪ್ ಕದ್ದ ಸ್ಟಾರ್ ಕ್ರಿಕೆಟಿಗ! ಸಿಕ್ಕಿಬಿದ್ದಾಗ ಆತ ಮಾಡಿದ್ದೇನು ಗೊತ್ತಾ?  title=
Yuzvendra Chahal

Yuzvendra Chahal funny Video: ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಮೇಲೆ ಮಗುವೊಂದು ಕಂಪ್ಲೇಟ್ ಕೊಡುವ ಹಂತಕ್ಕೆ ಬಂದಿದೆ. ಇದಕ್ಕೆ ಕಾರಣ ಅವರ ಈ ಕೃತ್ಯ, ಈ ವಿಡಿಯೋ ನೋಡಿದ್ರೆ ನಿಮಗೆ ಶಾಕ್ ಆಗದೆ ಇರದು.

ಯುಜ್ವೇಂದ್ರ ಚಾಹಲ್ ಅವರು ಭುವನೇಶ್ವರ್ ಕುಮಾರ್ ಅವರ ಮಗಳೊಂದಿಗೆ ಮೋಜು ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇಲ್ಲಿ ಮಗು ಕೈಯಿಂದ ಲಾಲಿಪಾಪ್ ತೆಗೆದುಕೊಂಡ ಚಾಹಲ್, ಕಂದಮ್ಮನ ಜೊತೆ ಆಟವಾಡುತ್ತಿದ್ದಾರೆ. ಈ ವಿಡಿಯೋಗೆ ತರಹೇವಾರಿ ಕಮೆಂಟ್ ಗಳು ಬಂದಿವೆ.

ಇದನ್ನೂ ಓದಿ: IPL 2023: ಇದು ನಿಮ್ಮ ಫೇವರೇಟ್ ಟೀಂ… ಈ ತಂಡದ ಹೆಸರಿನಲ್ಲಿದೆ IPL ಇತಿಹಾಸದ ಅತ್ಯುತ್ತಮ-ಕಳಪೆ ರೆಕಾರ್ಡ್

ಐಸಿಸಿ ಟಿ20 ವಿಶ್ವಕಪ್‌’ನಲ್ಲಿ ಭಾಗವಹಿಸಲು ಟೀಂ ಇಂಡಿಯಾ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾಗವಹಿಸಲು ಟೀಂ ಇಂಡಿಯಾ ತೆರಳುತ್ತಿದ್ದಂತೆ ಅವರನ್ನು ಬೆಂಬಲಿಸಲು ಅವರ ಕೆಲವು ಕುಟುಂಬ ಸದಸ್ಯರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದರು.

 
 
 
 

 
 
 
 
 
 
 
 
 
 
 

A post shared by CricTracker (@crictracker)

 

ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಟವಾಡಿ ರೋಚಕವಾಗಿ ಗೆಲುವು ಸಾಧಿಸಿತ್ತು.

ಈ ಸಂದರ್ಭದಲ್ಲಿ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರ ಮಗಳೊಂದಿಗೆ ಆಟವಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮ ಈ ವಿಡಿಯೋ ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಕಮೆಂಟ್, ಲೈಕ್ ಗಳ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕ್ರಿಕ್‌ ಟ್ರ್ಯಾಕರ್ ತಮ್ಮ ಅಧಿಕೃತ ಹ್ಯಾಂಡಲ್‌’ನಲ್ಲಿ ಇನ್‌ಸ್ಟಾಗ್ರಾಮ್ ರೀಲ್ ಅನ್ನು ಹಂಚಿಕೊಂಡಿದೆ. ಮಗು ಸ್ಟ್ರಾಲರ್‌’ನಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಚಾಹಲ್, ಕೆಲವು ತಮಾಷೆಯ ಸನ್ನೆಗಳನ್ನು ಮಾಡುವುದನ್ನು ಕಾಣಬಹುದು.

ಮಗುವಿಗೆ ಲಾಲಿಪಾಪ್ ತೋರಿಸಿ ಆಟವಾಡುತ್ತಿದ್ದಾರೆ. ಈ ತಮಾಷೆಯ ಕ್ಲಿಪ್’ಗೆ "ಲಾಲಿಪಾಪ್ ಕಳ್ಳ" ಎಂದು ಟ್ಯಾಗ್ ಮಾಡಲಾಗಿದೆ.

ಇದನ್ನೂ ಓದಿ: ಜಾಕ್ವೆಲಿನ್’ಗೆ ಕಿಸ್ ಕೊಟ್ಟು ತನ್ನ ಬಟ್ಟೆಯಲ್ಲೇ ತುಟಿ ಒರೆಸಿಕೊಂಡ ಸ್ಟಾರ್ ನಟ! ವಿಡಿಯೋ ನೋಡಿ

ಈಗಾಗಲೇ ಲಕ್ಷಾಂತರ ಮಂದಿ ಈ ವಿಡಿಯೋವನ್ನು ನೋಡಿದ್ದು, ಇದುವರೆಗೆ 97 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ.  ಚಾಹಲ್‌ನ ಮೋಜು-ಪ್ರೀತಿಯನ್ನು ಜನರು ಮೆಚ್ಚಿದ್ದರಿಂದ ಕಾಮೆಂಟ್ ವಿಭಾಗದಲ್ಲಿ ನಗುವಿನ ಎಮೋಜಿಗಳ ಸುರಿಮಳೆಯಾಗಿದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News