ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಸಾಧನೆ: ಒಂದೇ ಓವರ್‌ನಲ್ಲಿ 6 ವಿಕೆಟ್ ಪಡೆದ ದೆಹಲಿಯ ಯುವಕ..!

U19 ವಿಶ್ವಕಪ್‌ನಲ್ಲಿ ಯುಎಇ ತಂಡವನ್ನು ಪ್ರತಿನಿಧಿಸುವ ನಿರೀಕ್ಷೆಯಲ್ಲಿರುವ ಹರ್ಷಿತ್ ಸೇಠ್ ಅಪರೂಪದ ಸಾಧನೆ ಮಾಡಿದ್ದಾರೆ.

Written by - Puttaraj K Alur | Last Updated : Dec 14, 2021, 04:41 PM IST
  • ದುಬೈನಲ್ಲಿ ನಡೆಯುತ್ತಿರುವ ಕಾರ್ವಾನ್ ಅಂಡರ್-19 ಗ್ಲೋಬಲ್ ಲೀಗ್ ಟಿ- 20 ಪಂದ್ಯದಲ್ಲಿ ದಾಖಲೆ
  • ದೆಹಲಿಯಲ್ಲಿ ಜನಿಸಿರುವ U-19 UAE ತಂಡದ ಎಡಗೈ ಸ್ಪಿನ್ನರ್ ಹರ್ಷಿತ್ ಸೇಠ್ ಅಪರೂಪದ ಸಾಧನೆ
  • ಒಂದೇ ಓವರ್‌ನಲ್ಲಿ 6 ವಿಕೆಟ್ ಪಡೆಯುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿಯೇ ಯುವಕನ ಮಹತ್ವದ ಸಾಧನೆ
ಕ್ರಿಕೆಟ್ ಇತಿಹಾಸದಲ್ಲೇ ಅಪರೂಪದ ಸಾಧನೆ: ಒಂದೇ ಓವರ್‌ನಲ್ಲಿ 6 ವಿಕೆಟ್ ಪಡೆದ ದೆಹಲಿಯ ಯುವಕ..! title=
ಎಡಗೈ ಸ್ಪಿನ್ನರ್ ಹರ್ಷಿತ್ ಸೇಠ್ ಅಪರೂಪದ ಸಾಧನೆ

ದುಬೈ: ದುಬೈನಲ್ಲಿ ನಡೆಯುತ್ತಿರುವ ಕಾರ್ವಾನ್ ಅಂಡರ್-19 ಗ್ಲೋಬಲ್ ಲೀಗ್ ಟಿ- 20 ಪಂದ್ಯ(Karwan Global Twenty20 League)ದಲ್ಲಿ ಭಾರತೀಯ ಮೂಲದ ಬಾಲಕ ಹರ್ಷಿತ್ ಸೇಠ್ ಒಂದೇ ಓವರ್‌ನಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಹೌದು, ದೆಹಲಿಯಲ್ಲಿ ಜನಿಸಿರುವ U-19 UAE ತಂಡದ ಎಡಗೈ ಸ್ಪಿನ್ನರ್ ಹರ್ಷಿತ್ ಸೇಠ್ ಈ ಅಪರೂಪದ ಸಾಧನೆ ಮಾಡಿದ್ದಾರೆ.

ದುಬೈನ ಈಡನ್ ಗಾರ್ಡನ್ಸ್ ಮೈದಾನ(Eden Gardens ground in Dubai)ದಲ್ಲಿ ಅಜ್ಮಾನ್ ಕ್ರಿಕೆಟ್ ಕೌನ್ಸಿಲ್(Ajman Cricket Council) ನಡೆಸಿದ ಕ್ಲಬ್ ಪಂದ್ಯವೊಂದರಲ್ಲಿ ಒಂದೇ ಓವರ್‌ನಲ್ಲಿ 6 ವಿಕೆಟ್ ಪಡೆಯುವ ಮೂಲಕ ಹರ್ಷಿತ್ ಸೇಠ್ ಕ್ರಿಕೆಟ್ ಇತಿಹಾಸದಲ್ಲಿಯೇ ಮಹತ್ವದ ಸಾಧನೆ ಮಾಡಿದ್ದಾರೆ. ದುಬೈ ಕ್ರಿಕೆಟ್ ಕೌನ್ಸಿಲ್ ಸ್ಟಾರ್ಲೆಟ್ಸ್ ಪರ ಆಡುತ್ತಿರುವ ಅವರು ಪಾಕಿಸ್ತಾನದ ಹೈದರಾಬಾದ್‌ನ ಹಾಕ್ಸ್ ಅಕಾಡೆಮಿ RCG ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಡಬಲ್ ಹ್ಯಾಟ್ರಿಕ್ ಸೇರಿದಂತೆ ಒಟ್ಟು 8 ವಿಕೆಟ್‌(4-0-4-8) ಪಡೆಯುವ ಮೂಲಕ ಮಿಂಚಿದ್ದಾರೆ.

ಇದನ್ನೂ ಓದಿ: ರೋಹಿತ್ ನಾಯಕತ್ವದಲ್ಲಿ ಆಡಲು ವಿರಾಟ್ ನಕಾರ, ದ.ಆಫ್ರಿಕಾ ಸರಣಿಯಿಂದ ಹೆಸರು ವಾಪಸ್

ಹರ್ಷಿತ್ ಸೇಠ್(Harshit Seth) ಮಾರಕ ಬೌಲಿಂಗ್ ದಾಳಿಗೆ ನಲುಗಿದ ಪ್ರವಾಸಿ ತಂಡವು ಕೇವಲ 44 ರನ್‌ಗಳಿಗೆ ಕುಸಿತ ಕಾಣುವ ಮೂಲಕ ಹೀನಾಯ ಸೋಲು ಕಂಡಿದೆ. ಪ್ರಸಕ್ತ ಕ್ರಿಕೆಟ್‌ನಲ್ಲಿ ಬಹುತೇಕ ಅಸಾಧ್ಯವಾದ ಡಬಲ್‌ ಹ್ಯಾಟ್ರಿಕ್‌ ದಾಖಲೆಯನ್ನು ಎಡಗೈ ಸ್ಪಿನ್ನರ್ ಹರ್ಷಿತ್ ಮಾಡಿದ್ದಾರೆ. ಇದೇ ವರ್ಷದ ನ.28ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌(International Cricket)ನಲ್ಲಿ ಇಂತಹ ಘಟನೆ ಇನ್ನೂ ನಡೆದಿಲ್ಲ. ದುಬೈ ಜೆಮ್ಸ್ ಮಾಡರ್ನ್ ಅಕಾಡೆಮಿಯಲ್ಲಿ 11ನೇ ತರಗತಿ ವಿದ್ಯಾರ್ಥಿಯಾಗಿರುವ ಹರ್ಷಿತ್ 16 ವರ್ಷದೊಳಗಿನವರ ವಿಭಾಗದಲ್ಲಿ ಯುಎಇಯನ್ನು ಪ್ರತಿನಿಧಿಸಿದ್ದಾರೆ.

ಎಡಗೈ ಸ್ಪಿನ್ನರ್ ಪ್ರಸ್ತುತ UAE ಅಂಡರ್-19 ಶಿಬಿರ(U-19 UAE)ದಲ್ಲಿ ಅಂಡರ್-19 ವಿಶ್ವಕಪ್‌ನಲ್ಲಿ ಆಡುವ ಭರವಸೆ ಹೊಂದಿದ್ದಾರೆ. ದೆಹಲಿಯಲ್ಲಿ ಜನಿಸಿದ ಅವರು ಯುಎಇಯಲ್ಲಿಯೇ ವಾಸಿಸುತ್ತಿದ್ದಾರೆ. ಯಾವುದೇ ಬೌಲರ್ 1 ಓವರ್‌ನಲ್ಲಿ 6 ವಿಕೆಟ್ ಪಡೆದ ದಾಖಲೆಗಳಿಲ್ಲ. ಆದರೆ ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಅವರ ಡಬಲ್ ಹ್ಯಾಟ್ರಿಕ್ - 4 ಎಸೆತಗಳಲ್ಲಿ 4 ವಿಕೆಟ್ ಪಡೆದಿರುವುದು ಈ ಸಾಧನೆಗೆ ಹತ್ತಿರದಲ್ಲಿದೆ.

ಇದನ್ನೂ ಓದಿ: Pakistan Cricket Team: ಇಂಟರ್ನ್ಯಾಷನಲ್ ಟಿ20ಯಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ

ಸ್ಥಳೀಯ ಕ್ಲಬ್ ಪಂದ್ಯಗಳಲ್ಲಿ ಈ ರೀತಿಯ ಸಾಧನೆ ನಡೆದಿರುವ ಕೆಲವು ಉಲ್ಲೇಖಗಳಿವೆ. ಆಸ್ಟ್ರೇಲಿಯಾದ ಅಲೆಡ್ ಕ್ಯಾರಿ(Alex Carey)ಅವರು 2017ರಲ್ಲಿ ಈಸ್ಟ್ ಬಲ್ಲಾರತ್ ವಿರುದ್ಧ ನಡೆದ ಪಂದ್ಯದಲ್ಲಿ ಗೋಲ್ಡನ್ ಪಾಯಿಂಟ್ ಕ್ರಿಕೆಟ್ ಕ್ಲಬ್‌ ಪರ ಒಂದೇ ಓವರ್‌ನಲ್ಲಿ 6 ವಿಕೆಟ್ ಪಡೆದಿದ್ದರು. ಜಿ.ಸಿರೆಟ್ 1951ರಲ್ಲಿ ರಾಯಲ್ ವಾರ್ವಿಕ್‌ಷೈರ್ ರೆಜಿಮೆಂಟಲ್ ಅಸೋಸಿಯೇಶನ್ ವಿರುದ್ಧ ರೋಲ್ಯಾಂಡ್ ಯುನೈಟೆಡ್ ಪರ ಒಂದೇ ಓವರ್‌ನಲ್ಲಿ ಡಬಲ್ ಹ್ಯಾಟ್ರಿಕ್ ಸಾಧಿಸಿದ್ದರು. ವೈ.ಎಸ್.ರಾಮಸ್ವಾಮಿ ಅವರು 1930ರಲ್ಲಿ ಮದ್ರಾಸ್‌ನಲ್ಲಿ ನಡೆದ ಭಾರತೀಯ ಶಾಲಾ ಕ್ರಿಕೆಟ್‌ನಲ್ಲಿ ಇದೇ ರೀತಿಯ ಸಾಧನೆಯನ್ನು ಮಾಡಿದ್ದರು ಎಂದು ಸಂಖ್ಯಾಶಾಸ್ತ್ರಜ್ಞ ಮೋಹನ್‌ದಾಸ್ ಮೆನನ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News