'ನನ್ನ ಸಂಸಾರ ಛಿದ್ರವಾಗುತ್ತಿದೆ...' ಅಳಲು ತೋಡಿಕೊಂಡ ಸ್ಟಾರ್‌ ಕ್ರಿಕೆಟಿಗನ ಪತ್ನಿ! ಕಾರಣ ಏನು ಗೊತ್ತಾ?

Yuzi Chahal Wife Dhanashree : ಟೀಂ ಇಂಡಿಯಾ ಸ್ಟಾರ್‌ ಆಟಗಾರ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಪೋಟೋವೊಂದನ್ನು ಶೇರ್‌ ಮಾಡುವ ಟ್ರೋಲ್‌ಗೆ ಒಳಗಾಗಿದ್ದರು.. ಇದೀಗ ಈ ಬಗ್ಗೆ ಧನಶ್ರೀ ಪ್ರತಿಕ್ರಿಯಿಸಿದ್ದಾರೆ.. 

Written by - Savita M B | Last Updated : Mar 17, 2024, 02:54 PM IST
  • ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
  • ಇತ್ತೀಚೆಗೆ ಝಲಕ್ ದಿಖ್ಲಾ ಜಾ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಇವರನ್ನು ಬೆಂಬಲಿಸಲು ಚಹಾಲ್ ಕೂಡ ಬಂದಿದ್ದರು.
  • ಧನಶ್ರೀ ಇದೀಗ ಟ್ರೋಲರ್ ಗಳಿಗಾಗಿ ವಿಡಿಯೋವೊಂದನ್ನು ಶೇರ್ ಮಾಡಿ ಮೌನ ಮುರಿದಿದ್ದಾರೆ
'ನನ್ನ ಸಂಸಾರ ಛಿದ್ರವಾಗುತ್ತಿದೆ...' ಅಳಲು ತೋಡಿಕೊಂಡ ಸ್ಟಾರ್‌ ಕ್ರಿಕೆಟಿಗನ ಪತ್ನಿ! ಕಾರಣ ಏನು ಗೊತ್ತಾ? title=

Dhanashree: ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಝಲಕ್ ದಿಖ್ಲಾ ಜಾ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಇವರನ್ನು ಬೆಂಬಲಿಸಲು ಚಹಾಲ್ ಕೂಡ ಬಂದಿದ್ದರು.  

 ಸಾಕಷ್ಟು ಭಾರೀ ಟ್ರೋಲ್‌ ಆದರೂ ಡೋಂಟ್‌ ಕೇರ್‌ ಎನ್ನುವಂತಿದ್ದ ಧನಶ್ರೀ ಇದೀಗ ಟ್ರೋಲರ್ ಗಳಿಗಾಗಿ ವಿಡಿಯೋವೊಂದನ್ನು ಶೇರ್ ಮಾಡಿ ಮೌನ ಮುರಿದಿದ್ದಾರೆ.. ಇತ್ತೀಚೆಗೆ, ಡ್ಯಾನ್ಸ್‌ ಕೋರಿಯೋಗ್ರಾಫರ್ ಪ್ರತೀಕ್ ಉಟೇಕರ್ ಅವರೊಂದಿಗಿನ ಧನಶ್ರೀ ಫೋಟೋ ವೈರಲ್ ಆಗಿತ್ತು.. ಅದರಲ್ಲಿ ಇವರಿಬ್ಬರೂ ಹೆಚ್ಚು ಕ್ಲೋಸ್‌ ಆಗಿ ಪೋಸ್‌ ಕೊಟ್ಟಿದ್ದರು.. ಇದೇ ಫೋಟೋಗೆ ಧನಶ್ರೀ ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ-IPL 2024: ವಿದೇಶಕ್ಕೆ ಐಪಿಎಲ್‌ ಪಂದ್ಯಾವಳಿ ಸ್ಥಳಾಂತರಿಸುವ ಬಗ್ಗೆ ಜಯ್ ಶಾ ಮಹತ್ವದ ಹೇಳಿಕೆ!

ಈ ಟ್ರೋಲ್‌ ಬಗ್ಗೆ ಮೌನ ಮುರಿದ ಧನಶ್ರೀ "ಮೊದಲು ಕೇಳಿ ನಂತರ ಮನುಷ್ಯರಾಗಿ.. ಯಾವುದೇ ನಿರ್ಧಾರ ಅಥವಾ ಅಭಿಪ್ರಾಯವನ್ನು ನೀಡುವುದು ತುಂಬಾ ಸುಲಭ... ನನ್ನ ಜೀವನದಲ್ಲಿ ನಾನು ಎಂದಿಗೂ ಟ್ರೋಲ್‌ಗಳು ಅಥವಾ ಮೀಮ್‌ಗಳಿಗೆ ತಲೆಕೆಡಿಸಿಕೊಂಡಿಲ್ಲ.. ಏಕೆಂದರೆ ಇತ್ತೀಚಿನವರೆಗೂ ಈ ಟ್ರೋಲ್ ಆದಾಗ ನಾನು ಅದನ್ನು ಇಗ್ನೋರ್‌ ಮಾಡಿದ್ದೆ.. ಆದರೆ ಈ ಬಾರಿ ಟ್ರೋಲಿಂಗ್ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ.. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಿಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ, ಹಾಗಂತ ನೀವು ನಮ್ಮ ಹಾಗೂ ಕುಟುಂಬದ ಭಾವನೆಗಳನ್ನು ಮರೆತು ವರ್ತಿಸಬೇಡಿ. ನಿಮ್ಮ ತಾಯಿ, ನಿಮ್ಮ ಸಹೋದರಿ, ನಿಮ್ಮ ಸ್ನೇಹಿತೆ, ನಿಮ್ಮ ಹೆಂಡತಿಯಂತೆ ನಾನು ಕೂಡ ಮಹಿಳೆ ಎಂಬುದನ್ನು ಮರೆಯಬೇಡಿ. ಮತ್ತೆ ಈ ರೀತಿ ಮಾಡಬೇಡಿ" ಎಂದಿದ್ದಾರೆ.

ಇನ್ನು  ಚಾಹಲ್ ಸದ್ಯ ಮುಂಬರುವ ಐಪಿಎಲ್ 2024ಕ್ಕೆ ತಯಾರಾಗಿದ್ದು.. ರಾಜಸ್ಥಾನ್ ರಾಯಲ್ಸ್ ಪರ ಅಖಾಡಕ್ಕಿಳಿಯಲಿದ್ದಾರೆ.. ಟಿ20 ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ ಆಗಿರುವ ಚಾಹಲ್145 ಪಂದ್ಯಗಳಲ್ಲಿ 7.66 ಎಕಾನಮಿ ರೇಟ್‌ನಲ್ಲಿ 187 ವಿಕೆಟ್‌ಗಳನ್ನು ಪಡೆದಿದ್ದಾರೆ. 

ಇದನ್ನೂ ಓದಿ-IPL 2024 : ಈ 11 ಆಟಗಾರರು ಕಣಕ್ಕಿಳಿದರೆ RCB ಹಣೆಬರಹ 100% ಬದಲಾಗುತ್ತೆ..! ʼಈ ಸಲ ಕಪ್‌ ನಮ್ದೆʼ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News