RR vs MI: ಮುಂಬೈ ಹ್ಯಾಟ್ರಿಕ್‌ ಸೋಲಿಗೆ ಇವರೇ ಕಾರಣವೆಂದ ಹಾರ್ದಿಕ್‌ ಪಾಂಡ್ಯ!

Indian Premier League 2024: ತಮ್ಮ ತಂಡದ ಸೋಲಿಗೆ ಒಂದಾದ ಮೇಲೊಂದರಂತೆ ವಿಕೆಟ್‌ ಕಳೆದುಕೊಂಡಿದ್ದೇ ಮುಖ್ಯ ಕಾರಣವೆಂದು ಮುಂಬೈ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಹೇಳಿದ್ದಾರೆ. ರಾಜಸ್ಥಾನವು ಈ ಪಂದ್ಯದಲ್ಲಿ ಪುನರಾಗಮನ ಮಾಡಿತ್ತು. ಆದರೆ ನಾವು ಉತ್ತಮ ಪ್ರದರ್ಶನ ನೀಡಬೇಕಿತ್ತು ಎಂದು ಹೇಳಿದ್ದಾರೆ.

Written by - Puttaraj K Alur | Last Updated : Apr 2, 2024, 08:24 AM IST
  • ರಾಜಸ್ಥಾನ್‌ ಎದುರು ತವರು ನೆಲದಲ್ಲಿ ಸೋಲು ಕಂಡ ಮುಂಬೈ ಇಂಡಿಯನ್ಸ್‌
  • ಮುಂಬೈ ಇಂಡಿಯನ್ಸ್‌ ತಂಡದ ಹ್ಯಾಟ್ರಿಕ್‌ ಸೋಲಿಗೆ ಕಾರಣವೇನು ಗೊತ್ತಾ..?
  • ಮುಂಬೈ ಸೋಲಿಗೆ ಕಾರಣ ಹೇಳಿದ ನಾಯಕ ಹಾರ್ದಿಕ್‌ ಪಾಂಡ್ಯ
RR vs MI: ಮುಂಬೈ ಹ್ಯಾಟ್ರಿಕ್‌ ಸೋಲಿಗೆ ಇವರೇ ಕಾರಣವೆಂದ ಹಾರ್ದಿಕ್‌ ಪಾಂಡ್ಯ! title=
ಸೋಲಿನ ಕಾರಣ ತಿಳಿಸಿದ ಹಾರ್ದಿಕ್‌ ಪಾಂಡ್ಯ!

Indian Premier League 2024: ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2024) 14ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಎದುರು ಮುಂಬೈ ಇಂಡಿಯನ್ಸ್‌ ಹೀನಾಯ ಸೋಲು ಕಂಡಿತು. ಈ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಹಾರ್ದಿಕ್‌ ಪಾಂಡ್ಯ ನೇತೃತ್ವದ ತಂದ ಹ್ಯಾಟ್ರಿಕ್‌ ಮುಖಭಂಗವನ್ನು ಅನುಭವಿಸಿದಂತಾಗಿದೆ. ಈ ಋತುವಿನ ತನ್ನ ಮೊದಲ ತವರು ಪಂದ್ಯದಲ್ಲಿ ಮುಂಬೈ ತಂಡವು ಗೆಲುವಿನ ಟ್ರ್ಯಾಕ್‌ಗೆ ಮರಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ರಾಜಸ್ಥಾನವು ಆತಿಥೇಯ ತಂಡವನ್ನು ಕೆಟ್ಟದಾಗಿ ಸೋಲಿಸಿತು. ಸತತವಾಗಿ ಅಭಿಮಾನಿಗಳಿಂದ ಟೀಕೆ ಎದುರಿಸುತ್ತಿರುವ ಮುಂಬೈ ನಾಯಕ ಹಾರ್ದಿಕ್ ಈ ಸೋಲಿನ ಬಳಿಕ ದೊಡ್ಡ ಹೇಳಿಕೆ ನೀಡಿದ್ದಾರೆ. ತಂಡವು ಎಲ್ಲಿ ತಪ್ಪು ಮಾಡುತ್ತಿದೆ ಮತ್ತು ಈ ಸೋಲಿಗೆ ಯಾರು ಕಾರಣವೆಂದು ಅವರು ಹೇಳಿದ್ದಾರೆ. 

ಮುಂಬೈಗೆ ಹೀನಾಯ ಸೋಲು

ರಾಜಸ್ಥಾನ್ ರಾಯಲ್ಸ್ ವಿರುದ್ಧ 6 ವಿಕೆಟ್‌ಗಳ ಸೋಲಿನ ನಂತರ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಂಡದ ಸೋಲಿಗೆ ಕಾರಣವನ್ನು ಹೇಳಿದ್ದಾರೆ. ತಮ್ಮ ತಂಡದ ಸೋಲಿಗೆ ಒಂದಾದ ಮೇಲೊಂದರಂತೆ ವಿಕೆಟ್‌ ಕಳೆದುಕೊಂಡಿದ್ದೇ ಮುಖ್ಯ ಕಾರಣವೆಂದು ಹೇಳಿದ್ದಾರೆ. ರಾಜಸ್ಥಾನವು ಈ ಪಂದ್ಯದಲ್ಲಿ ಪುನರಾಗಮನ ಮಾಡಿತ್ತು. ಆದರೆ ನಾವು ಉತ್ತಮ ಪ್ರದರ್ಶನ ನೀಡಬೇಕಿತ್ತು ಎಂದು ಹೇಳಿದ್ದಾರೆ. ಒಂದು ಹಂತದಲ್ಲಿ ಕೇವಲ ೨೦ ರನ್‌ ಗಳಿಸುವಷ್ಟರಲ್ಲಿ ನಾವು ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವು. ನಂತರವೂ ನಮ್ಮ ತಂಡ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಸೋಲು ಕಾಣಬೇಕಾಯಿತು ಎಂದು ಪಾಂಡ್ಯ ಹೇಳಿದ್ದಾರೆ. ಮುಂಬೈ ನೀಡಿದ್ದ 126 ರನ್‌ಗಳ ಗುರಿ ಬೆನ್ನತ್ತಿದ ರಾಯಲ್ಸ್ ತಂಡ ರಿಯಾನ್ ಪರಾಗ್ (ಔಟಾಗದೆ 54) ಅರ್ಧಶತಕದ ನೆರವಿನಿಂದ 15.3 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 127 ರನ್ ಗಳಿಸಿ ಜಯಭೇರಿ ಬಾರಿಸಿತು. ಸತತ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇದೀಗ ಗೆಲುವಿನ ಖಾತೆ ತೆರೆಯಲು ಹವಣಿಸುವಂತಾಗಿದೆ. 

ಇದನ್ನೂ ಓದಿ: IPL 2024 : ಅಬ್ಬರಿಸಿದ ಯಜುವೇಂದ್ರ, ಬೌಲ್ಟ್ ಬೌಲಿಂಗ್, 6 ವಿಕೆಟ್ ಗಳಿಂದ ಜಯ ಗಳಿಸಿದ ರಾಜಸ್ಥಾನ ರಾಯಲ್ಸ್

ಬ್ಯಾಟಿಂಗ್‌ ವೈಫಲ್ಯ..!

ಯುಜುವೇಂದ್ರ ಚಹಾಲ್ (11ಕ್ಕೆ 3 ) ಮತ್ತು ಟ್ರೆಂಟ್ ಬೌಲ್ಟ್ (22ಕ್ಕೆ 3 ವಿಕೆಟ್) ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಮುಂಬೈ ನಿಗದಿತ ೨೦ ಓವರ್‌ಗಳಲ್ಲಿ 9 ವಿಕೆಟ್‌ಗೆ 125 ರನ್ ಗಳಿಸಲಷ್ಟೇ ಶಕ್ತವಾಯಿತು. ವೇಗಿ ನಾಂದ್ರೆ ಬರ್ಗರ್ ಕೂಡ 32 ರನ್ ನೀಡಿ ೨ ವಿಕೆಟ್ ಪಡೆದರು. ನಾಯಕ ಹಾರ್ದಿಕ್ ಪಾಂಡ್ಯ (34) ಮತ್ತು ತಿಲಕ್ ವರ್ಮಾ (32) ಹೊರತುಪಡಿಸಿದರೆ ಮುಂಬೈನ ಯಾವ ಬ್ಯಾಟ್ಸ್‌ಮನ್‌ಗಳಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಪಂದ್ಯದ ನಂತರ ಮಾತನಾಡಿದ ಹಾರ್ದಿಕ್, ʼನಾವು ಅಂದುಕೊಂಡ ರೀತಿಯಲ್ಲಿ ಬ್ಯಾಟಿಂಗ್‌ ಮಾಡಲು ಸಾಧ್ಯವಾಗಲಿಲ್ಲ. ನಾವು 150 ಅಥವಾ 160 ರನ್‌ ಗಳಿಸುತ್ತೇವೆ ಎಂದುಕೊಂಡಿದ್ದೆ. ಆದರೆ ನನ್ನ ವಿಕೆಟ್ ಪಂದ್ಯವನ್ನು ಬದಲಾಯಿಸಿತು. ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡ ನಾವು ಸಂಕಷ್ಟಕ್ಕೆ ಸಿಲುಕಬೇಕಾಯಿತು. ಮುಂದಿನ ಪಂದ್ಯದಲ್ಲಿ ಹಳೆಯ ತಪ್ಪುಗಳನ್ನು ಸರಿಪಡಿಸಿಕೊಂಡು ಕಣಕ್ಕಿಳಿಯಬೇಕಾಗಿದೆ ಎಂದು ಹೇಳಿದ್ದಾರೆ. 

ಸೋಮವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ರಾಜಸ್ಥಾನ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 125 ರನ್‌ ಗಳಿಸಿತು. ಇದಕ್ಕುತ್ತರವಾಗಿ ರಾಜಸ್ಥಾನ್‌ 15.3 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ಕಳೆದುಕೊಂಡು 127 ರನ್‌ ಗಳಿಸುವ ಮೂಲಕ ಗೆಲುವಿನ ಗುರಿಯನ್ನು ತಲುಪಿತು.  

ಇದನ್ನೂ ಓದಿ: RR Vs MI : ಆಲೌಟ್ ಆಗುವುದರಲ್ಲೇ ಬಚಾವ್, RRಗೆ 126 ರನ್ ಗಳ ಟಾರ್ಗೆಟ್ ನೀಡಿದ MI

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News