IPL 2022 Final : RR ಬೌಲಿಂಗ್, GT ಬ್ಯಾಟಿಂಗ್ ನಡುವೆ ಫೈನಲ್ ಮ್ಯಾಚ್, ಗೆಲ್ಲಬಹುದು ಈ ಟೀಂ!

ರಾಜಸ್ಥಾನದ ಟೀಂನಲ್ಲಿ  ಅತ್ಯುತ್ತಮ ಸ್ಪಿನ್ನರ್‌ಗಳಿದ್ದಾರೆ. ಹಾಗೆ, ಗುಜರಾತ್ ಟೀಂ ಐಪಿಎಲ್‌ನ ಅತ್ಯುತ್ತಮ ಫಿನಿಶರ್ ಗಳನ್ನು ಹೊಂದಿದೆ. ಹೀಗಾಗಿ ದಿಗ್ಗಜ ಆಟಗಾರರ ನಡುವಿನ ಫೈನಲ್ ಮ್ಯಾಚ್ ರೋಚಕತೆವಾಗಿದೆ.

Written by - Channabasava A Kashinakunti | Last Updated : May 29, 2022, 12:34 PM IST
  • ಡೇವಿಡ್ ಮಿಲ್ಲರ್ ಮತ್ತು ಯುಜ್ವೇಂದ್ರ ಚಾಹಲ್
  • ಪ್ರಸಿದ್ಧ ಕೃಷ್ಣ ಮತ್ತು ಹಾರ್ದಿಕ್ ಪಾಂಡ್ಯ
  • ಈ ಭಾರಿ ಐಪಿಎಲ್ ಕಪ್ ಗೆ ಮುತ್ತಿಕ್ಕಲಿದೆ ಈ ಟೀಂ
IPL 2022 Final : RR ಬೌಲಿಂಗ್, GT ಬ್ಯಾಟಿಂಗ್ ನಡುವೆ ಫೈನಲ್ ಮ್ಯಾಚ್, ಗೆಲ್ಲಬಹುದು ಈ ಟೀಂ! title=

GT vs RR : ಐಪಿಎಲ್ 2022 ರ ಅಂತಿಮ ಪಂದ್ಯ ಇಂದು(ಮೇ 29 ರಂದು) ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ರಾಜಸ್ಥಾನದ ಬೌಲಿಂಗ್ ಮತ್ತು ಗುಜರಾತ್ ಬ್ಯಾಟಿಂಗ್ ನಡುವೆ ಪಂದ್ಯ ನಡೆಯಲಿದೆ. ರಾಜಸ್ಥಾನದ ಟೀಂನಲ್ಲಿ  ಅತ್ಯುತ್ತಮ ಸ್ಪಿನ್ನರ್‌ಗಳಿದ್ದಾರೆ. ಹಾಗೆ, ಗುಜರಾತ್ ಟೀಂ ಐಪಿಎಲ್‌ನ ಅತ್ಯುತ್ತಮ ಫಿನಿಶರ್ ಗಳನ್ನು ಹೊಂದಿದೆ. ಹೀಗಾಗಿ ದಿಗ್ಗಜ ಆಟಗಾರರ ನಡುವಿನ ಫೈನಲ್ ಮ್ಯಾಚ್ ರೋಚವಾಗಿರಲಿದೆ.

ಡೇವಿಡ್ ಮಿಲ್ಲರ್ ಮತ್ತು ಯುಜ್ವೇಂದ್ರ ಚಾಹಲ್

ಡೇವಿಡ್ ಮಿಲ್ಲರ್ ಗುಜರಾತ್ ಟೈಟಾನ್ಸ್‌ಗಾಗಿ ಅನೇಕ ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದಾರೆ. ಗುಜರಾತ್ ಪರವಾಗಿ ಮಿಲ್ಲರ್ ಫಿನಿಶರ್ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಐಪಿಎಲ್ 2022 ರ 15 ಪಂದ್ಯಗಳಲ್ಲಿ ಮಿಲ್ಲರ್ 449 ರನ್ ಗಳಿಸಿದ್ದಾರೆ. ಹೀಗಿರುವಾಗ ಫೈನಲ್  ಪಂದ್ಯದಲ್ಲಿ ಯುಜುವೇಂದ್ರ ಚಾಹಲ್ ಅವರನ್ನು ಎದುರಿಸುವುದು ಯಾವಾಗ, ಆಗ ಇಬ್ಬರ ನಡುವೆ ರೋಚಕ ಕದನ ನಡೆಯಬಹುದು. ಭಾರತದ ಪಿಚ್‌ಗಳು ಯಾವಾಗಲೂ ಸ್ಪಿನ್ನರ್‌ಗಳಿಗೆ ಹೇಳಿ ಮಾಡಿಸಿದಂತಿವೆ. ಚಾಹಲ್ ಈ ಪಿಚ್‌ಗಳ ಸಂಪೂರ್ಣ ಲಾಭ ಪಡೆದಿದ್ದಾರೆ. ಐಪಿಎಲ್ 2022ರ 16 ಪಂದ್ಯಗಳಲ್ಲಿ 26 ವಿಕೆಟ್‌ಗಳನ್ನು ಪಡೆದಿದ್ದಾರೆ. ಚಹಾಲ್ ತುಂಬಾ ಮಿತವ್ಯಯಕಾರಿ ಎಂದು ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ : IPLನಲ್ಲಿ ಕಳಪೆ ಪ್ರದರ್ಶನ ನೀಡಿದರೂ ದ. ಆಫ್ರಿಕಾ ಕ್ರಿಕೆಟ್‌ ಟೂರ್ನಿಗೆ ಎಂಟ್ರಿ ಪಡೆದ ಆಟಗಾರ!

ಪ್ರಸಿದ್ಧ ಕೃಷ್ಣ ಮತ್ತು ಹಾರ್ದಿಕ್ ಪಾಂಡ್ಯ

ಐಪಿಎಲ್ 2022ರಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಹಾರ್ದಿಕ್ ಐಪಿಎಲ್ 2022 ರ 14 ಪಂದ್ಯಗಳಲ್ಲಿ 453 ರನ್ ಮತ್ತು ಐದು ವಿಕೆಟ್ ಪಡೆದಿದ್ದಾರೆ. ಇದೀಗ ಐಪಿಎಲ್ ಪ್ರಶಸ್ತಿ ಗೆಲ್ಲಬೇಕಾದರೆ ಫೈನಲ್ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣನ ಸವಾಲನ್ನು ಮೆಟ್ಟಿ ನಿಲ್ಲಬೇಕಿದೆ. ಪ್ರಸಿದ್ಧ ಕೃಷ್ಣ ಐಪಿಎಲ್ 2022 ರ 16 ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಇವರ ಬೌಲಿಂಗ್ ಆಡುವುದು ಎಲ್ಲರಿಗೂ ಅಷ್ಟು  ಸುಲಭವಲ್ಲ. ಇವರ ನಿಧಾನಗತಿಯ ಎಸೆತಗಳಲ್ಲಿ ಬೇಗನೆ ವಿಕೆಟ್‌ಗಳನ್ನು ಕಬಳಿಸುತ್ತಾರೆ.

ಈ ಭಾರಿ ಐಪಿಎಲ್ ಕಪ್ ಗೆ  ಮುತ್ತಿಕ್ಕಲಿದೆ ಈ ಟೀಂ

ಲೀಗ್ ಹಂತದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಎರಡು ಪಂದ್ಯಗಳು ನಡೆದಿದ್ದು, ಎರಡೂ ಪಂದ್ಯಗಳಲ್ಲಿ ಗುಜರಾತ್ ಗೆದ್ದಿತ್ತು. ಹೀಗಾಗಿ, ಗುಜರಾತ್‌ನಲ್ಲಿ ಶುಭಮನ್ ಗಿಲ್, ವೃದ್ಧಿಮಾನ್ ಸಹಾ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಮತ್ತು ಹಾರ್ದಿಕ್ ಪಾಂಡ್ಯರಂತಹ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳು ಇದ್ದಾರೆ, ಇವರು ಯಾವುದೇ ಬೌಲಿಂಗ್ ಅನ್ನು ಬಡಿದು ಬಾಯಿಗೆ ಹಾಕಿಕೊಳ್ಳುತ್ತಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ RCB ತಂಡದ ವಿರುದ್ಧ ಆಡಿದೆ. ಹೀಗಾಗಿ, ರಾಜಸ್ಥಾನದ ಆಟಗಾರರಿಗೆ ಪಿಚ್ ನ ವರ್ತನೆಯ ಅರಿವಾಗಿದೆ. ಈ ಭಾರಿ ರಾಜಸ್ಥಾನ ತಂಡ ಈ ಭಾರಿ ಐಪಿಎಲ್ ಕಪ್ ಗೆ  ಮುತ್ತಿಕ್ಕುವ ಸಾಧ್ಯತೆ ಇದೆ.

ಇದನ್ನೂ ಓದಿ : MS Dhoni: IPL ಬಳಿಕ ಎಲೆಕ್ಷನ್‌ ಡ್ಯೂಟಿ ಮಾಡ್ತಿದ್ದಾರಾ ಕ್ಯಾಪ್ಟನ್‌ ಕೂಲ್‌ ಧೋನಿ?

 ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News